TUMAKURU:SHAKTHIPEETA FOUNDATION
ವಿಶ್ವದ 108 ಶಕ್ತಿಪೀಠಗಳ ನೇತೃತ್ವದಲ್ಲಿ, ತುಮಕೂರ ನಗರದ, ಜಯನಗರ ಪೂರ್ವ, ಒಂದನೇ ಮುಖ್ಯ ರಸ್ತೆಯ, ಪಾರ್ವತಿ ನಿಲಯ/ ಶಕ್ತಿಭವನ ದಲ್ಲಿ ಶಕ್ತಿಪೀಠ ಪ್ಯಾಂಪಸ್, ಶಕ್ತಿಪೀಠ ಡಾಟಾ ಪಾರ್ಕ್ ರೂಪುರೇಷೆ ನಿರ್ಧರಿಸಲು, ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕರಾದ ಕುಂದರನಹಳ್ಳಿ ರಮೆಶ್ ರವರು ‘ಜ್ಞಾನಿಗಳ ಆಂದೋಲನ’ ನವನ್ನು, ಅತ್ಯಂತ ಸರಳವಾಗಿ ದಿನಾಂಕ:22.02.2024 ರಂದು ಆರಂಭಿಸುತ್ತಾರೆ ಎಂದು ತಿಳಿಸಲು ಹರ್ಷಿಸುತ್ತೇವೆ.
ಶಕ್ತಿಭವನದಲ್ಲಿ
‘ನಾಲೇಡ್ಜ್ ಬ್ಯಾಂಕ್ @ 2047’ ರ ಅಡಿಯಲ್ಲಿ, ಉದ್ದೇಶಿತ 545 ಅಧ್ಯಯನ ಪೀಠಗಳ ಸ್ಥಾಪನೆ ಬಗ್ಗೆಯೂ ರಾಜ್ಯಾಂದ್ಯಂತ ಪ್ರವಾಸವನ್ನು ಹಮ್ಮಿಕೊಳ್ಳಲಾಗುವುದು.
ತುಮಕೂರು ಜಿಲ್ಲೆಯ ಪ್ರತಿಯೊಂದು ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ– ವಿಷನ್ ಡಾಕ್ಯುಮೆಂಟ್ @ 2047’ ರ ಬಗ್ಗೆ, ಜಿಲ್ಲಾಧ್ಯಂತ ಪ್ರವಾಸ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ, ಸರ್ವಧರ್ಮಗಳ, ಎಲ್ಲಾ ಜಾತಿ/ಉಪಜಾತಿಗಳ, ವಿವಿಧ ಸಂಘಸಂಸ್ಥೆಗಳ, ನಾಲೇಡ್ಜ್‍ಬಲ್ ಪರ್ಸನ್ ಸಹಭಾಗಿತ್ವದಲ್ಲಿ ‘ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ– 2024 ರ ಮತದಾರರ ಪ್ರಣಾಳಿಕೆ’ ಸಿದ್ಧಪಡಿಸಲು ಚಾಲನೆ ನೀಡಲಾಗುವುದು.
ದಿನಾಂಕ:22.02.2024 ರಿಂದ ದಿನಾಂಕ:22.02.2025 ರೊಳಗೆ, ವಿಶ್ವದ ಒಂದು ಸಾವಿರ ಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸಲು ಗುರಿಹೊಂದಲಾಗಿದೆ. ನಂತರ ‘ಶಕ್ತಿಭವನ ಲೋಕಾರ್ಪಣೆ’ ಕಾರ್ಯಕ್ರಮ ನಡೆಯಲಿದೆ.
ದಿನಾಂಕ:05.10.2022 ರಿಂದ ದಿನಾಂಕ:22.02.2024 ರವರೆಗೆ, ಸುಮಾರು 500 ಕ್ಕೂ ಹೆಚ್ಚು ದಿವಸ, ಕುಂದರನಹಳ್ಳಿ ರಮೆಶ್ ರವರಿಗೆ ತುಮಕೂರಿನಲ್ಲಿ ಅಧಿಕೃತವಾಗಿ ಯಾವುದೇ ಮನೆ ಅಥವಾ ಕಚೇರಿ ಇಲ್ಲದೆ ಇರುವುದು, ಒಂದು ‘ಅಭಿವೃದ್ಧಿ ವನವಾಸ’ ದಂತಾಗಿತ್ತು. ಇನ್ನೂ ಮುಂದೆ ಚಟುವಟಿಕೆಗಳು ಸರಾಗವಾಗಿ ನಡೆಯಲಿವೆ.
ನಮ್ಮ ಉದ್ದೇಶಗಳಿಗೆ ತಮ್ಮ ಸಲಹೆಗಾಗಿ ಮುಕ್ತ ಆಹ್ವಾನ.
– ಅಗೋಚರ ಶಕ್ತಿ