TUMAKURU:SHAKTHI PEETA FOUNDATION
ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ನಾಳೆ ಆರಂಭವಾಗುವ ‘ತುಮಕೂರು ರೀಸರ್ಚ್ ಫೌಂಡೇಷನ್ -2047’ ಕಾರ್ಯಕ್ರಮಕ್ಕೆ ನಾನು ಬರುತ್ತೇನೆ ಎಂದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶ್ರೀ ಇಕ್ಬಾಲ್ ಅಹಮ್ಮದ್ ಕರೆ ಮಾಡಿ ತಿಳಿಸಿದ್ದಾರೆ.
ನಾವು ಬರಿ ಭಾಷಣದಲ್ಲಿ ಸರ್ವಪಕ್ಷಗಳ ನೇತೃತ್ವದಲ್ಲಿ, ಸರ್ವಧರ್ಮಗಳ ಸಹಭಾಗಿತ್ವದಲ್ಲಿ ಎಂದು ಹೇಳಿದರೆ ಸಾಲದು, ಎಲ್ಲಾ ವರ್ಗದವರ ಜೊತೆ ಸಮಾಲೋಚನೆ ನಡೆಸುವುದು ನಮ್ಮ ಆದ್ಯ ಕರ್ತವ್ಯ.
‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಕರಡು ವರದಿಯಲ್ಲಿ, ನಾನು ಉದ್ದೇಶಪೂರ್ವಕವಾಗಿ ಸರ್ವಪಕ್ಷಗಳ ನಾಯಕರ ಫೋಟೋ ಹಾಕಿದಾಗ ಸಹಜವಾಗಿ, ನನಗೆ ದೇಶ-ವಿದೇಶಗಳಿಂದಲೂ ಕರೆ ಮಾಡಿ ಸಮಾಲೋಚನೆ ನಡೆಸಿದ್ದು ಉಂಟು.
ನಾನು 2017 ರಲ್ಲಿ ಬಿಡುಗಡೆ ಮಾಡಿದ್ಧ ಕರ್ನಾಟಕ ವಿಷನ್ ಡಾಕ್ಯುಮೆಂಟ್ ನಲ್ಲಿ ಯಾರೊಬ್ಬರ ಫೋಟೋ ಸಹ ಹಾಕಿರಲಿಲ್ಲ. ಆಗ ತುಮಕೂರು ಜಿಲ್ಲೆಯ ಸರ್ವಪಕ್ಷಗಳ ನಾಯಕರು ಸಹ ನೀವೂ ಶ್ರೀ ಜಿ.ಎಸ್.ಬಸವರಾಜ್ ರವರ ಫೋಟೋ ಹಾಕಬೇಕಿತ್ತು ಎಂದು ಸಲಹೆ ನೀಡಿದ್ದು ಉಂಟು.
ಜನರ ಭಾವನೆ ಲೋಕೋಭಿರುಚಿ ಭಿನ್ನವಾಗಿರುತ್ತದೆ, ಆದರೇ ನಾವು ಎಲ್ಲರ ಜೊತೆ, ಮುಕ್ತವಾಗಿ ಪ್ರತಿಯೊಂದು ಯೋಜನೆಗಳ ಸಾದಕ-ಬಾಧಕ ಗಳ ಬಗ್ಗೆ ‘ಒನ್–ಟು–ಒನ್’ ಸಮಾಲೋಚನೆ ಮಾಡುವುದು ಸೂಕ್ತವೆನಿಸಿದೆ.
ಇಕ್ಬಾಲ್ ಅಹಮ್ಮದ್ ಗೂ ತುಮಕೂರು ಜಿಲ್ಲೆ ಫೈಲಟ್ ಯೋಜನೆ ಕೈಗೊಂಡು ಶ್ರಮಿಸುತ್ತಿರುವಾಗ ನಾನು ಸಹ ಕೈಜೋಡಿಸಬೇಕು ಎನಿಸಿರುವುದು ಒಳ್ಳೆಯ ಬೆಳವಣಿಗೆ ಅಲ್ಲವೇ. ಪ್ರತಿಯೊಬ್ಬರಿಗೂ ಅದೇ ಮನೋಭಾವ ಅಗತ್ಯ. ನಾವಂತೂ ಎಲ್ಲರನ್ನೂ ಆಹ್ವಾನಿಸಲು ಸಾಧ್ಯಾವಾಗುವುದಿಲ್ಲ, ಮಾಧ್ಯಮಗಳ ಮೂಲಕ ವಿಷಯ ತಿಳಿಸ ಬಹುದು ಅಥವಾ ಸೋಶಿಯಲ್ ಮೀಡಿಯಾ ಮೂಲಕ ವಿಷಯ ಹಂಚಿಕೊಳ್ಳ ಬಹುದು.
ಆಸಕ್ತಿ ಇರುವ ಎಲ್ಲರೂ ಮುಕ್ತವಾಗಿ ಬಾಗವಹಿಸಿ ತಮ್ಮ ಸಲಹೆ ಮಾರ್ಗದರ್ಶನ ನೀಡಬಹುದಾಗಿದೆ. ನಾನೂ ಎದುರಿಗೆ ಸಿಕ್ಕಿದವರನ್ನು ಸಹ ಕರೆಯುವುದಿಲ್ಲ. ಏಕೆಂದರೆ ಇದು ನಮ್ಮ ಮನೆಯ ಕೆಸಲವಲ್ಲ.ಇಚ್ಚೆ ಇದ್ದವರು ಬರಬಹುದಲ್ಲವೇ ಎಂಬ ಅಭಿಪ್ರಾಯ ನನ್ನದಾಗಿದೆ.
ಅಷ್ಟೆ ಅಲ್ಲ, ನಾನು ಇಧುವರೆಗೂ ನಡೆಸಿರುವ ಯಾವುದೇ ಸಭೆಗಳಲ್ಲಿ ಒಂದು ಹಾರವನ್ನು ಸಹ ಯಾರಿಗೂ ಹಾಕಿಲ್ಲ. ವಿಶ್ವ ವಿದ್ಯಾನಿಲಯದ ಸಭೆಯಲ್ಲಿ ನಾನು ಈ ಮಾತನ್ನು ಹೇಳಿದ್ದೇನೆ. ಒಂದು ಹಾರ ಹಾಕುವ, ಸನ್ಮಾನ ಮಾಡುವ ಚಿಂತನೆ ತುಮಕೂರು ರೀಸರ್ಚ್ ಫೌಂಡೇಷನ್ ನಲ್ಲಿ ಇಟ್ಟುಕೊಳ್ಳುವುದು ಬೇಡ ಸಾರ್ ಎಂದಿದ್ದೇನೆ. ಆದರೂ ಅವರ ಪ್ರೋಟೋಕಾಲ್ ವ್ಯವಸ್ಥೆ ಹೇಗೆ ಇದೆಯೋ ಗೊತ್ತಿಲ್ಲ.
ಇಕ್ಬಾಲ್ ರವರಿಗೆ ಬೆಳಿಗ್ಗೆ 7.30 ಕ್ಕೆ ಬನ್ನಿ, ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ರವರ ಜಯಂತಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಸಭೆ ನಡೆಯಲಿದೆ. ಆದರೇ ಒಂದು ನಿರ್ಧಿಷ್ಠ ಯೋಜನೆಯ ‘ಜ್ಞಾನದಾನ ಮಾಡಿ’ ಎಂದು ಸಲಹೆ ನೀಡಿದ್ದೇನೆ. 2047 ರವರೆಗೂ ಶ್ರಮಿಸುವ ಛಲ ಇರಬೇಕು ಎಂದೂ ಹೇಳಿದ್ದೇನೆ.