22nd November 2024
Share

TUMAKURU:SHAKTHIPEETA FOUNDATION

  ಕೇಂದ್ರ ಸರ್ಕಾರ 2024-25 ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸೋಧ್ಯಮಕ್ಕೆ ವಿಶೇಷ ಒತ್ತು ನೀಡಿದೆ. ಅದನ್ನು ಬಳಸಿಕೊಂಡು ರಾಜ್ಯದಲ್ಲಿ ಟೆಂಪಲ್ ಟೂರಿಸಂ ಮಾಡಲು ವಿಫುಲ ಅವಕಾಶಗಳಿವೆ. ರಾಜ್ಯ ಸರ್ಕಾರ ಮೊದಲು ರಾಜ್ಯದ ಪ್ರತಿಗ್ರಾಮವಾರು ದೇವಾಲಯಗಳು ಮತ್ತು ಅವುಗಳ ಆಸ್ತಿ, ಕಬಳಿಸಿರುವ ಆಸ್ತಿ, ಹುಂಡಿಹಣದ ಮಾಹಿತಿಗಳನ್ನು ಆಯಾ ದೇವಾಲಯದ ಮುಂದೆ ಪ್ರಕಟಿಸಲಿ.

 ನಂತರ ಆಯಾ ದೇವಾಲಯದ ಭಕ್ತರ ಸಹಭಾಗಿತ್ವದಲ್ಲಿ ಎಸ್.ಪಿ.ವಿ’ ರಚಿಸಲಿ. ಉಸ್ತುವಾರಿ ಮಾತ್ರ ಸರ್ಕಾರಕ್ಕಿರಲಿ. ರಾಜ್ಯಕ್ಕೆ ಆದಾಯ ಬರುವ ಒಳ್ಳೆಯ ಉಧ್ಯಮ ಕೇಂದ್ರಗಳಾಗಲಿವೆ.

ಟೆಂಪಲ್ ಟೂರಿಸಂ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಿದ್ಧಪಡಿಸಿ, 2047 ರೊಳಗೆ ಎಲ್ಲಾ ದೇವಾಲಯಗಳನ್ನು, ಚರ್ಚ್‍ಗಳನ್ನು, ಮಸೀದಿಗಳನ್ನು, ಬಸೀದಿಗಳನ್ನು ಅವರವರ ಧರ್ಮಗಳ, ಭಕ್ತರ ಅನಿಸಿಕೆಯಂತೆ, ಅಭಿವೃದ್ಧಿ ಪಡಿಸಿ, ಪ್ರತಿಯೊಂದು ಪುಣ್ಯ ಕ್ಷೇತ್ರವನ್ನು ಪ್ರವಾಸಿ ಕೇಂದ್ರ ಮಾಡಲು ಯೋಜನೆ ರೂಪಿಸಲಿ. ಅದು ಬಿಟ್ಟು ಇಲ್ಲ ಸಲ್ಲದ ವಿವಾದ ಮಾಡಿಕೊಂಡು ಜನರ ನೆಮ್ಮದಿ ಕೆಡಿಸುವ ಆಲೋಚನೆ ಏಕೆ?

ಆಯಾ ದೇವಾಲಯಗಳ ಅಕ್ಕ-ಪಕ್ಕ ವಿವಿಧ ಉದ್ಧಿಮೆ ಆರಂಭಿಸಲು, ಆಸಕ್ತಿ ಇರುವವರಿಗೆ ಬಡ್ಡಿ ರಹಿತ ಸಾಲ ಕೊಡಲಿ. ಆಮೀನು ಇರುವ ಕಡೆ ದೇವಾಲಯಗಳ ಆಸ್ತಿಗಳನ್ನು ಟೆಂಡರ್ ಅನುಸರಿಸಿ, ನೆಲ ಬಾಡಿಗೆ ನೀಡಲಿ. ಕೋಟಿಗಟ್ಟಲೆ ಉದ್ಯೋಗ ಸೃಷ್ಠಿಯಾಗಲಿದೆ.

ಹುಂಡಿ ಹಣದ ಆಸ್ತಿಗೆ ಸರ್ಕಾರ ಕೈಹಾಕಿದರೆ, ರಾಜ್ಯದ ಪ್ರತಿಯೊಂದು ದೇವಾಲಯವೂ ಅಯೋಧ್ಯೆಯ ಶ್ರೀ ರಾಮಮಂದಿರದಂತೆ ಯೋಜನೆ ರೂಪಿಸಲು, ಭಕ್ತರ ತಂಡವೇ ಸಿದ್ಧವಾಗಲಿದೆ. ಜನರ ಭಾವನೆಗಳ ಜೊತೆ ಯಾವುದೇ ಪಕ್ಷಗಳು ಆಟ ಆಡಬಾರದು.

ಪ್ರವಾಸಿ ಅಧ್ಯಯನ ಪೀಠ ಆರಂಭಿಸಲು ಸೂಕ್ತ ಕಾಲ ಸನ್ನಿಹಿತವಾಗಿದೆ. ರಾಜ್ಯ ಸರ್ಕಾರ 1947 ರಿಂದ ಇದೂವರೆಗೂ ಮುಜರಾಯಿ ಮತ್ತು ವಕ್ಚ್ ಸಚಿವರಾಗಿದ್ದವರು, ಉನ್ನತ ಅಧಿಕಾರಿಗಳಾಗಿದ್ದವರು, ಜ್ಞಾನಿಗಳ ಮತ್ತು ಭಕ್ತರ ಅಧ್ಯಯನ ಪೀಠ ರಚಿಸಿ, ಸೂಕ್ತ ಸಲಹೆ ಪಡೆಯುವುದು ಅಗತ್ಯವಾಗಿದೆ