11th January 2025
Share

TUMAKURU:SHAKTHIPEETA FOUNDATION

ಪ್ರಧಾನಿ ಶ್ರೀ ನರೇಂದ್ರಮೋದಿಯವರು ಕಳೆದ ಲೋಕಸಭಾ ಚುನಾವಣೆಯಲ್ಲೂ, ಚುನಾವಣೆ ಘೋಷಣೆ ಆಗುವ ಮೊದಲೇ, ಮುಂದಿನ ಲೋಕಸಭಾ ಅವಧಿಯ 100 ದಿನದ ಕಾರ್ಯಸೂಚಿ ಬಗ್ಗೆ ನಿರ್ಧಾರ ಕೈಗೊಂಡಿದ್ದರು.

ಈ ಭಾರಿಯೂ ಇದೇ ನಿರ್ಧಾರ ಕೈಗೊಂಡಿದ್ದಾರೆ, ಅಧಿಕಾರಿಗಳು ಚುನಾವಣೆ ಸಮಯ ಎಂದು ಕಾಲ ಕಳೆಯುವ ಆಗಿಲ್ಲ, ಚುನಾವಣಾ ನಂತರ ಮುಂದಿನ 100 ದಿನಗಳಲ್ಲಿ ಕೈಗೊಳ್ಳಬೇಕಾಗಿರುವ  ಅನುಷ್ಠಾನ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಸಂದೇಶ ರವಾನಿಸಿದ್ದಾರೆ.

ದೇಶದ ಪ್ರಧಾನಿಯವರಿಗೆ ಒಂದು ಖಚಿತತೆ, ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ, ವಿಶ್ವದಲ್ಲಿ 3 ನೇ ಆರ್ಥಿಕ ದೇಶವಾಗಿ ಭಾರತವನ್ನು ಬೆಳೆಸಲೇ ಬೇಕು ಎಂಬ ಹಠ/ಛಲ/ನಿರ್ಧಿಷ್ಠ ಗುರಿ ಇಟ್ಟಿದ್ದಾರಲ್ಲ ನಿಜಕ್ಕೂ ಬೆಲೆ ಕಟ್ಟಲು ಸಾಧ್ಯಾವಿಲ್ಲ.

ಪ್ರಧಾನಿಯವರಿಗೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಜೋಡಿಸುವುದು ಅಗತ್ಯ, ಪಕ್ಷಗಳ ಬಿನ್ನಾಭಿಪ್ರಾಯ ಚುನಾವಣಾ ಸಮಯದಲ್ಲಿ ಮಾತ್ರ ಇರಬೇಕು. ಅಭಿವೃದ್ಧಿಯಲ್ಲಿ ಪ್ರಧಾನಿ ದೇಶದ ದೊರೆ ಮತ್ತು ಮುಖ್ಯಮಂತ್ರಿ ರಾಜ್ಯದ ದೊರೆ ಎಂಬ ಭಾವನೆ ಇರಬೇಕು. ಪಕ್ಷ, ಜಾತಿ, ಎಡ-ಬಲ ಬರಬಾರದು.

ತೆ¯ಂಗಾಣ ಮುಖ್ಯಮಂತ್ರಿಯವರಾದ ಶ್ರೀ ರೇವಂತ್ ರೆಡ್ಡಿಯವರು ನಿಜಕ್ಕೂ ಬದ್ಧತೆ ಮೆರೆದಿದ್ದಾರೆ. ಯಾವುದೇ ಪಕ್ಷವಿರಲಿ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ಒಂದು ದೇಶದ ಪ್ರಧಾನಿಯವರಿಗೆ ನೀಡಬೇಕಾಗಿರುವ ಗೌರವ ಸಲ್ಲಿಸಿರುವುದು, ಒಳ್ಳೆಯ ಮಾತುಗಳು ಅವರ ಘನತೆ ಹೆಚ್ಚಿಸಿವೆ, ಪಕ್ಷಾತೀತವಾಗಿ ಅವರ ಬಗ್ಗೆ, ಮೆಚ್ಚುಗೆ, ಹೆಮ್ಮೆ ಪಡುವಂತಹ ಪ್ರಭುದ್ಧತೆ ಮೆರೆದಿದ್ದಾರೆ. ಅವರ ನಡೆ ಬೇರೆ ರಾಜ್ಯಗಳಿಗೂ ಮಾದರಿಯಾಗಬೇಕು.

ದುಡಿಯುವ ಕೈಗಳಿಗೆ ಪ್ರೋತ್ಸಾಹ ನೀಡಬೇಕು, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲು ಯೋಜನೆಗಳು, ಜನರ ಮನೆಯ ಕದ ತಟ್ಟುವ ನಿರ್ಧಾರ ಕೈಗೊಳ್ಳಬೇಕು. ಮೋದಿಯವರು ಅವರ 10 ವರ್ಷದ ಅವಧಿಯ ಯೋಜನೆಗಳನ್ನು ಅವರ ಸಂಪುಟದ ಸಚಿವರು  ಹೇಳಬೇಕಾದರೂ ಕಷ್ಟವಾಗಬಹುದು.

ಪ್ರತಿ ಇಲಾಖೆಯಲ್ಲೂ, ಪ್ರತಿ ವರ್ಗದವರಿಗೂ, ಹಿಂದಿನ ಯೋಜನೆಗಳ ಮತ್ತು ಪ್ರಸಕ್ತ ಯೋಜನೆಗಳ ಬzಲಾವಣೆ ಆಗುತ್ತಲೇ ಇವೆ. ಇದು ಅಭಿವೃದ್ಧಿಯ ಸಂಕೇತವಲ್ಲವೇ? ಬೀದಿ ಬದಿ ವ್ಯಾಪಾರಿಯಿಂದ ಆರಂಭಿಸಿ, ಚಂದ್ರಯಾನದವರಿಗೂ ಅದೇ ಸ್ಪೀಡ್‍ನಲ್ಲಿ ಯೋಜನೆ ಜಾರಿ ನಿಜಕ್ಕೂ ಮೆಚ್ಚಲೇಬೇಕು.

ವಿರೋಧ ಪಕ್ಷಗಳು ಇದೂವರೆಗೂ ಮೋದಿಯವರ ಯೋಜನೆ ಬಗ್ಗೆ ಪರ-ವಿರೋಧ ಮಾಡುವ ಗೋಜಿಗೆ ಹೋಗಿಲ್ಲ/ ಅವಕಾಶವೂ ಇಲ್ಲ, ವಿರೋಧ ಪಕ್ಷಗಳ ಮಾತು ಹಿಂದೂ, ಹಿಂದೂ, ಅವರು ಒಂದು ಬಾರಿ ಹಿಂದೂ ಮಾತನಾಡಿದಾಗಲೆಲ್ಲಾ ಒಂದಷ್ಟು ಮತ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ.

‘ಪ್ರಪಂಚವೇ ಮೋದಿಯವರ ನಿರ್ಧಾರಗಳಿಗೆ ಬೆಚ್ಚಿಬಿದ್ದಿದೆ ಎಂದರೆ ಅತಿಶಯೋಕ್ತಿಯಲ್ಲ. ಅದೇಷ್ಟೋ ನಿರ್ಧಾರಗಳು, ನಾವೂ ಭಾರತೀಯರು ಎಂದು ಎದೆ ತಟ್ಟಿ ಹೇಳುವ ಮೆಟ್ಟಿಲುಗಳಾಗಿವೆ.

2047 ಕ್ಕೆ ಭಾರತ ವಿಶ್ವಗುರು ಆಗಬೇಕಾದರೆ, ದೇಶದ ಪ್ರತಿಯೊಬ್ಬರೂ ಈ ಬಗ್ಗೆ ಚಿಂತನೆ ಮಾಡಲೇಬೇಕು. ಏಕೆಂದರೆ ದೇಶದ ಜನತೆಯ ತಲಾದಯ ಹೆಚ್ಚಬೇಕಾದರೆ, ನಾನು ಏನು ಮಾಡಬೇಕು, ನಮ್ಮ ಕುಟುಂಬ ಏನು ಮಾಡಬೇಕು, ನಮ್ಮ ಗ್ರಾಮ/ಬಡಾವಣೆ ಹೇಗೆ ಆಭಿವೃದ್ಧಿ ಹೊಂದಬೇಕು ಎಂಬ ಜನಜಾಗೃತಿ ಅಗತ್ಯ. ವಿದ್ಯಾರ್ಥಿಗಳಲ್ಲಿ ಈ ಭಾವನೆ ತುಂಬುವ, ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಿರಂತರವಾಗಿ ಆಗಬೇಕು.