22nd December 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ, ತುಮಕೂರಿನ ಶಕ್ತಿಪೀಠ ಫೌಂಡೇಷನ್ ಗೆಸ್ಟ್ ಹೌಸ್  ತೆರೆದು, ವಿಶ್ವದ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ, ಜಲಗ್ರಂಥ ಹಾಗೂ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ಹಲವಾರು ಸಭೆಗಳನ್ನು ನಡೆಸಲಾಗಿದೆ.

ವಾಕ್‍ನಲ್ಲಿ, ಲೈಬ್ರರಿಯಲ್ಲಿ, ಲಿಪ್ಟ್‍ನಲ್ಲಿ, ಜಿಮ್‍ನಲ್ಲಿ  ಸಿಕ್ಕಿದ ಎಲ್ಲರನ್ನೂ ನೀವೂ ಯಾವ ರಾಜ್ಯದವರೂ, ನೀವೂ ಯಾವ ದೇಶದವರು, ನೀವೂ ಯಾವ ಜಿಲ್ಲೆಯವರು ಎಂದೇ ಮಾತುಕತೆ ನಡೆಸುವ ಪರಿಪಾಠ ನನ್ನದಾಗಿದೆ. ಈಗಾಗಲೇ ಸಾಕಷ್ಟು ಜನ ಸ್ಪಂಧಿಸುತ್ತಿದ್ದೀರಿ. ಶಕ್ತಿಪೀಠಗಳ ಬಗ್ಗೆ ಹಲವಾರು ಜನ ಮಾಹಿತಿ ಹಂಚಿಕೊಂಡಿದ್ದೀರಿ,

ನಿಮ್ಮ ಜೊತೆಯಲ್ಲಿ ನಿಮ್ಮ ರಾಜ್ಯದಲ್ಲಿರುವ ಶಕ್ತಿಪೀಠಗಳ ಸ್ಥಳಕ್ಕೆ, ಶಕ್ತಿಪೀಠ ಫೌಂಡೇಷನ್ ಖರ್ಚುವೆಚ್ಚದಲ್ಲಿ ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಮೂಲಕ ಪಕ್ಕಾ ಶಕ್ತಿಪೀಠಗಳ ಮಾಹಿತಿ ಸಂಗ್ರಹಿಸುವ ಆಲೋಚನೆ ನನ್ನದಾಗಿದೆ.

ಹಾಗೇಯೇ ಕರ್ನಾಟಕದ 31 ಜಿಲ್ಲೆಗಳ ನಿವಾಸಿಗಳಾದ, ತಮ್ಮ ಜೊತೆಯಲ್ಲಿಯೇ ನಿಮ್ಮ ಜಿಲ್ಲೆಗಳಿಗೆ ಪ್ರವಾಸ ಮಾಡಲು ಚಿಂತನೆ ನಡೆಸಿದ್ದೇನೆ.

  1. ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಜನರೂ ಇಲ್ಲಿನ ನಿವಾಸಿಗಳಾಗಿರಬಹುದು.
  2. ಭಾರತ ದೇಶದ 37 ರಾಜ್ಯಗಳ ಹಾಗೂ ಕೇಂದ್ರಾಡಳಿತದ ಜನರೂ ಇಲ್ಲಿನ ನಿವಾಸಿಗಳಾಗಿರಬಹುದು.
  3. ವಿಶ್ವದ 108 ಶಕ್ತಿಪೀಠಗಳು ಇರುವ ಭಾರತ, ಶ್ರೀಲಂಕಾ, ನೇಪಾಳ, ಪಾಕಿಸ್ಥಾನ, ಆಪ್ಘಾನಿಸ್ಥಾನ, ಬಾಂಗ್ಲಾದೇಶ, ಟಿಬೆಟ್ ದೇಶಗಳ ಜನರೂ ನಿವಾಸಿಗಳಾಗಿರ ಬಹುದು.
  4. ತುಮಕೂರು ಜಿಲ್ಲೆಯ 300 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿನ ನಿವಾಸಿಗಳಾಗಿದ್ದಾರಂತೆ.
  5. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ವಿವಿಧ ಯೋಜನೆಗಳ ಪರಿಣಿತ ತಜ್ಞರು ಇಲ್ಲಿನ ನಿವಾಸಿಗಳಾಗಿದ್ದಾರೆ.

ಪಿಜೆಸಿÀ ನಿವಾಸಿ ಶ್ರೀ ಸಿದ್ಧಗಂಗಪ್ಪನವರು ಮತ್ತು ನಾನು ಡಾಟಾ ಸಂಗ್ರಹ ಮಾಡುತ್ತಿದ್ದೇವೆ. ದಿನಾಂಕ:23.01.2023 ಮತ್ತು 24.01.2023 ರಂದು ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೋಕು, ಮೂಕಾನನ ರೆಸಾರ್ಟ್‍ನಲ್ಲಿ ನಡೆಯುವ ಎರಡು ದಿವಸಗಳ ಕಾರ್ಯಾಗಾರಕ್ಕೆ ಭಾಗವಹಿಸಲು ಆಸಕ್ತಿ ಇರುವವರು ಉಚಿತವಾಗಿ ನೊಂದಾಯಿಸಿಕೊಳ್ಳಲು ಮನವಿ.

ರಾಜ್ಯದ 31 ಜಿಲ್ಲೆಗಳ ತಲಾ ಒಬ್ಬರು ಹಾಗೂ ವಿವಿಧ ರಾಜ್ಯಗಳ ತಲಾ ಒಬ್ಬರು ಹಾಗೂ ವಿವಿಧ ದೇಶಗಳ ತಲಾ ಒಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಮೊದಲು ನೊಂದಾಯಿಸಿ ಕೊಂಡವರಿಗೆ ಮೊದಲ ಆಧ್ಯತೆ.

ಮೂಕಾನನ ರೆಸಾರ್ಟ್ ಒಳ್ಳೆಯ ಕಾಡಿನ ಮಧ್ಯೆದಲ್ಲಿ ಇದೆ. ಸುಮಾರು ರೂ 10000 ದಿಂದ ರೂ 40000 ವರೆಗೂ ಕಾಟೇಜ್ಗಳು ಇವೆ. ಮೂಕಾನನ  ರೇಸಾರ್ಟ್ ತಂಡ ಹಾಗೂ ಸಕಲೇಶಪುರ ತಾಲ್ಲೋಕು ರೆಸಾರ್ಟ್ ಮತ್ತು ಹೋಸ್ಟೇಗಳ ಮಾಲೀಕರ ಸ್ನೇಹಿತರು, ಸುಮಾರು 125 ಜನರಿಗೆ ಉಚಿತವಾಗಿ ಎಲ್ಲಾ ವ್ಯವಸ್ಥೆ ಮಾಡಲು ಮುಂದಾಗಿರುವುದು ನಿಜಕ್ಕೂ ಅಭಿನಂದನಾರ್ಹ.

ಕರ್ನಾಟಕ ರಾಜ್ಯದವರು ತಮ್ಮ ಪ್ಲಾಟ್ ಅಕ್ಕ ಪಕ್ಕದಲ್ಲಿರುವ, ವಿವಿಧ ರಾಜ್ಯಗಳ ಹಾಗೂ ಶಕ್ತಿಪೀಠಗಳು ಇರುವ ದೇಶಗಳ ಜನರು ಇದ್ದಲ್ಲಿ ಮಾಹಿತಿ ನೀಡಲು ಶ್ರೀ ಸಿದ್ಧಗಂಗಪ್ಪನವರ ವಾಟ್ಟ್ ಅಫ್-9343777577  ಅಥವಾ ನನ್ನ ವಾಟ್ಸ್‍ಅಪ್-9886774477 ನಲ್ಲಿ ಚಾಟ್ ಮಾಡುವ ಮೂಲಕ ಸಹಕರಿಸಲು ಮನವಿ.

ನಾನೂ ಎಲ್ಲಾ ಪ್ಲಾಟ್‍ಗಳಿಗೂ ವೈಯಕ್ತಿಕವಾಗಿ ಭೇಟಿ ನೀಡಲು ಚಿಂತನೆ ನಡೆಸಿದ್ದೇನೆ.