25th April 2024
Share

TUMAKURU:SHAKTHI PEETA FOUNDATION

ಪ್ರಧಾನಿಯವರಾದ  ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆಗೆ ಅನುಗುಣವಾಗಿ, 2022 ರೊಳಗೆ ‘ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಜಿಲ್ಲೆ’ಯಾಗಿ ಘೋಶಿಸಲು, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯಕೈಗೊಂಡಿದೆ.

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು 5 ಭಾರಿ ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ, ತುಮಕೂರು ಜಿಲ್ಲೆಯ ಸಮಗ್ರ  ಅಭಿವೃದ್ಧಿಗೆ ಸಂಬಂದಿಸಿದ ಯೋಜನೆಗಳಿಗೆ ಈಗಾಗಲೇ ಶ್ರಮಿಸಿರುವ, ಶ್ರಮಿಸುತ್ತಿರುವ ಮತ್ತು ಮುಂದೆ ಶ್ರಮಿಸಲು ಇಚ್ಚಿಸಿರುವ ಪ್ರತಿಯೊಂದು ಇಲಾಖೆಯ ಯೋಜನೆಗಳ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಜೊತೆಗೆ ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಹಾಗೂ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಬಂದ ನಂತರ ಪ್ರತಿಯೊಬ್ಬ ಲೋಕಸಭಾ ಸದಸ್ಯರು ಕೈಗೊಂಡಿರುವ ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆಯ ಇಲಾಖಾವಾರು, ಯೋಜನಾವಾರು ಡಿಜಿಟಲ್ ಡಾಟಾ ಮತ್ತು ವಿವರವಾದ ವರದಿಯನ್ನು ಸಿದ್ಧಪಡಿಸಲು ಭರದ ಸಿದ್ಧತೆ ನಡೆದಿದೆ.

ಇದರಲ್ಲಿ ತುಮಕೂರು ಜಿಲ್ಲೆಯ ಪ್ರಿಂಟ್ ಮಾಧ್ಯಮ,ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ವರದಿಗಾರರು, ಸಂಪಾದಕರು ‘ಯೂ ಟ್ಯೂಬ್ ನಲ್ಲಿ ಮತ್ತು ವೆಬ್ ಪೋರ್ಟಲ್ ನಲ್ಲಿ ಪ್ರಕಟಿಸಲು’ ನಿಖರವಾದ ತಾಜಾ ಡಾಟಾದೊಂದಿಗೆ  ವರದಿ ಮಾಡಲು ಆಸಕ್ತಿ ಇರುವವರ ಜೊತೆ ಚರ್ಚಿಸಲು ಆಹ್ವಾನಿಸಲಾಗಿದೆ.

ತುಮಕೂರು ಜಿಲ್ಲಾಡಳಿತ ಮತ್ತು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಗೆ ಸಹಕರಿಸಲು, ತುಮಕೂರು ಜಿಲ್ಲೆಯ ಆನೇಕ ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಸಂಸದರ ಸುಮಾರು 440 ಅಭಿಮಾನಿಗಳು ಸಹ ಕೈಜೋಡಿಸುವ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ. ಇವರ ಜೊತೆಗೆ ಪತ್ರಕರ್ತರ ಸಹಕಾರ ಪಡೆಯಲು ಇಚ್ಚಿಸಲಾಗಿದೆ. ಉದಯೋನ್ಮುಖ ಬರಹಗಾರರು ಸಂಪರ್ಕಿಸಬಹುದು.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿಗೆ, ಪಿಪಿಪಿ ಮಾದರಿಯ ಪ್ರಸ್ತಾವನೆ ಸಲ್ಲಿಸಲು ಯೋಚಿಸಲಾಗಿದೆ. ಈ ಹಿನ್ನಲೆಯಲ್ಲಿ ಆಸಕ್ತರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಇಚ್ಚಿಸುವವರು ಸಂಪರ್ಕಿಸ ಬಹುದು.

  1. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸುಮಾರು 99 ಇಲಾಖೆಗಳು.
  2. ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳು.
  3. ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳು.

ಸೇರಿದಂತೆ ಸುಮಾರು 440 ಕ್ಕೂ ಹೆಚ್ಚು ವರದಿ ಮತ್ತು ಯೂ ಟ್ಯೂಬ್ ಡಾಕ್ಯುಮೆಂಟ್ರಿ ಸಿದ್ಧಪಡಿಸಬೇಕಿದೆ. ನನ್ನ ಚಿಂತನೆ ಸುಮಾರು 440 ಜನರ ಸಹಕಾರ  ಪಡೆಯುವುದಾಗಿದೆ.

ಮುಂದಿನವಾರ ಈ ಸಂಭಂದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು,

ತಮ್ಮ ಸಲಹೆಗಳಿಗಾಗಿ ಮನವಿ.