22nd November 2024
Share

TUMAKURU:SHAKTHIPEETA FOUNDATION

ತಜ್ಞರ ಅಭಿಪ್ರಾಯದ ಪ್ರಕಾರ ರೋಗನಿರೋಧಕ ಶಕ್ತಿ ಚೆನ್ನಾಗಿದ್ದಲ್ಲಿ ಕೋವಿಡ್ ಬರುವ ಸಾಧ್ಯತೆಯೂ ಕಡಿಮೆ ಬಂದರೂ ತೀವ್ರವಾಗಿ ಬಾಧಿಸದೆ ಶೀಘ್ರವಾಗಿ ಗುಣಮುಖವಾಗತ್ತದೆ. ಕೋವಿಡ್ ಮೊದಲನೇ ಅಲೆಯಲ್ಲಿ ಬಹುತೇಕರು ಆಯುಷ್ ಇಲಾಖೆ ಸೂಚಿಸಿದ ಕಷಾಯಗಳನ್ನು, ಸ್ಥಳೀಯ ಮನೆಮದ್ದುಗಳನ್ನು ಬಳಸಿ ಆರೋಗ್ಯವನ್ನು ಕಪಾಡಿಕೊಂಡಿದ್ದರು ಹಾಗು ಮಾನ್ಯ ಪ್ರಧಾನ ಮಂತ್ರಿಗಳೂ ಸಹ ಆಯುಷ್ ಮಾರ್ಗಸೂಚಿಯನ್ನು ಬಳಸುವಂತೆ ಕರೆಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಎರಡನೇ ಅಲೆಯ ಈ ಸಂದರ್ಭದಲ್ಲೂ ಕಷಾಯಗಳು ಮನೆಮದ್ದುಗಳನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಬಾರಿ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಒಂದು ಹೆಜ್ಜೆ ಮುಂದುವರೆದು ಆಯುಷ್ ಔಷಧಿಗಳನ್ನು ಕೋವಿಡ್ ಸೋಕಿತರಿಗೆ ನೀಡಲು ನಿರ್ಧರಿಸಿದೆ. ಈ ಔಷಧಿಗಳನ್ನು  ಮಧ್ಯಮ ಪ್ರಮಾಣದ ಲಕ್ಷಣವಿರುವ ಕೋವಿಡ್ ಸೋಂಕಿತರಲ್ಲಿ ನೀಡಿ, ಪರಿಣಾಮಕಾರಿ ಎಂದು ಸಂಶೋಧನೆಗಳಿಂದ ಸಿದ್ಧವಾಗಿರುವುದರಿಂದ, ಆಯುಷ್ ಮಂತ್ರಾಲಯವನ್ನು ನಿರ್ವಹಿಸುತ್ತಿರುವ ಮಾನ್ಯ ಶ್ರೀ ಕಿರೆನ್ ರಿಜುಜು ಅವರು ಪ್ರಕಟಣೆಯಲ್ಲಿ ಆಯುಷ್-64 ಹಾಗು ಕಬಾಸುರ ಕುಡಿನೀರ್ ಎಂಬ ಎರಡು ಆಯಷ್ ಔಷಧಿಗಳನ್ನು ಕೋವಿಡ್ ಸೋಕಿತರಿಗೆ ಈಗಿರುವ ಕ್ಲಿನಿಕಲ್ ಪ್ರೋಟೋಕಾಲ್ ಜೊತೆಗೆ ದೇಶಾದ್ಯಂತ ನೀಡಲು ವ್ಯವಸ್ಥೆಮಾಡಲಾಗುವುದು ಎಂದು ತಿಳಿಸಿರುತ್ತಾರೆ.

ಎರಡು ಆಯುಷ್ ಔಷಧಿಗಳ ತಯಾರಿಕಾ ವಿಧಾನ,ಬಳಸುವ ವಿಧಾನ ಇತ್ಯಾಧಿ ವಿವರ ಗಳನ್ನು ಆಯುಷ್ ತಜ್ಞವೈದ್ಯರಾದ ಡಾ.ಶಿವಕುಮಾರ್.ಟಿ.ಚಿತ್ರದುರ್ಗ ಇವರು ವಿವರಿಸಿದ್ದಾರೆ, ‘

ಆಯುಷ್-64 ಇದು 500ಮಿ.ಗ್ರಾಂ ಪ್ರಮಾಣದ ಮಾತ್ರೆಯಾಗಿದ್ದು ಆಯುರ್ವೇದದ ಕೇಂದ್ರೀಯ ಸಂಶೋಧನಾ ಸಂಸ್ಥೆ ಅಅಖಂS ನಿಂದ ಸಂಶೋಧಿಸಲ್ಪಟ್ಟ ಪ್ರೊಪ್ರೈಟಿ ಔಷಧಿಯಾಗಿದೆ. ಸಪ್ತಪರ್ಣ(ಹಾಲೆ), ಕಟುಕಿ(ಕಟುಕ ರೋಹಿಣಿ), ಕಿರಾತತಿಕ್ತ(ನೆಲಬೇವು), ಲತಾಕರಂಜ(ಗಜ್ಜುಗ) ಈ ಮೂಲಿಕೆüಗಳ ಪುಡಿಯನ್ನು 500ಮಿ.ಗ್ರಾನಷ್ಟು ಮಿಶ್ರಣಗೊಳಿಸಿ ಈ ಮಾತ್ರೆಗಳನ್ನು ತಯಾರಿಸಲಾಗಿದ್ದು ವೈರಸ್ ನ ಖಾಯಿಲೆ,ಮಲೇರಿಯ, ಇತರೆ ಜ್ವರಗಳಿಗೆ ಮೊದಲಿನಿಂದಲೂ ಬಳಸಲಾಗುತ್ತಿತ್ತು, ಈಗ ಸಂಶೋಧನೆಗಳಿಂದ ಕೋವಿಡ್ ನಿಗ್ರಹಿಸುವಲ್ಲಿ ಇದು ಸಮರ್ಥ ಎಂದು ತಿಳಿದುಬಂದಿದೆ. ಈ ಮಾತ್ರೆಗಳನ್ನು ದಿನಕ್ಕೆ ಎರಡುಬಾರಿ ಆಹಾರ ಸೇವಿಸಿದ  1 ಗಂಟೆ ನಂತರ ಒಂದು ಮಾತ್ರೆ ಸೇವಿಸಿ ಬೆಚ್ಚಗಿನ ನೀರನ್ನು ಕುಡಿಯಬೇಕು ಈ ರೀತಿ 14 ದಿನ ಆಯುರ್ವೇದ ವೈದ್ಯರ ಸಲಹೆಯ ಮೆರೆಗೆ ಮಾತ್ರ ಸೇವಿಸಬೇಕು.

ಕಬಾಸುರ್ ಕುಡಿನೀರ್ ಇದು ಸಿದ್ಧ ಪದ್ದತಿಯ ಔಷಧಿಯಾಗಿದ್ದು ಹೆಸರೇ ಸೂಚಿಸುವಂತೆ ಕಬಾ ಸುರ=ಕಫ + ಅಸುರ ಕುಡಿನೀರು-ಕಷಾಯ, ಬಹಳಕಾಲದಿಂದಲೂ ಇದನ್ನು ಕಫ,ಶ್ವಾಸಕೋಶದ ವ್ಯಾಧಿ ಜ್ವರದಲ್ಲಿ ಬಳಸಲಾಗುತ್ತಿತ್ತು ಕೋವಿಡ್ ನಲ್ಲೂ ಇದೇ ಲಕ್ಷಣಗಳಿರುವುದರಿಂದ ಇದನ್ನ ಮದ್ಯಮ ಲಕ್ಷಣಗಳಿರುವ ರೋಗಿಗಳಲ್ಲಿ ಪರೀಕ್ಷಿಸಲಾಗಿ ಯಶಸ್ಸು ಕಂಡಿರುವ ಕಾರಣ ಇದನ್ನು ಆಯುಷ್ ಮಂತ್ರಾಲಯದಿಂದ ದೇಶಾದ್ಯಂತ ವಿತರಿಸಲು ಅನುಮೋದಿಸಲಾಗಿದೆ ಕಬಾಸುರ ಕುಡಿನೀರ್ ಶುಂಠಿ,ಪಿಪ್ಪಲಿ(ಹಿಪ್ಪಲಿ),ಲವಂಗ,ದುಸ್ಪರ್ಶ(ನೆಲಗುಳ್ಳ),ಆಕಾರಕರಭ(ಅಕ್ಕಲಕರ), ಕೋಕಿಲಾಕ್ಷ(ಕೊಳವಳಿಕೆ), ಹರಿತಕಿ(ತಾರಿಕಾಯಿ), ವಾಸ(ಆಡುಸೋಗೆ), ಅಜವಾನ್, ಕುಷ್ಠ(ಚಂಗಲ್ ಕೋಷ್ಠ), ಗುಡೂಚಿ(ಅಮೃತಬಳ್ಳಿ), ಭಾರಂಗಿ(ಗಂಟು ಭಾರಂಗಿರಂಗಿ), ಕಾಲಮೇಘ(ನೆಲಬೇವು), ರಾಜ ಪಾಠ(ಅಗಳುಶುಂಠಿ), ಮುಸ್ತಾ(ಗೇಕಿನಗಡ್ಡೆ), ಈ ಗಿಡಮೂಲಿಕೆಗಳ ಮಿಶ್ರಣ, 5-10ಗ್ರಾಂ ನಷ್ಟು ಈ ಮಿಶ್ರಣದ ಪುಡಿಯನ್ನು 200ಮಿ.ಲಿ ನೀರಿನಲ್ಲಿ ಬೆರೆಸಿ ಅರ್ಧದಷ್ಟಾಗುವವರೆಗೆ ಕುದಿಸಿ ಕುಡಿನೀರ್(ಕಷಾಯ) ತಯಾರಿಸಿ ಕೊಳ್ಳಬೇಕು. ಇದನ್ನು 25-50 ಮಿ.ಲಿ ಯಷ್ಟು ಪ್ರಮಾಣದಲ್ಲಿ ದಿನಕ್ಕೆ ಎರಡು ಬಾರಿ ಸೇವಿಸಬಹುದಾಗಿದೆ. ಅತಿಯಾಗಿ ಸೇವಿಸಿದಲ್ಲಿ ಉಷ್ಣವಾಗುವ ಸಾಧ್ಯತೆ ಇರುವ ಕಾರಣ ಆಯುಷ್ ವೈದ್ಯರ ಸಲಹೆ ಮೇರೆಗೆ ಈ ಔಷಧಿಯನ್ನು ಬಳಸಬೇಕು.