TUMAKURU:SHAKTHIPEETA FOUNDATION
ಗುಬ್ಬಿ ಸಿಐಟಿಯಲ್ಲಿ, ದೇಶದ ವಿವಿಧ ಮೂಲೆಗಳಿಂದ ಬಂದ ಎಂಬಿಎ ವಿದ್ಯಾರ್ಥಿಗಳು ಮತ್ತು ಆಸಕ್ತ ಸಿಐಟಿ ವಿದ್ಯಾರ್ಥಿಗಳೊಂದಿಗೆ ‘Innovatin For Tomorrow; A Panel Discussion With Startup Entrepreneurs Shaping The Future’ ಬಗ್ಗೆ ಒಂದು ಸಂವಾದದಲ್ಲಿ ಭಾಗವಹಿಸಿದ್ದೆ.
ಸಂವಾದದಲ್ಲಿ ನಾನು ಗ್ರಾಮೀಣ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ದುಡಿಮೆ ಜೊತೆಗೆ, ಸಮಾಜ ಸೇವೆ, ಇಂಡಿಯಾ @ 100, ಇತ್ಯಾದಿ ವಿಚಾರಗಳಲ್ಲಿ ಯಾವ ರೀತಿ ಸ್ಟಾಟ್ ಅಪ್ ಆರಂಭಿಸ Àಬಹುದು ಎಂಬ ಬಗ್ಗೆ ಮಾತನಾಡಿದೆ.
ಮೂಕಾನನ ರೆಸಾರ್ಟ್‍ನ ಶ್ರೀ ವೇದಾನಂದಾಮೂರ್ತಿರವರು ಪ್ರವಾಸೋಧ್ಯಮ ಅವಕಾಶಗಳ ಬಗ್ಗೆ ಮಾತನಾಡಿದರು.
ಶ್ರೀ ಉತ್ತಮ್ ತಿವಾರಿರವರು. ಶ್ರೀ ಜೀವನ್‍ರವರು, ಶ್ರೀ ದೈವಿಕ್‍ರವರು, ಶ್ರೀ ಚೇತನ್ ಮೂರ್ತಿರವರು ಅವರವರ ಉದ್ದಿಮೆಯ ಸಕ್ಸಸ್ ಸ್ಟೋರಿಯ ಅನುಭವಗಳನ್ನು ಹಂಚಿಕೊಂಡರು.
ಶ್ರೀ ಚೇತನ್ ಬಾಲಾಜಿರವರು, ಶ್ರೀಮತಿ ಸ್ವಾತಿರವರು, ಶ್ರೀಮತಿ ಚೈತನ್ಯರವರು, ಶ್ರೀ ಹಿತೇಶ್ ರವರು, ಶ್ರೀ ಗುರುರವರು ಇತರರು ಇದ್ದರು.
ಸಂವಾದದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದವರೆಲ್ಲಾ ವಿದ್ಯಾಥಿಗಳನ್ನು ನೀವೂ ಉದ್ಯೋಗಿಗಳಾಗ ಬಯಸುತ್ತಿರೋ ಅಥವಾ ಉದ್ಯಮಪತಿಗಳಾಗಿ ಬಯಸುತ್ತೀರೋ ಎಂಬ ಪ್ರಶ್ನೆಯನ್ನು ಕೇಳಿದಾಗ, ಬಹುತೇಕ ಭಾಗವಹಿಸಿದ್ದ ಶೇ 90 ಕ್ಕಿಂತ ಹೆಚ್ಚಿನ ಜನ ಉದ್ಯೋಗಿಗಳಾಗುವ ಬಯಕೆ ವ್ಯಕ್ತಪಡಿಸಿದಾಗ ನಿಜಕ್ಕೂ ಆಶ್ಚರ್ಯವಾಯಿತು.
ಏಕೆ ಸ್ವಂತ ಉದ್ದಿಮೆ ಆರಂಭಿಸಲು ಹಿಂಜರಿಯುತ್ತಿದ್ದೀರಿ ಎಂಬ ಪ್ರಶ್ನೆಗೆ ಲ್ಯಾಕ್ ಆಪ್ ನಾಲೇಡ್ಜ್, ಆರ್ಥಿಕ ತೊಂದರೆ, ವಿವಿಧ ಇಲಾಖೆಗಳ ಲಂಚದ ಹಾವಳಿ ಹಾಗೂ ನಮ್ಮನ್ನು ಮನುಷ್ಯರ ರೀತಿ ನೋಡದೆ, ಸಿಕ್ಕಿದ್ದವರೆಲ್ಲಾ ಸಿಕ್ಕಷ್ಟು ಕಿತ್ತು ತಿನ್ನುವ ವ್ಯವಸ್ಥೆಯನ್ನು ನೋಡಿ, ನಮ್ಮ ಸ್ನೇಹಿತರಿಂದ ಕೇಳಿ ನಮಗೆ ಸಾಕಾಗಿದೆ.
ಅರಾಮವಾಗಿ ನೌಕರಿ ಮಾಡುವುದು ಉತ್ತಮ ಎನಿಸಿದೆ, ಎಂದು ಮನಬಿಚ್ಚಿ ವಿದ್ಯಾರ್ಥಿಗಳು ಮಾತನಾಡಿದ ವಿಚಾರ ಬಹಳ ಗಂಭೀರವಾಗಿತ್ತು.
ಈ ಬಗ್ಗೆ ಉನ್ನತ ಅಧಿಕಾರಿಗಳು ಹಾಗೂ ಪರಿಣಿತರ ಸಲಹೆಗಳೊಂದಿಗೆ ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರ್ಕಾರದ ಯೋಜನೆಗಳು, ಇರುವ ಅವಕಾಶಗಳು, ಸಂಪನ್ಮೂಲಗಳು, ಉದ್ದಿಮೆ ಆರಂಭಿಸುವಾಗ ಬರುವ ಸಮಸ್ಯೆಗಳನ್ನು ಹೇಗೆ ಎದುರಿಸಿ ನಿಲ್ಲುವುದು,
ಸಕ್ಸಸ್ ಸ್ಟೋರಿಗಳ ಜೊತೆಗೆ ಅವರು ಈ ಮಟ್ಟಕ್ಕೆ ಬೆಳೆಯುವ ಹಾದಿಯಲ್ಲಿ ಬಂದ ಸಮಸ್ಯೆಗಳನ್ನು ಯಾವ ರೀತಿ ಬಗೆ ಹರಸಿ ಕೊಂಡೆವು ಎಂಬ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದು ಬಹಳ ಮುಖ್ಯವಾಗಲಿದೆ.
ಎನ್.ಇ.ಪಿ.ಯಲ್ಲಿ ನ ಅಂಶಗಳ ಬಗ್ಗೆಯೂ ವಿಶೇಷ ಅರಿವು ಮೂಡಿಸುವುದು ಸೂಕ್ತವಾಗಿದೆ ಎನಿಸಿತು.
ಕೆಲಸದ ಒತ್ತಡದಿಂದ ಈ ಸಂವಾದದಲ್ಲಿ ಸಿಐಟಿಯ ಶ್ರೀ ಸುರೇಶ್ ರವರು ಭಾಗವಹಿಸಿರಲಿಲ್ಲ. ನಾನು ಕಾರ್ಯಕ್ರಮ ಮುಗಿದ ನಂತರ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ಮೂಕಾನನ ರೆಸಾರ್ಟ್‍ನಲ್ಲಿ , ರಾಜ್ಯದ ಹಾಗೂ ವಿವಿಧ ರಾಜ್ಯಗಳ ಪರಿಣಿತರನ್ನು ಆಹ್ವಾನಿಸಿ, ಎರಡು ರಾತ್ರಿ ಮತ್ತು ಮೂರು ಹಗಲು, ತಂಗಿ, ಸಮಾಲೋಚನೆ ನಡೆಸಿ, ಸ್ವಯಂ ಉದ್ಯೋಗ ಆರಂಭಿಸಲು ವಿದ್ಯಾರ್ಥಿಗಳಿಗೆ ಹೇಗೆ ಆತ್ಮ ವಿಶ್ವಾಸ ಮೂಡಿಸ ಬಹುದು ಎಂಬ ಬಗ್ಗೆ ಒಂದು ನಿರ್ದಿಷ್ಟ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಿದೆವು.
ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ನಲ್ಲಿ ಇದು ಒಂದು ಪ್ರಮುಖ ಅಂಶವಾಗಿದೆ. ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರವಾರು, ಎಲ್ಲಾ ಶಾಲಾ ಕಾಲೇಜುಗಳಲ್ಲೂ ಇಂಥಹ ಕಾರ್ಯಕ್ರಮ ಆಯೋಜಿಸಲು ಒಂದು ಮಾರ್ಗಸೂಚಿ ಸಿದ್ಧಪಡಿಸುವ ಅಗತ್ಯವಿದೆ.
ವಿದ್ಯಾರ್ಥಿಗಳ ಹಂತದಲ್ಲಿ ಆತ್ಮ ವಿಶ್ವಾಸ ಮೂಡಿಸುವ ಮಾರ್ಗದರ್ಶಿ ಸೂತ್ರ. ಈ ಸಂವಾದದ ಪ್ರಮುಖ ಪಲಿತಾಂಶ/OUT – PUT ಆಗಬೇಕಿದೆ ಎನಿಸಿತು.
ಆಸಕ್ತರು ಸಹಕರಿಸಲು ಮನವಿ
ವಿವಿಧ ಭಾಗಗಳಿಂದ ಈ ಕೆಳಕಂಡ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- Animesh Mishra – Bubaneshwar
- Anmol Batro – Nagpur
- Anshit Omkar Das – Bubaneshwar
- Faizali Shaikh – Pune
- Gaurav Bhardwaj – Udaipur
- Hiren Dave – Surat
- Isha Sharma – Narsinghpur, MP
- Kashvi Rajesh – Chikmagalur
- Yasir Arafat – Katihar, Bihar
- Nikhil HL – Mysore
- Nithin Pujari – Mumbai
- Palak Arora – Jabalpur, MP
- Piyush Mangal – Vapi, Gujarat
- Pranav Anand – Delhi
- Pranita Mahajan – Burhanpur, MP
- Rajeeb Dutta – Dimapur, Nagaland
- Saksham Goyal – Shivpuri, MP
- Sharada Nair – Kochi
- Shivam Yadav – Thane
- Shraddha Heganna – Pune
- Shreya Rastogi – Farukabad, UP
- Shubhangi Bhargava – Shivpuri, MP
- Vidhi Choubey – Raipur
- Vrinda Kulkarni – Hubli
- Laxmi Wadighare – Nagpur