22nd November 2024
Share

TUMAKURU:SHAKTHIPEEATA FOUNDATION

  ಕೇಂದ್ರ  ಸರ್ಕಾರ ಭಧ್ರಾ ಮೇಲ್ದಂಡೆ ಯೋಜನೆಗೆ ಎನ್.ಪಿ.ಪಿ ಯೋಜನೆಯಡಿಯಲ್ಲಿ ಅನುದಾನ ಮಂಜೂರು ಮಾಡಲು ಕ್ರಮ ಕೈಗೊಂಡ ನಂತರ, ರಾಜ್ಯ ಸರ್ಕಾರ ಚುರುಕಾಗಿದೆ, ಒಂದೊಂದೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ವಿಶೇಷ ಆಧ್ಯತೆ ನೀಡಿದೆ.

ಕೇಂದ್ರ ಸರ್ಕಾರದ ನದಿ ಜೋಡಣೆಯಲ್ಲಿ ನೇತ್ರಾವತಿ ಹೇಮಾವತಿ ನದಿ ಜೋಡಣೆ ಸೇರಿದ್ದು, ಈ ಯೋಜನೆಗೆ ಬದಲಾಗಿ  ಎತ್ತಿನಹೊಳೆ ಯೋಜನೆಯನ್ನೇ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಮುಖ್ಯಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕೇಂದ್ರಜಲಶಕ್ತಿ ಸಚಿವರಿಗೆ ಪತ್ರ ಬರೆದು ಈಗಾಗಲೇ ಮನವಿ ಮಾಡಿದ್ದಾರೆ. ಲೋಕಸಭಾ ಸದಸ್ಯರು ಮತ್ತು ಕೇಂದ್ರ ಜಲಶಕ್ತಿ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ಶ್ರೀ ಶಿವಕುಮಾರ್ ಉದಾಸಿರವರು ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್ ರವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈ ವಿಚಾರದ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯ ನಿರ್ಣಯ ಕೈಗೊಳ್ಳಬೇಕು ಎಂದು ನ್ಯಾಷನಲ್ ವಾಟರ್ ಡೆವಲಪ್ ಮೆಂಟ್  ಎಜೆನ್ಸಿಯ ಡೈರೆಕ್ಟರ್ ಜನರಲ್‍ರವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರುಗಳಾದ ಶ್ರೀಮತಿ ನಿರ್ಮಲ ಸೀತಾರಾಮನ್‍ರವರು, ಶ್ರೀ ಪ್ರಹ್ಲಾದ್ ಜೋಷಿಯವರು, ಶ್ರೀ ಸದನಂದಾಗೌಡರವರು   ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್‍ರವರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳಾದ ಶ್ರೀ ಬಿ.ಎಲ್.ಸಂತೋಷ್‍ರವರು ಮತ್ತು ಶ್ರೀ ಸಿ.ಟಿ.ರವಿರವರು  ಮಹತ್ತರವಾದ ಪಾತ್ರವಹಿಸ ಬೇಕಿದೆ.

ಎತ್ತಿನಹೊಳೆ ಯೋಜನೆಯ ವ್ಯಾಪ್ತಿಗೆ ಸುಮಾರು 8 ಜನಕ್ಕೂ ಹೆಚ್ಚು ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಬರಲಿದ್ದಾರೆ. ಅವರೆಲ್ಲರೂ ಕೇಂದ್ರದ ಮೇಲೆ ಒತ್ತಡ ತರುವುದು ಸೂಕ್ತವಾಗಿದೆ. ಒಗ್ಗಟ್ಟಾಗಿ ಲಾಭಿ ಮಾಡದೆ ಕೇಂದ್ರದ ಮಲತಾಯಿ ಧೋರಣೆ ಎಂದು ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ. ಪಕ್ಷಾತೀತವಾಗಿ ಶ್ರಮಿಸಲು ಮಂದಾಗುವರೇ ಕಾದು ನೋಡಬೇಕು?