TUMAKURU:SHAKTHIPEETA FOUNDATION
ತುಮಕೂರು ರೀಸರ್ಚ್ ಫೌಂಡೇಷನ್-2047, ದೇಶದಲ್ಲಿಯೇ ವಿನೂತನವಾದ ಯೋಜನೆಗೆ ಚಾಲನೆ ನೀಡಿದೆ. 2047 ಕ್ಕೆ ಕರ್ನಾಟಕ ರಾಜ್ಯ ದೇಶದಲ್ಲಿಯೇ ಅತೀ ಹೆಚ್ಚಿನ ಅನುದಾನ ಪಡೆಯಬೇಕಾದರೆ, ಏನು ಸ್ಟ್ರಾಟಜಿ ಮಾಡಬೇಕು ಎಂಬ ಬಗ್ಗೆ ಪ್ರಾಯೋಗಿಕವಾಗಿ, ‘ತುಮಕೂರು ಜಿಲ್ಲೆ ಫೈಲಟ್ ಸ್ಟಡಿ ಮತ್ತು ಅನುಷ್ಠಾನಕ್ಕೆ ಮೌನವಾಗಿ ಹೆಜ್ಜೆ’ ಇಟ್ಟಿದೆ.
ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಇಂಟರ್ನ್ಷಿಪ್’ ನ ಮೂಲಕ ಜಾಗೃತಿ ಆರಂಭಿಸಿದೆ. ವಿವಿಧ ವಿಷಯವಾರು ಉಪಸಮಿತಿಗಳನ್ನು ವಿದ್ಯಾರ್ಥಿಗಳ ನೇತೃತ್ವದಲ್ಲಿಯೇ ರಚಿಸುವುದು ಸೂಕ್ತವಾಗಿದೆ.ಇದಕ್ಕೊಂದು ಮಾರ್ಗದರ್ಶಿ ಸೂತ್ರ ಬೇಕಲ್ಲವೇ?
ಈ ಉಪಸಮಿತಿಗಳು 2047 ರವರೆಗೂ ಶ್ರಮಿಸ ಬೇಕಿದೆ. ಸದಸ್ಯರು ವಿವಿಧ ಕಾರಣಗಳಿಗಾಗಿ ಬದಲಾಗಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇವರಿಗೆ ನೇರವಾಗಿ ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗೆ, ಟಿ.ಎ.ಡಿ.ಎ, ಭತ್ಯೆ ನಿಯಾಮುನುಸಾರ ನೀಡಲು ಪ್ರಸ್ತಾವನೆಯಲ್ಲಿ ಸೇರಿಸ ಬೇಕಿದೆ. ಸರ್ಕಾgಗಳುÀ ಮಂಜೂರು ಮಾಡಿದರೆ ಮಾತ್ರ ‘ಸಂಭಾವನೆ.’ ಇಲ್ಲವಾದರೆ ‘ಜ್ಞಾನದಾನ’ ಮಾಡಲು ಒಪ್ಪಿಗೆ ಪತ್ರ ನೀಡುವುದು ಕಡ್ಡಾಯ ಮಾಡಬೇಕಿದೆ.
‘ನಾಲೇಡ್ಜ್ ಬ್ಯಾಂಕ್-2047’ ಸದಸ್ಯತ್ವ, ‘ಸೇವಾ ಪತ್ರ’ ಮತ್ತು ‘ಗುರುತಿನ ಪತ್ರ’ ನೀಡುವುದು ಸೂಕ್ತವಾಗಿದೆ.
- ವಿಶ್ವ ವಿದ್ಯಾನಿಲಂiÀiದ ಪ್ರತಿನಿಧಿ-1
- ಶಕ್ತಿಪೀಠ ಫೌಂಡೇಷನ್ ಪ್ರತಿನಿಧಿ-1
- ವಿಷಯಕ್ಕೆ ಸಂಭಂಧಿಸಿದ ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿ/ನೌಕರ-1
- ವಿಷಯಕ್ಕೆ ಸಂಭಂಧಿಸಿದ ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ/ನೌಕರ-1
- ವಿಷಯಕ್ಕೆ ಸಂಭಂಧಿಸಿದ ರಾಜ್ಯ ಸರ್ಕಾರದ ಅಧಿಕಾರಿ/ನೌಕರ-1
- ವಿಷಯಕ್ಕೆ ಸಂಭಂಧಿಸಿದ ಕೇಂದ್ರ ಸರ್ಕಾರದ ಅಧಿಕಾರಿ/ನೌಕರ-1
- ಮಾಧ್ಯಮ ಪ್ರತಿನಿಧಿ-1
- ಅಭಿವೃದ್ಧಿ ಪರ ಮಾಹಿತಿ ಹಕ್ಕು ಕಾರ್ಯಕರ್ತ-1
- ವಿಷಯ ಪರಿಣಿತರು-3
- ವಿದ್ಯಾರ್ಥಿಗಳು-10 ಜನ
ಒಟ್ಟು 21 ಜನ, ಸಭೆಗೆ ಕೋರಂ ಇರಬಾರದು. ವರದಿ ನೀಡುವವರು ಪ್ರಧಾನರಾಗಿರಬೇಕು. ವ್ಯಕ್ತಿ, ಕುಟುಂಬ, ದಾನಿಗಳು ‘ಲೋಕಲ್ ಇನ್ವೆಸ್ಟರ್’ ಆಗ ಬಹುದು. ಅವರಿಗೂ ಬಹಿರಂಗ ಆಹ್ವಾನ ನೀಡ ಬೇಕಿದೆ.
ಕನಿಷ್ಟ 10 ಸಭೆಗಳು, ಸಂವಾದ, ಗುಂಪುಚರ್ಚೆ, ವಿವಿಧ ಸ್ಪರ್ಧೆ, ಯೂ ಟ್ಯೂಬ್ ಎಪಿಸೊಡ್, ಡಿಜಿಟಲ್ ಗ್ರಂಥಾಲಯ ಮತ್ತು ಗ್ರಂಥಾಯಲಕ್ಕೆ ಅಧ್ಯಯನ ವರದಿಗಳ, ಸರ್ಕಾರಿ ಆದೇಶಗಳ, ಮಾಹಿತಿ ಸಂಗ್ರಹಿಸಿ ನೀಡಬೇಕಿದೆ.
ನಿಮ್ಮ ಐಡಿಯಾ ?