ತುಮಕೂರು ಜಿಲ್ಲೆಯಲ್ಲಿ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ ಆರಂಭಿಸಬೇಕು ಎಂಬ ಪರಿಕಲ್ಪನೆಯಿಂದ ಆಗಿನ ಜಿಲ್ಲಾಧಿಕಾರಿ ಶ್ರೀ ಎಸ್.ಆರ್.ಉಮಾಶಂಕರ್ ಅಧ್ಯಕ್ಷತೆಯಲ್ಲಿ ದಿನಾಂಕ: 13.06.2006 ರಂದು ತುಮಕೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಸೆಂಟರ್ ಎಂಬ ಸೊಸೈಟಿಯನ್ನು ಹುಟ್ಟು ಹಾಕಿದರು. ಸಂಸ್ಥೆಯ ಹೆಸರಿಗೆ ತುಮಕೂರು ತಾಲ್ಲೂಕು ಅಮಲಾಪುರ ಗ್ರಾಮದಲ್ಲಿ 6 ಎಕರೆ 10 ಗುಂಟೆ ಜಮೀನು ಮಂಜೂರು ಮಾಡಿಸಿ, ಸರ್ಕಾರದಿಂದ ರೂ 1 ಕೋಟಿ 30 ಲಕ್ಷ ಹಣವನ್ನು ಬಿಡುಗಡೆ ಗೊಳಿಸಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಜಮಾ ಮಾಡಲಾಗಿದೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು 2012 ರಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜೊತೆಗೆ ಈ ಜಾಗದ ಸುತ್ತಮುತ್ತ ವಿಜ್ಞಾನಗುಡ್ಡ ಮತ್ತು ಆರ್ಟಿಸಾನ್ ಹಬ್ ನಿರ್ಮಾಣದ ಕನಸು ಕಂಡಿದ್ದರು. ಆಗಿನ ಜಿಲ್ಲಾಧಿಕಾರಿ ಶ್ರೀ ಆರ್.ಕೆ.ರಾಜುರವರು ಸಹ ಸಕರಾತ್ಮಕವಾಗಿ ಸ್ಪಂಧಿಸಿದ್ದರ ಹಿನ್ನೆಲೆಯಲ್ಲಿ ಇಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳು ಆರಂಭವಾಗಿದ್ದವು. ಈ ಯೋಜನೆಗೆ ಶ್ರೀ ಕೆ. ಜೈಪ್ರಕಾಶ್‌ರವರನ್ನು ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿ ಮೌಖಿಕವಾಗಿ ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದರು.
ಜಿಲ್ಲಾಧಿಕಾರಿ ಮತ್ತು ಲೋಕಸಭಾ ಸದಸ್ಯರ ಸೂಚನೆ ಮೇರೆಗೆ ಬೆಂಗಳೂರಿನ ನಂದಿ ಡಿಸೈನ್ ಗ್ರೂಪ್‌ನ ಶ್ರೀ ಪಾಟೀಲ್ ತಂಡ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದರು. ಬೆಂಗಳೂರಿನ ಶ್ರೀ ಪ್ರದೀಪ್ ಮತ್ತು ಶ್ರೀ ಮತಿ ಅನಿತಾರವರು ಇಡೀ ತುಮಕೂರು ಜಿಲ್ಲೆ ಸುತ್ತಿ ಕುಶಲಕರ್ಮಿಗಳನ್ನು ಪತ್ತೆ ಹಚ್ಚಿದ್ದರು. ಆಗ ತುಮಕೂರು ಉಪ ವಿಭಾಗಾಧಿಕಾರಿಗಳಾಗಿದ್ದ ಶ್ರೀ ನಕುಲ್ ರವರು ಮತ್ತು ಅವರ ತಂಡ ಸರ್ಕಾರಿ ಜಾಗ ಪತ್ತೆಹಚ್ಚಿ ಯೋಜನೆಗೆ ಹಸ್ತಾಂತರಿಸಲು ಮುಂದಾಗಿದ್ದರು.
ಬೋರ್‌ವೆಲ್ ಕೊರೆಯಲಾಗಿತ್ತು, ಟಿಸಿಯನ್ನು ಅಳವಡಿಸಲಾಗಿತ್ತು, ನೆಲವನ್ನು ಸಮತಟ್ಟು ಮಾಡಿಸಲಾಗಿತ್ತು. ಗಿಡಗಳನ್ನು ಹಾಕಿಸಲಾಗಿತ್ತು, ನೀರು ನಿಲ್ಲಲು ಪಿಕ್ ಅಫ್ ನಿರ್ಮಾಣ ಮಾಡಲಾಗಿತ್ತು ಮತ್ತು ಈ ಜಮೀನಿಗೆ ಹೋಗಲು ರಸ್ತೆ ನಿರ್ಮಾಣ ಮಾಡಲಾಗಿತ್ತು. ಕೆಲಸ ಮಾಡಿದ ಸತ್ಪುರುಷರು ಈಗಲೂ ನನ್ನ ಮನೆಬಾಗಿಲಿಗೆ ಹಣ ಕೊಡಿಸಿ ಎಂದು ಬರುತ್ತಿದ್ದಾರೆ.
ಜಿಲ್ಲಾಧಿಕಾರಿ ರಾಜುರವರು ರಮೇಶ್ ಈ ಯೋಜನೆ ಅನುಷ್ಠಾನಕ್ಕೆ ನಿಮ್ಮ ಸ್ವಂತ ಕಾರಿನಲ್ಲಿ ಏಕೆ ಓಡಾಡುತ್ತಿರಿ. ನಾನೇ ಒಂದು ವಾಹನ ನೀಡುತ್ತೇನೆ. ಕಚೇರಿಯನ್ನು ಸಹ ನನ್ನ ಮನೆಯ ಒಂದು ಕೊಠಡಿಯಲ್ಲಿ ನೀಡುತ್ತೇನೆ ಇದು ಬಹಳ ಒಳ್ಳೆಯ ಯೋಜನೆ. ಶತಾಯಗತಾಯ ಯೋಜನೆ ಜಾರಿ ಮಾಡೋಣ ಎಂದಾಗ ನಾನು ಅವರಿಗೆ ಹೇಳಿದ ಮಾತು ಸೊಗಡು ಶಿವಣ್ಣನವರಿಗೆ ನಿಮ್ಮ ಮೇಲಿನ ಪ್ರೀತಿ ಜಾಸ್ತಿಯಾಗಲಿದೆ ಅದೆಲ್ಲಾ ಬೇಡ ಸಾರ್ ಎಂದು ಹಾಸ್ಯಮಾಡಿದ್ದೆ.
ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ವಿಜ್ಞಾನಗುಡ್ಡದಲ್ಲಿ ತೆಂಗಿನ ಪಾರ್ಕ್ ನಿರ್ಮಿಸಲು ರೂ 2 ಕೋಟಿ ಅನುದಾನ ಮಂಜೂರು ಮಾಡಿದ್ದರು. ರಾಜ್ಯ ಸರ್ಕಾರದ ಮುಂಗಡ ಪತ್ರದಲ್ಲಿ ಮೊಟ್ಟ ಮೊದಲ ಭಾರಿಗೆ ವಿಜ್ಞಾನ ಗುಡ್ಡದ ಹೆಸರು ಪ್ರಿಂಟ್ ಆಗಿತ್ತು.
– ಮುಂದುವರೆಯಲಿದೆ.