19th March 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದಂತೆ ತುಮಕೂರು ಜಿಲ್ಲೆಯಲ್ಲಿ ಬಯೋಡೈವರ್ಸಿಟಿ ಯೋಜನೆಗಳ ಅನುಷ್ಠಾನಕ್ಕೆ ನಾಟಿವೈಧ್ಯ, ಹಕೀಮರು ಮತ್ತು ಪಾರಂಪರಿಕ ವೈದ್ಯರ-33 ಜನರ ತಂಡ,  ಗ್ರಾಮ ಅಧ್ಯಯನ ಮಾಡುವ-33 ಜನರ ತಂಡ ಮತ್ತು ಜೀವ ವೈವಿದ್ಯ ಅಧ್ಯಯನ ಮಾಡಲು -33 ಜನರ ತಂಡ ಸೇರಿದಂತೆ ಸುಮಾರು 99 ಜನರ ‘ವಿಷನ್ ಗ್ರೂಪ್’ ಸಿದ್ಧವಾಗುತ್ತಿದೆ.

ಈ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್ ರವರು ಆಸಕ್ತರ ಎರಡು ಸಭೆಗಳನ್ನು ಮಾಡಿದ್ದಾರೆ, 11 ವಿಧಾನಸಭಾ ಕ್ಷೇತ್ರಗಳ ತಲಾ 9 ಜನರಂತೆ 99 ಜನರು ಸಹ ಕನಿಷ್ಟ 3 ರಿಂದ 4 ಬಿಎಂಸಿಗಳ ಹೊಣೆಗಾರಿಕೆ ತೆಗೆದುಕೊಳ್ಳಬೇಕಿದೆ.ಹಾಗೆಯೇ ನಿಯಮದ ಪ್ರಕಾರ ಪ್ರತಿ ಗ್ರಾಮದ ನಾಲೇಡ್ಜಬಲ್ ಪರ್ಸನ್ ರವರ ಒಂದು ವಿಭಾಗದ ಹೊಣೆಗಾರಿಕೆಯನ್ನು ಸಹ ನಿರ್ವಹಿಸಬೇಕಿದೆ.

ಇವರಿಗೆ ಸರ್ಕಾರದಿಂದ ಅಧಿಕೃತವಾಗಿ ಗುರುತಿನ ಪತ್ರ ಮತ್ತು ಪ್ರಶಸ್ತಿ ಪತ್ರವನ್ನು ನೀಡುವ ಮೂಲಕ ತುಮಕೂರು ಜಿಲ್ಲೆಯಲ್ಲಿನ ಎಲ್ಲಾ ಗ್ರಾಮಗಳ ಕನಿಷ್ಟ 5 ಜನರ ತಂಡ ರಚಿಸಿ, ನಿರಂತರವಾಗಿ ಈ ಯೋಜನೆಯಲ್ಲಿ ಪಾಲ್ಗೋಳ್ಳುವಂತೆ ಪ್ರೇರಪಣೆ ಮಾಡುವ ಸಂಕಲ್ಪ ಇವರದ್ದಾಗಿದೆ.

 ಸಂಸದರೊಂದಿಗೆ ಸಮಾಲೋಚನೆ ನಡೆಸಲು ಸಭೆಗೆ ಆಗಮಿಸಿದ್ಧ ಶ್ರೀ ಡಾ.ಎಂ.ಪಿ ಶಂಕರಪ್ಪನವರು ಗ್ರಾಮ ಅಧ್ಯಯನ ಆಸಕ್ತರ 33 ಜನರನ್ನು ಶ್ರೀ ಬೇವಿನ ಮರದ ಸಿದ್ದಪ್ಪನವರು ಜೀವ ವೈವಿದ್ಯ ಆಸಕ್ತರ 33 ಜನರನ್ನು ಮತ್ತು ಶ್ರೀ ಗುರುಸಿದ್ದರಾಧ್ಯರವರು ನಾಟಿ ವೈದ್ಯ, ಹಕೀಮರು ಮತ್ತು ಪಾರಂಪರಿಕ ವೈದ್ಯರ ಆಸಕ್ತರ 33 ಜನರನ್ನು ಹುಡುಕಿ ಪಟ್ಟಿ ಮಾಡಲು ಆರಂಭಿಸಿದ್ದಾರೆ.

ಶಕ್ತಿಪೀಠ ಫೌಂಡೇಷನ್ ಈ 99 ಜನರಿಗೂ 352 ಬಿಎಂಸಿಗಳ ಜೊತೆ ಸಮನ್ವಯ ಸಾಧಿಸಲು ಶ್ರಮಿಸಲಿದೆ. ಈ ಹಿನ್ನಲೆಯಲ್ಲಿ ದಿನಾಂಕ:08.11.2021 ರಂದು ಬೆಂಗಳೂರಿನಲ್ಲಿ ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಅನಂತ ಹೆಗ್ಗಡೆ ಆಶೀಸರ ರವರು ಮತ್ತು ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಅನಿತಾಅರೆಕಲ್ ರವರನ್ನು ಭೇಟಿಯಾದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆಯಲ್ಲಿನ ಬಯೋಡೈವರ್ಸಿಟಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮುಂದೆ ಅವರು ಯಾವ ರೀತಿ ಕಾರ್ಯಯೋಜನೆ ರೂಪಿಸುತ್ತಾರೆ ಕಾದು ನೋಡೋಣ?