TUMAKURU:SHAKTHIPEETA FOUNDATION
ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ‘ನ್ಯಾಷನಲ್ ರೀಸರ್ಚ್ ಫೌಂಡೇಷನ್’ ಮತ್ತು ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ವಿಶ್ವಕ್ಕೆ ಮಾದರಿಯಾಗಬೇಕು.
ಇವರಿಬ್ಬರ ‘ಭಾರತ ವಿಶ್ವ ಗುರು’ ಮತ್ತು ‘ಏಷ್ಯಾದಲ್ಲೇ ಕರ್ನಾಟಕ ನಂಬರ್ ಒನ್ ರಾಜ್ಯ’ದ ಪರಿಕಲ್ಪನೆ ನನಸು ಮಾಡುವುದೇ ‘ತುಮಕೂರು ರೀಸರ್ಚ್ ಫೌಂಡೇಷನ್– 2047’ ರ ಪ್ರಮುಖ ಉದ್ದೇಶ.
ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಲೋಕಸಭಾ ಸದಸ್ಯರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನನ್ನ ಅವಧಿ ಈ ಲೋಕಸಭೆ ವಿಸರ್ಜನೆ ಆಗುವವರೆಗೂ ಮಾತ್ರ ಇದೆ.
ಈ ಅವಧಿಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ ದೇಶದ ಎಲ್ಲಾ ರಾಜ್ಯ ಮಟ್ಟದ ದಿಶಾ ಸಮಿತಿಗಳಿಗಿಂತ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗಿಂತ ತುಮಕೂರು ಜಿಲ್ಲಾ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಬೆಸ್ಟ್ ಎಂದು ಮಾಡಿ ತೋರಿಸುವುದು ನನ್ನ ಕನಸಾಗಿದೆ.
ನಾನು ದಿಶಾ ಸಮಿತಿ ಸದಸ್ಯನಾಗಿ, ನೇಮಕ ಆದ ದಿವಸದಿಂದ ಮಾಡಿರುವ ಪ್ರತಿಯೊಂದು ಕೆಲಸಗಳ ಹೂರಣವೇ, ‘ನಾಲೇಡ್ಜ್ ಬ್ಯಾಂಕ್– 2047’ ಮತ್ತು ‘ತುಮಕೂರು ರೀಸರ್ಚ್ ಫೌಂಡೇಷನ್– 2047’ ಸ್ಥಾಪನೆ. ಇವೆರಡರ ರೂಪುರೇಷೆಗಳಿಂದ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರದ ಪ್ರಥಮ ಮೆಟ್ಟಿಲು.
ತುಮಕೂರು ವಿಶ್ವ ವಿದ್ಯಾನಿಲಯ, ರಾಜ್ಯ ಸರ್ಕಾರದ ಪತ್ರ ಮೇಲೆ ಕೈಗೊಂಡಿರುವ ಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ. ನಾನು ತುಮಕೂರು ವಿಶ್ವ ವಿದ್ಯಾನಿಲಯ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರೊಂದಿಗೆ ಸಮಾಲೋಚನೆ ಮಾಡಿರುವುದು, ಪ್ರಪಂಚ ತುಮಕೂರು ವಿಶ್ವ ವಿದ್ಯಾನಿಲಯವನ್ನು ‘ಬೆಸ್ಟ್ ಪ್ರಾಕ್ಟೀಸಸ್’ ಆಗಿ ನೋಡಬೇಕು.
ಈ ರೀತಿ ಮಾಡಲು ಕನಸು ಕಾಣುವುದಾದರೆ ನಿಮ್ಮ ಅಧ್ಯಾಪಕ ತಂಡ, ನೌಕರ ತಂಡ ಮತ್ತು ವಿದ್ಯಾರ್ಥಿಗಳ ತಂಡವನ್ನು ಅಣಿಗೊಳಿಸಿ, ರಾಜ್ಯ ಮಟ್ಟಕ್ಕೆ ವಿಸ್ತರಿಸಿ, ಕೇಂದ್ರ ಸರ್ಕಾರ ತನ್ನ ಆಯವ್ಯಯ ಪತ್ರದಲ್ಲಿ ಮುಂದಿನ 5 ವರ್ಷಗಳಿಗೆ ‘ನ್ಯಾಷನಲ್ ರೀಸರ್ಚ್ ಫೌಂಡೇಷನ್’ ಗಾಗಿ ರೂ 50000 ಕೋಟಿ ಇಟ್ಟಿದ್ದಾರೆ.
ಇದರಲ್ಲೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಿಂಹಪಾಲು ಪಡೆಯಲೇ ಬೇಕು. 2047 ರ ವೇಳೆಗೆ ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ, ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ, ನಮ್ಮ ಗುರಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ತರುವುದಾಗಿರ ಬೇಕು. ಇದೊಂದು ‘ಮೌನ ಕ್ರಾಂತಿ’ ಯಾಬೇಕು.
ನಮ್ಮ ಜಿಲ್ಲೆಯ/ರಾಜ್ಯದ ವಿದ್ಯಾರ್ಥಿಗಳ ‘ಜ್ಞಾನ’ ಪ್ರಪಂಚದ ಮೆಚ್ಚುಗೆ ಪಡೆಯಬೇಕು. ನನಗೆ ಯಾವುದೇ ಹುದ್ದೆ ಬೇಡ, ನಾನು ‘ಮೆಂಟರ್’ ಆಗಿರುತ್ತೇನೆ. ಶಕ್ತಿಪೀಠ ಫೌಂಡೇಷನ್ ಒಂದು ಹಳ್ಳಿಯಿಂದ ಆರಂಭಿಸಿ, ವಿಶ್ವ ಸಂಸ್ಥೆವರೆಗೂ ಕಡತಗಳ ಅನುಸರಣೆ ಮಾಡಲಿದೆ.
ನಮ್ಮ ರಾಜ್ಯದ 28 ಜನ ಲೋಕಸಭಾ ಸದಸ್ಯರ, 12 ಜನ ರಾಜ್ಯಸಭಾ ಸದಸ್ಯರ ಸಹಕಾರವನ್ನು ಪಕ್ಷಾತೀತವಾಗಿ ಪಡೆಯುವುದರ ಮೂಲಕ ಗುರಿ ಸಾಧಿಸೋಣ. ಯಾವುದೇ ಕಾರಣಕ್ಕೂ ರಾಜಕೀಯ ನುಸುಳದ ರೀತಿ ಕರ್ತವ್ಯ ನಿರ್ವಹಣೆ ಮಾತ್ರ ಅಗತ್ಯವಿದೆ.
ನಾನಂತೂ ರಾಜ್ಯದ ಕಾಂಗ್ರೇಸ್ ಸರ್ಕಾರ ಮತ್ತು ಕೇಂದ್ರದ ಬಿ.ಜೆ.ಪಿ ಸರ್ಕಾರ ಎರಡರ ವಿಶ್ವಾಸಗಳಿಸಲು ಶ್ರಮಿಸುತ್ತಿದ್ದೇನೆ.
ನನಗೆ ಅವಮಾನವಾದರೂ ನಾನು ಕಾಯುತ್ತೇನೆ, ಸಹಿಸಿ ಕೊಳ್ಳುತ್ತೇನೆ, ಕೋಪವನ್ನು ಶೇ 80 ಕಡಿಮೆ ಮಾಡಿಕೊಂಡಿದ್ದೇನೆ. ನನ್ನ ಛಲದಿಂದ ಮಾತ್ರ ಹಿಂದೆ ಸರಿಯುವುದಿಲ್ಲ. ನನ್ನ ಪಾತ್ರ ಮತ್ತು ಶಕ್ತಿಪೀಠ ಫೌಂಡೇಷನ್ ಪಾತ್ರಗಳ ಬಗ್ಗೆ ಸ್ಪಷ್ಟ ಮಾಹಿತಿ ಇರುವುದು ಪಾರದರ್ಶಕತೆಗೆ ಸೂಕ್ತವಾಗಿದೆ.
ಯಾವುದೇ ಕಾರಣಕ್ಕೂ ನನ್ನ 35 ವರ್ಷ ಅಭಿವೃದ್ಧಿ ಅನುಭವಕ್ಕೆ ‘ಕಿಂಚಿತ್ತು ಕಳಂಕ’ ಬರದ ರೀತಿ ನಡೆದುಕೊಳ್ಳಲು, ವಿಶ್ವದ 108 ಶಕ್ತಿಪೀಠಗಳಲ್ಲಿ ಅರಿಕೆ ಮಾಡಿದ್ದೇನೆ. ಇದೂವರೆಗೂ ಯಾವುದಾದರೂ ಕಳಂಕ ಇದ್ದಲ್ಲಿ ಸಾರ್ವಜನಿಕವಾಗಿಯೇ ಚರ್ಚೆ ಮಾಡಿ, ಬಗೆಹರಿÀಸಿಕೊಳ್ಳತ್ತೇನೆ.
ಮುಂದಿನ 24 ವರ್ಷಗಳು ವಿದ್ಯಾರ್ಥಿಗಳ ನೇತೃತ್ವದ ,ರಾಜ್ಯದ ‘ಅಭಿವೃದ್ಧಿ ಪರ್ವ’ ಆಗಬೇಕು.