TUMAKURU:SHAKTHIPEETA FOUNDATION
100 ನೇ ಸ್ವಾತಂತ್ರ್ಯ ದಿನದ ವೇಳೆಗೆ ಮೊದಲೇ ಭಾರತ ವಿಶ್ವ ಗುರುವಾಗಲು, ಕೇಂದ್ರ ಸರ್ಕಾರ ದಿನಕ್ಕೊಂದು ಹೊಸ, ಹೊಸ ಆಲೋಚನೆಗಳನ್ನು ಮಾಡುತ್ತಿದೆ. ದೇಶದ ಪ್ರತಿಯೊಂದು ಗ್ರಾಮದ ಪ್ರವಾಸೋಧ್ಯಮ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲು, ದೇಶದ 7 ನೇ ತರಗತಿ ನಂತರ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಕನಿಷ್ಟ 25 ಜನ ವಿದ್ಯಾರ್ಥಿ ಸದಸ್ಯರನ್ನು ಒಳಗೊಂಡ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚಿಸಲು ಆದೇಶಿಸಿದೆ.
ಈ ಮೂಲಕ ಉದ್ಯೋಗ ಸೃಷ್ಠಿ ಜೊತೆಗೆ ವಿದ್ಯಾರ್ಥಿ ದೆಸೆಯಲ್ಲಿ ದುಡಿಯುವ ಜ್ಞಾನದ ಅರಿವು ಮೂಡಿಸುವುದಾಗಿದೆ. ಇಂಡಿಯಾ @ 100 ಗೆ ಪೂರಕವಾಗಿದೆ. ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಯೋಜನೆಗಳ ಬೆನ್ನು ಹತ್ತಿದಾಗ, ಈ ಯೋಜನೆಯ ಮಾಹಿತಿ ತಿಳಿಯಿತು.
ಇದೇ ರೀತಿ ಹಲವಾರು ಯೋಜನೆಗಳು ಕಡತದಲ್ಲಿಯೇ ಸಾಯುತ್ತಿವೆ. ಅಧಿಕಾರಿಗಳು ಈ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದರಲ್ಲಿ ಹಿಂದೆ ಬೀಳುತ್ತಾರೆ. ಅದೇನೆ ಇರಲಿ ಈ ಬಗ್ಗೆ ರಾಜ್ಯ ಪ್ರವಾಸೋಧ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರೊಡನೆ ಸಮಾಲೋಚನೆ ನಡೆಸಿ, ಸಂಭಂದಿಸಿದ ಎಲ್ಲಾ ಇಲಾಖೆಗಳ ಸಮನ್ವಯತೆಯೊಂದಿಗೆ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಕನಸಿಗೆ ಚಾಲನೆ ನೀಡಲು ಶ್ರಮಿಸಲಾಗುವುದು.
ಯುಜಿಸಿಯವರು ಈಗಾಗಲೇ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯದಲ್ಲಿ ಯಾವ ಮಟ್ಟದಲ್ಲಿ ಜಾರಿಯಾಗಿದೆ ಎಂಬ ಮಾಹಿತಿ ಸಂಗ್ರಹಿಸ ಬೇಕಿದೆ.
ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ತರಲು ಸ್ಟ್ರಾಟಜಿ ಮಾಡುವ ಹಿನ್ನೆಲೆಯಲ್ಲಿ ಹಾಗೂ ‘ಇಂಡಿಯಾ @ 100’ ಗೆ ಪೂರಕವಾಗಿ, ‘ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಸಿದ್ಧಪಡಿಸಲು, ಇದೇ ಮಾದರಿಯಲ್ಲಿನ ವಿದ್ಯಾರ್ಥಿ ಸಂಘಟನೆಗಳನ್ನು ಬಳಸಿಕೊಳ್ಳಲು ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
- ಶಾಲಾ-ಕಾಲೇಜುಗಳಲ್ಲಿನ ಇಕೋಕ್ಲಬ್.
- ಶಾಲಾ-ಕಾಲೇಜುಗಳಲ್ಲಿನ ಎನ್.ಎಸ್.ಎಸ್.
- ಶಾಲಾ-ಕಾಲೇಜುಗಳಲ್ಲಿನ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್
- ಇಂಜಿನಿರಿಂಗ್ ಕಾಲೇಜುಗಳ ಅಕ್ಟಿವಿಟಿ ಪಾಯಿಂಟ್.
ಇನ್ನೂ ಯಾವುದಾದರೂ ಸಂಘಟನೆಗಳು ಇದ್ದಲ್ಲಿ ಅಥವಾ ಈ ಬಗ್ಗೆ ಜ್ಞಾನವುಳ್ಳವರು ತಮ್ಮ ಅಮೂಲ್ಯವಾದ ‘ಜ್ಞಾನದಾನ’ ಮಾಡಲು ಸಂಪರ್ಕಿಸ ಬಹುದಾಗಿದೆ.