21st November 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ ಫೌಂಡೇಷನ್ ನಿಯೋಗ ದಿನಾಂಕ:10.11.2023 ರಂದು, ಜಮ್ಮುವಿನ ಶ್ರೀ ವೈಷ್ಣೋ ದೇವಿ ಸನ್ನಿದಿಯಲ್ಲಿ ಒಂದು ಮಹತ್ತರವಾದ ನಿರ್ಧಾರಕ್ಕೆ ಬಂದಿದೆ.

  ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ 2047 ರ ವೇಳೆಗೆ ಅತಿಹೆಚ್ಚು ಅನುದಾನ ಪಡೆಯಬೇಕಾದರೆ, ರಾಜ್ಯದ 224 ಕ್ಷೇತ್ರಗಳಲ್ಲೂ, 28 ಜನ ಲೋಕಸಭಾ ಸದಸ್ಯರು, 13 ಜನ ರಾಜ್ಯಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು ಮತ್ತು 75 ಜನ ವಿಧಾನಪರಿಷತ್ ಸದಸ್ಯರು ಸೇರಿದಂತೆ 341 ಜನರು ಸಹ ಕೇಂದ್ರ ಸರ್ಕಾರದಿಂದ ಕನಿಷ್ಟ 5 ಯೋಜನೆಗಳಿಗಾದರೂ ಶ್ರಮಿಸಲೇ ಬೇಕು.

ಆ ಯೋಜನೆಗಳ ಕಡತವನ್ನು ರಾಜ್ಯದ ಮತ್ತು ದೆಹಲಿಯ ಯಾವುದೇ ಕಚೇರಿಯಲ್ಲಿ, ಅನುಸರಣೆ ಮಾಡುವ ಹೋಣೆಗಾರಿಕೆಯನ್ನು ಶಕ್ತಿಪೀಠ ಫೌಂಡೇಷನ್ ಹೊರಲಿದೆ. ಯೋಜನೆ ಮಂಜೂರಾಗಬೇಕು ಅಥವಾ ಯಾವ ಕಾರಣದಿಂದ ಮಂಜೂರಾಗಿಲ್ಲ, ಎಂಬ ನಿಖರವಾದ ಮಾಹಿತಿಯನ್ನು ಪ್ರತಿ ಹಂತದಲ್ಲೂ ಅಫ್ ಡೇಟ್ ಮಾಡಲಾಗುವುದು.

ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿರವರು, ಉತ್ತರ ಕನ್ನಡ ಜಿಲ್ಲೆಯ ಕೋಟದ ‘ಡಾ.ಶಿವರಾಮಕಾರಂತ ಥೀಮ್ ಪಾರ್ಕ್’ ಯೋಜನೆಗೆ ಶ್ರಮಿಸುತ್ತಿರುವ ಮನವಿ ಪತ್ರದಿಂದ ಮೌನವಾಗಿ ಚಾಲನೆ ನೀಡಲಾಗಿದೆ.

  ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ಕಡತದ ಅನುಸರಣೆ ಮಾಡಲು ನಡೆಸಿರುವ ಪತ್ರಗಳ ಮಾಹಿತಿಯನ್ನು ಪಡೆಯಲು ಸಿದ್ಧತೆ ನಡೆಸಲಾಗಿದೆ. ಕಡತದ ನಂಬರ್ ಇಲ್ಲದಿದ್ದರೇ ಯಾವುದೇ ಕಡತದ ಅನುಸರಣೆ ಕಷ್ಟ. ರಾಜಕಾರಣಿಗಳ ಪತ್ರದ ಆಧಾರದ ಮೇಲೆ ಕಚೇರಿ ಕಡತ ಆರಂಭವಾಗಲೇ ಬೇಕು. ಇದು ನಮ್ಮ ಸಂವಿಧಾನದ ವ್ಯವಸ್ಥೆ.

ಶೀಘ್ರದಲ್ಲಿ ಒಂದು ಆಪ್ ಬಿಡುಗಡೆ ಮಾಡಿ, ಮೇಲ್ಕಂಡ 341 ಜನ ಚುನಾಯಿತ ಜನಪ್ರತಿನಿಧಿಗಳ ಯೋಜನೆಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಒಂದೇ ವೇದಿಕೆಗೆ ತರಲಾಗುವುದು. ಆಸಕ್ತರು ಸಂಪರ್ಕಿಸಬಹುದು.

ಶಕ್ತಿಪೀಠ ಫೌಂಡೇಷನ್ ಚಾರಿಟಬಲ್ ಟ್ರಸ್ಟ್  ಲಾಭನಷ್ಟದ ಪ್ರಶ್ನೆ ಬರುವುದಿಲ್ಲಾ, ನಮ್ಮ ಗುರಿನಮಗೆ  ಮುಖ್ಯ.