22nd November 2024
Share

TUMAKURU:SHAKTHIPEETA FOUNDATION

ಶಿವಶಕ್ತಿ ಅಭಿವೃದ್ಧಿಯ ಸಂಕೇತ ಇದು ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ವಾಣಿ. ಇಸ್ರೋ ವಿಜ್ಞಾನಿಗಳು ಚಂದ್ರಯಾನದಲ್ಲಿ ವಿಕ್ರಮ್ ಇಳಿಸಿದ ಸ್ಥಳಕ್ಕೆ ಶಿವಶಕ್ತಿ ನಾಮಕಾರಣ ಮಾಡಿದ ಸಂದರ್ಭದಲ್ಲಿ, ದಿನಾಂಕ:26.08.2023 ರಂದು ಬೆಂಗಳೂರಿನ ಇಸ್ರೋದಲ್ಲಿ ಹೇಳಿದ ಮಾತು.

ನನಗೆ ಕೆಲವು ಸ್ನೇಹಿತರು ಹೇಳುತ್ತಿದ್ದರು, ಶಕ್ತಿಪೀಠ ಕ್ಕೂ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕ್ಕೂ ಏನು ಸಂಭಂಧ. ಅವರ ಮಾತಿಗೆ ನನ್ನ ಮೌನವೇ ಉತ್ತರವಾಗಿತ್ತು.

ಇಂದು ಮೋದಿಯವರ ಮಾತು ಕೇಳಿದ ನಂತರ, ಕಮ್ಯುನಿಸ್ಟ್ ಸಿದ್ಧಾಂತ ಪ್ರತಿಪಾದಕರೊಬ್ಬರು ಹೇಳಿದ ಮಾತು, ನಿಮ್ಮ ಕನಸಿನ ಶಕ್ತಿಪೀಠ ಕ್ಯಾಂಪಸ್ ಪರಿಕಲ್ಪನೆÉ, ಈ ದೇಶದ ಮುಖ್ಯಸ್ಥರ ಬಾಯಲ್ಲಿ ಬಂತಲ್ಲ ಸ್ವಾಮಿ, ಇದಕ್ಕಿಂತ ಇನ್ನೇನು ಬೇಕು, ಎಂದಾಗ ನನಗೆ ಆಶ್ಚರ್ಯವಾಯಿತು.

ಅಷ್ಟೆ ಅಲ್ಲ ಮೋದಿಯವರು ಇಂದಿನ ಭಾಷಣದಲ್ಲಿ ವೈಜ್ಞಾನಿಕ ವಿಚಾರ ಮತ್ತು ಅದಕ್ಕೆ ಶಿವಶಕ್ತಿ ತಳಕು ಹಾಕಿದ್ದು ಬಿಟ್ಟರೆ, ಅಪ್ಪಿ ತಪ್ಪಿಯೂ ರಾಜಕಾರಣ, ಪಕ್ಷದ ಸಿದ್ಧಾಂತ ಅಥವಾ ಬೇರೆ ಒಂದು ಪದವನ್ನೂ ಬಳಸಲಿಲ್ಲ.

ಒಬ್ಬ ವಿಜ್ಞಾನಿಯಾಗಿ ಉಪನ್ಯಾಸ ಮಾಡಿದರು ಮೋದಿ ಮಾಸ್ಟ್ರು. ಟೀಕೆ, ಟಿಪ್ಪಣೆ, ಬಹುಪರಾಕ್ ಎಲ್ಲವಕ್ಕೂ ಕಡಿವಾಣ ಹಾಕಿದ್ದಾರೆ ಎಂದರೆ ತಪ್ಪಾಗಲಾರದು. ವಿಜ್ಞಾನಿಗಳಿಗೆ ಮತ್ತು ಯುವಿಜ್ಞಾನಿಗಳಿಗೆ ಬೂಸ್ಟರ್ ಡೋಸ್ ನೀಡಿದರು.ಕನಸುಗಾರರಿಗೆ ಇಂಡಿಯಾದಲ್ಲಿಯೂ ಬೆಲೆ ಇದೆ ಎಂದು ಸಾರಿದರು.

ಪ್ರಧಾನಿಯವರ ಕನಸಿನಂತೆ 2047 ಕ್ಕೆ ಭಾರತ ವಿಶ್ವಗುರುವಾಗಲೂ ಮತ್ತು ಮುಖ್ಯಮಂತ್ರಿಯವರ ಕನಸಿನಂತೆ ಕರ್ನಾಟಕ ರಾಜ್ಯ ಏಷ್ಯಾದಲ್ಲಿಯೇ ನಂಬರ್-1 ಮಾಡಲು.ನಾಲೇಡ್ಜ್ ಬ್ಯಾಂಕ್-2047 ಸ್ಥಾಪನೆ ಮಾಡಿ, ಎಲ್ಲಾ ವಿಧವಾದ ಜ್ಞಾನಿಗಳ ನೇತೃತ್ವದಲ್ಲಿ,

 ವಿಶ್ವದ 108 ಶಕ್ತಿಪೀಠಗಳ ಮತ್ತು 12 ಜ್ಯೋತಿರ್ಲಿಂಗಗಳು ಸೇರಿದಂತೆ, ನವಗ್ರಹಗಳ, ಸಾಯಿಬಾಬಾ ಮತ್ತು ಇನ್ನಿತರ ಧಾರ್ಮಿಕ ಸ್ಥಳಗಳ ಪ್ರಾತ್ಯಾಕ್ಷಿಕೆಯೊಂದಿಗೆ. ಇವರೆಲ್ಲರ ಸನ್ನಿಧಿಯಲ್ಲಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, 31 ಜಿಲ್ಲೆಗಳ ಮತ್ತು ದೇಶದ 37 ರಾಜ್ಯಗಳ ಅಭಿವೃದ್ಧಿ ವಿಶ್ಲೇಷಣೆ, ಜಾಗೃತಿಗಾಗಿಯೇ ಜನ್ಮ ತಾಳಿರುವ ಶಕ್ತಿಪೀಠ ಕ್ಯಾಂಪಸ್ ಗೆ ಮೋದಿಯವರ ಮಾತು ಪ್ರೇರಣೆ ಅಲ್ಲವೇ ?

ರೀತಿ ಹಲವಾರು ಸಂದರ್ಭದಲ್ಲಿ ಮಾತನಾಡುವ ಅಭ್ಯಾಸವನ್ನು, ದೇಶದ ಎಲ್ಲಾ ರಾಜಕಾರಣಿಗಳು ಕಲಿಯ ಬೇಕು. ಇದು ದೇಶದ ಪ್ರಜ್ಞಾವಂತ ಜನರ ಬಯಕೆಯೂ ಆಗಿದೆ.