19th April 2024
Share

TUMAKURU: SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಮತ್ತು ವಿವಿಧ ಇಲಾಖೆಗಳ ಕನ್ವರ್ಜೆನ್ಸ್ ಯೋಜನೆಯಡಿ ತುಮಕೂರು ನಗರದ ಎಲ್ಲಾ ಇಲಾಖೆಗಳವಾರು ಜಿಐಎಸ್ ಲೇಯರ್ ಮಾಡಿ ಪ್ರತಿಯೊಂದು ಯೋಜನೆಯ ಡೇಟಾ ಅನಾಲೀಸಸ್ ಮಾಡಿ ಪ್ರತಿವಾರವೂ ವಿವಿಧ ಯೋಜನೆಗಳ ಡಿಜಿಟಲ್ ಮಾಹಿತಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ರಾಕೇಶ್‌ಕುಮಾರ್ ಪ್ರಕಟಿಸಿದರು.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಜಿಐಎಸ್ ಲೇಯರ್‌ಗಳ ಮಾಹಿತಿ ನೀಡಲು ಅಧಿಕಾರಿಗಳಿಗೆ ಹೇಳಿದಾಗ ಸಮರ್ಪಕವಾದ ಉತ್ತರ ನೀಡಲು ಸಾಧ್ಯಾವಾಗಲಿಲ್ಲ.

 ಬಹುತೇಕ ಸದಸ್ಯರು ಈ ಬಗ್ಗೆ ಕಟುವಾಗಿ ಆಕ್ಷೇಪಣೆ ವ್ಯಕ್ತಪಡಿಸಿದಾಗ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಭೂಬಾಲನ್‌ರವರು ಕಳೆದ ಸಭೆಯ ನಿರ್ಣಯದ ಮೇರೆಗೆ ತುಮಕೂರು ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್‌ಸಿಟಿ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಯೋಜನೆಗಳನ್ನು ನಾನು ಪರೀಶಿಲಿಸಿದಾಗ ಯೋಜನೆ ಓವರ್‌ಲ್ಯಾಪ್ ಆಗುವ ವಿಷಯ ತಿಳಿಯಿತು ಎಂದು ಸಭೆಗೆ ಮಾಹಿತಿ ನೀಡಿದರು.

 ಜಿಲ್ಲಾಧಿಕಾರಿಗಳು ತಕ್ಷಣ ಯಾವುದೇ ಪೇಮೆಂಟ್ ಮಾಡದೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು. ಆಯುಕ್ತರು ಮಾತನಾಡಿ ಈಗಾಗಲೇ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದು ಯೋಜನೆಯಡಿ ಜಿಐಎಸ್ ಮಾಡಿರುವ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಶಾಸಕರು ಮತ್ತು ಸಂಸದರ ಸಲಹೆ ಮೇರೆಗೆ ಜಿಲ್ಲಾಧಿಕಾರಿಗಳು ದಿನಾಂಕ:04.06.2020  ರಂದು ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಈ ಮಹತ್ತರವಾದ ನಿರ್ಣಯ ಘೋಶಿಸಿದರು.

 ಈ ಸಭೆಗೆ ಶಾಸಕರು ಮತ್ತು ಸಂಸದರು ನಾವು ಸಹ ಹಾಜರಾಗುತ್ತೇವೆ, ನಮ್ಮನ್ನು ಕರೆಯಿರಿ ಎಂದು ಸೂಚಿಸಿದರು.

ನಗರದ ಉದ್ಯಾನವನಗಳ ಜಿಐಎಸ್ ಲೇಯರ್ : ಪ್ರಥಮ ಸಭೆಯಲ್ಲಿ ನಗರದ  ಉದ್ಯಾನವನಗಳ ಜಿಐಎಸ್ ಲೇಯರ್ ಪ್ರಕಟಿಸಲು ನಿರ್ಣಯಕೈಗೊಳ್ಳಲಾಯಿತು. ಜಿಲ್ಲಾಧಿಕಾರಿಗಳು ಸಮೀಕ್ಷೆ ಮಾಡಲು ಸೂಚಿಸಿದ್ದೇನೆ ಎಂದಾಗ, ಈಗಾಗಲೇ ಜಿಲ್ಲಾಧಿಕಾರಿ ಶ್ರೀ ಉಮಾಶಂಕರ್‌ರವರು ಮತ್ತು ಟೂಡಾ ಆಯುಕ್ತ ಶ್ರೀ ಆದರ್ಶಕುಮಾರ್ ರವರ ಅವಧಿಯಲ್ಲಿ ಸಮೀಕ್ಷೆ ಮಾಡಿಸಿ ಯಾವ ಮಹಾನುಭಾವರುಗಳು ಒತ್ತುವರಿ ಮಾಡಿದ್ದಾರೆ ಎಂಬ ವಿವರವನ್ನು ಸಿದ್ಧಪಡಿಸಿದ್ದಾರೆ ಎಂದು ಕುಂದರನಹಳ್ಳಿ ರಮೇಶ್ ತಿಳಿಸಿದಾಗ, ಈ ಮಾಹಿತಿಯನ್ನು ಅಫ್ ಲೋಡ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಜಮೀನು ಒತ್ತುವರಿ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರು ಮತ್ತು ತುಮಕೂರು ಉಪವಿಭಾಗಾಧಿಕಾರಿಗಳಾದ  ಶ್ರೀ ಅಜಯ್ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸಲು ಅಗತ್ಯ ಕ್ರಮಕೈಗೊಳ್ಳಲು ಆಯುಕ್ತರಿಗೆ  ಜಿಲ್ಲಾಧಿಕಾರಿ ನಿರ್ಧೇಶನ ನೀಡಿದರು.