19th April 2024
Share

TUMAKURU:SHAKTHIPEETA FOUNDATION

ದೇಶದಲ್ಲಿ ಯಾವ ಎಂಪಿ ಏನು ಮಾಡಿದ್ದಾರೋ ಗೊತ್ತಿಲ್ಲ. ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾಗಿರುವ ಶ್ರೀ ಜಿ.ಎಸ್.ಬಸವರಾಜ್ ರವರು ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್  ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಯೋಜನೆಗೆ ಚಾಲನೆ ನೀಡಿದ್ದಾರೆ.

ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು  ಸ್ಪಂಧಿಸಿ, ಸಂಸದರು ಪತ್ರ ಬರೆದ ದಿನದಂದೇ ಎಲ್ಲರಿಗೂ ಪತ್ರ ಬರೆಯುವ ಮೂಲಕ ಒಂದು ಆಂದೋಲನವನ್ನೇ ಕೈಗೊಂಡಿದ್ದಾರೆ. ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಚನ್ನಬಸಪ್ಪನವರು ಇದೊಂದು ವಿಶಿಷ್ಠವಾದ ಯೋಜನೆ, ನಮಗೂ ಮನಸ್ಸಿಗೆ ನೆಮ್ಮದಿ ತರುವ ಯೋಜನೆ ಎಂಬ ಭಾವನೆ ವ್ಯಕ್ತಪಡಿಸುವ ಮೂಲಕ ಚಾಲನೆ ನೀಡಿದ್ದಾರೆ ಎಂದರೆ ತಪ್ಪಾಗಲಾರದು.

ತುಮಕೂರು ಜಿಲ್ಲೆಯ ಎಲ್ಲಾ 352 ಬಯೋ ಮ್ಯಾನೇಜ್ ಮೆಂಟ್ ಕಮಿಟಿಯವರಿಗೂ ಕೆಲಸ ನೀಡಿದ್ದಾರೆ. ಸಮಿತಿ ರಚಿಸಿ ಮೌನವಾಗಿರುವವರಿಗೆ ನಿರಂತರವಾದ ಹೊಣೆಗಾರಿಕೆ ನೀಡಿದ್ದಾರೆ.

ಶಕ್ತಿಪೀಠ ಫೌಂಡೇಷನ್ ಈ ಯೋಜನೆಯ ಕಡತದ ಅನುಸರಣೆ ಮಾಡುವ ಮೂಲಕ ಸಂಸದರ ಕನಸಿಗೆ ಸ್ಪಂಧಿಸಲಿದೆ. ಪರಿಸರ ಆಸಕ್ತರು. ನಾಟಿ ವೈಧ್ಯರು, ಹಕೀಮರು ಮತ್ತು ಪಾರಂಪರಿಕ ವೈಧ್ಯರು ಅವರವರ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ನೊಂದಾಯಿಸಿ ಕೊಳ್ಳುವ ಮೂಲಕ ತಮ್ಮ ಕರ್ತವ್ಯವನ್ನು ಮಾಡುವ ಅಗತ್ಯತೆ ಇದೆ.

ಪಿಬಿಆರ್ ನೋಡೆಲ್ ಇಲಾಖೆಯಾದ ಸಾಮಾಜಿಕ ಅರಣ್ಯ ಇಲಾಖೆ ಸಹಕರಿಸುವುದು ಅಗತ್ಯವಾಗಿದೆ.