26th March 2024
Share

TUMAKURU:SHAKTHIPEETA FOUNDATION                 

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನಲ್ಲಿ ಹೆಚ್.ಎ.ಎಲ್ ವತಿಯಿಂದ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಬಹುದೊಡ್ಡ ಸುದ್ದಿ ಮಾಡಿದೆ. ಮತ್ತೆ ಈಗ ಯುದ್ಧ ವಿಮಾನ ಉತ್ಪಾದನಾ  ಘಟಕ ಆರಂಭಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರವರ ಬಳಿ ಚರ್ಚಿಸಿದ್ದಾರೆ.

ಯುದ್ಧ ವಿಮಾನ ಘಟಕ ಮಾಡಿದರೇ ಏರ್ ಪೋರ್ಟ್ ಸಹ ಆಗಲೇ ಬೇಕಿದೆ. ರನ್ ವೇ ಇಲ್ಲಿ ಬಹಳ ಮುಖ್ಯ. ಎಷ್ಟು ಉದ್ದದ ರನ್‍ವೇ ಅಗತ್ಯ ಎಂಬುದರ ಮೇಲೆ ಜಮೀನಿನ ಉದ್ದ ಲೆಕ್ಕಾ ಹಾಕುತ್ತಾರಂತೆ. ಮೋದಿಯವರೇ ಪಿಎಂಓ ಕಚೇರಿಯಿಂದ ಯೋಜನೆಯ ಮಾನಿಟರಿಂಗ್ ಮಾಡುತ್ತಿರುವುದು ವಿಶೇಷ?

ಸೂಕ್ತ ಜಮೀನು ಗುರುತಿಸಲು ಈಗಾಗಲೇ ತುಮಕೂರು ಜಿಲ್ಲಾಧಿಕಾರಿಯವರಾದ ಶ್ರೀ ವೈ.ಎಸ್.ಪಾಟೀಲ್ ರವರಿಗೆ ಸಂಸದರು ಪತ್ರ ಬರೆದಿದ್ದಾರೆ. ಮೌಖಿಕವಾಗಿ ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ರವರು, ಗುಬ್ಬಿ ತಹಶೀಲ್ಧಾರ್ ಶ್ರೀ ಮತಿ ಆರತಿ ಯವರಿಗೆ ಸೂಚಿಸಿದ್ದಾರೆ.

ಹೆಚ್.ಎ.ಎಲ್ ಘಟಕದಲ್ಲಿ ಸಭೆ ನಡೆದ ನಂತರ ಸುತ್ತಮುತ್ತಲಿನ ಜನ ಗಾಬರಿಯಾಗಿದ್ದಾರೆ. ಎಲ್ಲಾ ಪಕ್ಷಗಳ ನಾಯಕರ ಬಳಿ ಸುತ್ತಾಡುತ್ತಿದ್ದಾರೆ. ಬಸವರಾಜ್ ರವರು ರೈತರ ಜಮೀನಿಗೆ ಬದಲಾಗಿ ಇತರೆ ಸರ್ಕಾರಿ ಜಮೀನು ಹುಡುಕುವತ್ತಾ ಗಮನ ಹರಿಸಿದ್ದಾರೆ. ರೈತರು ನೀರಾಳವಾಗಿ ಇರಲು ಸಲಹೆ ನೀಡಿದ್ದಾರೆ.

ಸುತ್ತಮುತ್ತಲಿನ ರೈತರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರ ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಶ್ರೀ ಎಸ್.ಆರ್.ಶ್ರಿನಿವಾಸ್ ರವರ ಬಳಿ ಹೋಗಿದ್ದರಂತೆ. ಅವರಿಬ್ಬರೂ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಕಡೆ ಬೆಟ್ಟು ಮಾಡಿದರು ಎಂಬ ಸುದ್ದಿ ಹರಿದಾಡುತ್ತಿದೆ.

 ಪಕ್ಷಬೇಧ ಮತ್ತು ಇತರೆ ವೈಮನಸ್ಯ ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಯುದ್ಧ ವಿಮಾನ ಘಟಕ ಆರಂಭಿಸಲು ಸಹಕರಿಸುವುದು ಅಗತ್ಯವಾಗಿದೆ. 

ಇದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ, ಇಲ್ಲಿ ಶ್ರೀ ಜೆ.ಸಿ.ಮಾಧುಸ್ವಾಮಿಯವರ ಪಾತ್ರ ಮಹತ್ತರವಾಗಿದೆ. ಕಾನೂನು ಸಚಿವರು ಅವರು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮೂಲಭೂತ ಸೌಕರ್ಯ ಒದಗಿಸಿದಾಗ ಇಂತಿಷ್ಟು ಉದ್ಯೋಗ ನೀಡಲು ಕಾನೂನು ರೂಪಿಸ ಬಹುದೇ ಎಂಬ ಬಗ್ಗೆ ವಿಶೇಷ ಗಮನಹರಿಸ ಬೇಕಿದೆ. ಡಾ.ಸರೋಜನಿ ಮಹಿಷಿ ವರದಿ ಕೇಂದ್ರದ ಯೋಜನೆಗಳಿಗೂ ಅನ್ವಯ ಆಗುತ್ತದೆಯೇ ಎಂಬ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ.

ಶ್ರೀ ಡಾ.ಜಿ.ಪರಮೇಶ್ವರ್ ರವರ ನೇತೃತ್ವದ ಕಾಂಗ್ರೆಸ್ ತಂಡವೂ ಹೆಚ್.ಎ,ಎಲ್ ಗೆ ಇತ್ತೀಚೆಗೆ ಭೇಟಿ ಮಾಡಿದೆ. ವಿಶೇಷವಾಗಿ ಸ್ಥಳೀಯರ ಉದ್ಯೋಗದ ಬಗ್ಗೆ ಮಾತನಾಡಿರುವುದು ಸ್ವಾಗಾತಾರ್ಹ. ಆದರೇ ಘಟಕದ ವಿಸ್ತರಣೆ ಬಗ್ಗೆ ಮೌನ ಏಕೆ ಎಂಬುದು ಗೊತ್ತಾಗಿಲ್ಲ. ಸ್ಪಷ್ಟತೆ ಅಗತ್ಯವಾಗಿದೆ.

ಪಕ್ಷಾತೀತವಾಗಿ ಎಲ್ಲರೂ ಈ ಬಗ್ಗೆ ಯಾವ ತಂತ್ರ ರೂಪಿಸ ಬಹುದು ಎಂಬ ಕಡೆ ಸಮಾಲೋಚನೆ ನಡೆಸಬೇಕಿದೆ. ಇಷ್ಟರಲ್ಲಿಯೇ ಒಂದು ಸಭೆ ನಡೆಸಲು ಸಂಸದರು ಯೋಚಿಸುತ್ತಿದ್ದಾರೆ. ನನ್ನ ಹುಟ್ಟೂರು ಯೋಜನೆ ಯಾರು ಏನಂದರೂ ಮುನ್ನುಗಲೇ ಬೇಕು?

ಉದ್ಯೋಗದ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲವೇ ಇಲ್ಲ. ಬೀದಿಗಿಳಿದು ಹೋರಾಟ ಮಾಡಲೇ ಬೇಕಿದೆ. ನಿರುದ್ಯೋಗಿಗಳು ಯಾರಿಗಾದರೂ ದುಡ್ಡು ಕೊಟ್ಟರೇ ಪಂಗನಾಮ ಎಚ್ಚರವಿರಲಿ. ಈಗಾಗಲೇ ಕೆಲಸ ಕೊಡಿಸುವ ಶೂರರು ಶುರುವಾಗಿದ್ದಾರಂತೆ. ಎಸ್.ಪಿಯವರು ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ.

ರೈತರ ಮಕ್ಕಳಿಗೆ ಹೆಚ್.ಎ.ಎಲ್ ನಲ್ಲಿ ಉದ್ಯೋಗ ಮೋದಿಯವರೇ ಸ್ಪಷ್ಟ ಪಡಿಸಿ, ಚಳುವಳಿಗೆ ಬಿಜೆಪಿ ಪಕ್ಷದ ನಿರುದ್ಯೋಗಿಗಳೂ ಮುಂದೆ ಬಂದಿದ್ದಾರೆ. ಎಲ್ಲಾ ಪಕ್ಷಗಳ ನೇತೃತ್ವದಲ್ಲಿ ಜಂಟಿ ಹೋರಾಟ ರೂಪಿಸ ಬಹುದೇನೋ ನೋಡೋಣ?