29th March 2024
Share

TUMAKURU:SHAKTHIPEETA FOUNDATION

 ನಾಮಕಾವಸ್ಥೆ  ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಚುರುಕು ಗೊಳಿಸುವುದು ಹೇಗೆ?

ಕೇಂದ್ರ ಸರ್ಕಾರ 2022 ರಲ್ಲಿ ಜೈವಿಕ ವೈವಿಧ್ಯ ಅಧಿನಿಯಮ 2002 ಜಾರಿಗೆ ತಂದಿದೆ. ನಮ್ಮ ರಾಜ್ಯವು 2005 ರಲ್ಲಿ ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು 2005 ನ್ನು ಜಾರಿಗೆ ತಂದಿದೆ. ದೇಶದ ಪ್ರತಿ ಜಿಲ್ಲಾ ಪಂಚಾಯತ್, ತಾಲ್ಲೋಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ           ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯನ್ನು ರಚಿಸಲಾಗಿದೆ.

ಈ ಕಮಿಟಿಗಳನ್ನು ರಚಿಸಲು ವಿಳಂಬ ಮಾಡಿದ ಹಿನ್ನಲೆಯಲ್ಲಿ NATIONAL GREEN TRIBUNAL 347/2016 ರಲ್ಲಿ ಕೇಸು ದಾಖಲಿಸಿಕೊಂಡು ಕಾಲಮಿತಿಯಲ್ಲಿ ಕಮಿಟಿಗಳನ್ನು ರಚಿಸಲು ಆದೇಶ ನೀಡಿದೆ. PEOPLE BIODIVERSITY REGISTER (PBR)  ರಚಿಸಲು ಸೂಚಿಸಿದೆ.

ತುಮಕೂರು ಜಿಲ್ಲೆಯಲ್ಲೂ ದಿನಾಂಕ:12.07.2021 ರೊಳಗೆ 330 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 65 ಗ್ರಾಮಪಂಚಾಯಿತಿಗಳಲ್ಲಿ PBR ಅನುಮೋದನೆ ಆಗಿದೆ. ಉಳಿದವು ವಿವಿಧ ಹಂತದಲ್ಲಿವೆ. ಇದೇ ರೀತಿ 11 ULB ರಲ್ಲಿ ಈವರೆಗೂ ಯಾವುದೇ ಒಂದು PBR ಅನುಮೋದನೆಯಾಗಿಲ್ಲ.

ಎರಡು ತಾಲ್ಲೋಕು ಪಂಚಾಯಿತಿ  PBR ಅನುಮೋದನೆಯಾಗಿದ್ದು, ಇನ್ನೂ 8 ತಾಲ್ಲೋಕು ಪಂಚಾಯಿತಿಗಳಲ್ಲಿ PBR ಅನುಮೋದನೆ ಆಗಬೇಕಿದೆ. ಸುಮಾರು 16 ವರ್ಷಗಳಾದರೂ ಇನ್ನೂ BMC ರಚನೆಯಾಗದೆ ಇರುವುದಕ್ಕೆ NGT ಕಳವಳ ವ್ಯಕ್ತ ಪಡಿಸಿದೆ.

ಈ ಬಗ್ಗೆ ದಿನಾಂಕ:11.10.2021 ರಂದು ತುಮಕೂರು ಜಿಲ್ಲಾ ನೋಡೆಲ್ ಆಫೀಸರ್ ಆದ ಸಾಮಾಜಿಕ ಅರಣ್ಯ ಇಲಾಖೆಯ ಶ್ರೀ ನಾಗರಾಜ್ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಮೊದಲು ಜಿಲ್ಲೆಯ ಎಲ್ಲಾ 341 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರು ಹಾಗೂ KNOWLEDGE PERSONE  ರವರನ್ನು ಗುರುತಿಸಿ, ಗುರುತಿನ ಪತ್ರ ನೀಡಿ, ಜಿಲ್ಲಾ ಮಟ್ಟದ ಸಮಾವೇಶ ನಡೆಸುವುದು ಮತ್ತು ಪಿಬಿಆರ್ ನ ಲ್ಲಿರುವ ಎಲ್ಲಾ ಅಂಶಗಳ ಜಾರಿಗೆ ನಿರಂತರವಾಗಿ ಶ್ರಮಿಸಲು ಕೈಗೊಳ್ಳ ಬೇಕಾಗಿರುವ ರೂಪುರೇಷೆಗಳ ಬಗ್ಗೆಯೂ ಚರ್ಚಿಸಲಾಗಿದೆ.

ಬೆಂಗಳೂರಿನಲ್ಲಿರುವ ಕರ್ನಾಟಕ ಜೀವ ವೈವಿಧ್ಯ ಮಡಳಿ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಅನಿತಾರವರೊಂದಿಗೂ ತುಮಕೂರು ಜಿಲ್ಲೆಯಲ್ಲಿ ಈ ಕೆಳಕಂಡ 6 ಅಂಶಗಳ ಜಾರಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.

  1. ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರು ಹಾಗೂ KNOWLEDGE PERSONE  ರವರನ್ನು ಗುರುತಿಸಿ, ಗುರುತಿನ ಪತ್ರ ನೀಡಿ, ಜಿಲ್ಲಾ ಮಟ್ಟದ ಸಮಾವೇಶ ನಡೆಸುವುದು ಮತ್ತು ಡಿಜಿಟಲ್ ಡಾಟಾ ಬೇಸ್ ಮಾಡುವುದು.
  2. 341 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಔಷಧಿ ಗಿಡಗಳನ್ನು ಸಂರಕ್ಷಣೆ ಮಾಡಲು ಒಂದು ಕಡೆ ಡೆಮೋ ಪ್ಲಾಟ್ ಹಾಗೂ ನರ್ಸರಿ ಮಾಡುವುದು ಮತ್ತು ಡಿಜಿಟಲ್ ಡಾಟಾ ಬೇಸ್ ಮಾಡುವುದು.
  3. 341 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳು, ಕರಾಬುಹಳ್ಳಗಳ  ಜಿಐಎಸ್ ಆಧಾರಿತ ನಕ್ಷೆ ಸಿದ್ಧಪಡಿಸಿ, ಒತ್ತುವರಿ ತೆರವು ಮತ್ತು ಸಮಗ್ರ ಅಭಿವೃದ್ಧಿ ಪಡಿಸಲು ಡಿಜಿಟಲ್ ಡಾಟಾ ಬೇಸ್ ಮಾಡುವುದು.
  4. 341 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳಿಗೆ ನದಿ ನೀರು ತುಂಬಿಸಲು ‘ಊರಿಗೊಂದು ಆ ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ನದಿ ನೀರು ತುಂಬಿಸಲು ಜನಜಾಗೃತಿ ಮಾಡುವುದು.
  5. ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ವಾಟರ್ ಬಾಡಿಗಳು ಮಳೆ ನೀರಿನಿಂದ ಎಷ್ಟು ಸಾಮಾಥ್ರ್ಯದ ನೀರಿನಿಂದ ತುಂಬುತ್ತವೆ ಎಂಬ ಬಗ್ಗೆ  ಡಿಜಿಟಲ್ ಡಾಟಾ ಬೇಸ್ ಮಾಡುವುದು.
  6. 352 BMC ಚುರುಕುಗೊಳಿಸಲು ನಿರಂತರವಾಗಿ ತರಬೇತಿ ನೀಡುವುದು ಹಾಗೂ ಬಿಎಂಸಿ ಮಾನಿಟರಿಂಗ್ ಸೆಲ್ ಮಾಡುವುದು.
  7. 352 PBR ಗಳನ್ನು ಮೌಲ್ಯಮಾಪನ ಮಾಡುವುದು

ಶ್ರೀ ಗುರುಸಿದ್ದರಾಧ್ಯ, ಶ್ರೀ ಗುಂಡಪ್ಪ, ಶ್ರೀ ಪ್ರಮೋದ್, ಶ್ರೀ ಹುಸೇನ್ ಮತ್ತು ಶ್ರೀ ಗೋವಿಂದಪ್ಪನವರು ಇದ್ದರು.