21st April 2025
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದ್ಯಾಂತ ಊರಿಗೊಂದು ಕೃಷಿ ಆಶ್ರಮ ಸ್ಥಾಪಿಸ ಬೇಕು ಎಂದು ಕನ್ನೇರಿ ಶ್ರೀಗಳು ಕರೆ ನೀಡಿದರು. ಅವರು ಮಹಾರಾಷ್ಟ್ರ ರಾಜ್ಯದ, ಕೊಲ್ಲಾಪುರ ಜಿಲ್ಲೆ, ಕರವೀರ ತಾಲ್ಲೂಕಿನ ಕನ್ನೇರಿ ಸಿದ್ಧಗಿರಿ ಮಹಾಸಂಸ್ಥಾನದ ಶ್ರೀಗಳ ನೇತೃತ್ವದಲ್ಲಿ   ಇದೇ ತಿಂಗಳು ಏಫ್ರಿಲ್ 10,11 ಮತ್ತು 12 ರಂದು ಮೂರು ದಿವಸಗಳ ಕಾಲ ನಡೆದ ಸಂಕಲ್ಪ ಸಮಾರಂಭದಲ್ಲಿ ಮಾತನಾಡಿದರು.

  ಕರ್ನಾಟಕ ರಾಜ್ಯದಲ್ಲಿ 2023 ರ ಜೂನ್‍ನಲ್ಲಿ 108 ಕೃಷಿ ಆಶ್ರಮಗಳನ್ನು ಸ್ಥಾಪಿಸಲು ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಸಂಕಲ್ಪ ಮಾಡಲಾಗಿತ್ತು, ಇಂದು ಆ ಗುರಿಯನ್ನು ತಲುಪಿ ಮುಂದೆ ಸಾಗಿದ್ದೇವೆ ಎಂದು ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಘೋಷಣೆ ಮಾಡಿದ್ದರು.

   2047 ರ ವೇಳೆಗೆ ಕೃಷಿ ಆಶ್ರಮಗಳು ಹೇಗೆ ಕಾಯನಿರ್ವಹಿಸ ಬೇಕು ಎಂಬ ಬಗ್ಗೆ ನಾನು ಮಾತನಾಡುತ್ತಾ ಕರ್ನಾಟಕ ರಾಜ್ಯಾದ್ಯಾಂತ ಕನಿಷ್ಠ ವಿಧಾನ ಸಭಾ ಕ್ಷೇತ್ರಕ್ಕೆ ಒಂದರಂತೆ 224 ಕೃಷಿ ಆಶ್ರಮಗಳನ್ನು ಆರಂಭಿಸಬೇಕು ಎಂದು ಸಲಹೆ ನೀಡಿದ್ದೆ.

ನಂತರ ಸ್ವಾಮಿಜಿಯವರು ಮಾತನಾಡುತ್ತಾ ಕುಂದರನಹಳ್ಳಿ ರಮೇಶ್‍ರವರು 224 ಕೃಷಿ ಆಶ್ರಮಗಳನ್ನು ಆರಂಭಿಸಲು ತಿಳಿಸಿದ್ದಾರೆ. ಇದು ಸಾಲದು ಊರಿಗೊಂದು ಕೃಷಿ ಆಶ್ರಮ ಸ್ಥಾಪಿಸ ಬೇಕು ಎಂದು ತಿಳಿಸಿ, ಕೃಷಿ ಆಶ್ರಮಗಳು ಹೇಗೆ ಇರಬೇಕು ಎಂದು ಎಳೆ, ಎಳೆಯಾಗಿ ವಿವರಿಸಿದರು.

  ನಾನು ಕರ್ನಾಟಕ ಸರ್ಕಾರಕ್ಕೆ ನೀಡಿರುವ ಸಲಹೆಯಂತೆ, ನಂಬರ್ ಒನ್ ಕರ್ನಾಟಕ @ 2047 ಅಂಗವಾಗಿ ರಾಜ್ಯಾದ್ಯಾಂತ, 30753 ನಾಲೇಡ್ಜ್ ಬ್ಯಾಂಕ್ @ 2047 ಆರಂಭಿಸ ಬೇಕಿದೆ.

ಶೇ 80 ರಷ್ಟು ರೈತರು ಇರುವ ಈ ದೇಶದಲ್ಲಿ 2047 ರ ವೇಳೆಗೆ ದೇಶ, ರಾಜ್ಯ, ಜಿಲ್ಲೆ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ, ಪ್ರತಿಯೊಂದು ಗ್ರಾಮ, ಬಡಾವಣೆ ಹೇಗೆ ಅಭಿವೃದ್ಧಿ ಆಗಬೇಕು ಎಂಬ ಬಗ್ಗೆ ರೈತರ ನೇತೃತ್ವದ ಕೃಷಿ ಆಶ್ರಮಗಳೇ ಹೇಳುವ ಕಾಲ ಮುಂದೊಂದು ದಿನ ಬರಲಿದೆ.

  ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮತ್ತು ಅವರ ತಂಡ ಕರ್ನಾಟಕ ರಾಜ್ಯದಲ್ಲಿ ಜೂನ್ 2025 ರ ವೇಳೆಗೆ 1008 ಕೃಷಿ ಆಶ್ರಮಗಳನ್ನು ಸ್ಥಾಪಿಸಲು ನಿರ್ಧಿಷ್ಠ ಗುರಿ ಹಾಕಿಕೊಂಡಿದ್ದಾರೆ. ಇದರ ಬಗ್ಗೆ ಜಿಲ್ಲಾವಾರು ಎಲ್ಲಾ ಕೃಷಿ ಆಶ್ರಮಗಳ ಪ್ರಮುಖರು ಸಭೆ ಸೇರಿ ಸಮಾಲೋಚನೆ ನಡೆಸುವುದು ಅಗತ್ಯವಾಗಿದೆ.

ದಿನಾಂಕ:18.04.2025 ರಂದು ಆರಂಭಿಸಿದ ಕೃಷಿ ಆಶ್ರಮಗಳ ಅಧ್ಯಯನ ಪ್ರವಾಸ ಸಂದರ್ಭದಲ್ಲಿ, ಪ್ರತಿಯೊಂದು ಕೃಷಿ ಆಶ್ರಮವೂ ಒಂದೊಂದು ನಿರ್ಧಿಷ್ಟ ಬೆಳೆಯ ಸಂಶೋಧನೆ, ಮ್ಯೂಸಿಯಂ. ಸ್ಟಾಟ್ ಅಫ್, ಕ್ಲಸ್ಟರ್‍ಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ವಿಶೇಷ ಗಮನ ಸೆಳೆಯಲಾಗಿತ್ತು.

ಈ ಹಿನ್ನಲೆಯಲ್ಲಿ ವಿವಿಧ ಕೃಷಿ ಆಶ್ರಮಗಳ ಪ್ರಮುಖರಾದ

1.            ಶ್ರೀ ಮಾರುತಿರಾವ್‍ರವರು- ಮಣ್ಣು

2.            ಶ್ರೀ ವೆಂಕಟೇಶ್‍ರವರು – ದಾಗಡಿ ಬಳ್ಳಿ

3.            ಶ್ರೀ ಶಿವಕುಮಾರ್‍ರವರು – ಬಾರೆಹಣ್ಣು

4.            ಶ್ರೀ ಲಕ್ಮಿ ಕಾಂತ್‍ರವರು – ಪಾಪಸು ಕಳ್ಳಿ

5.            ಶ್ರೀ ಆಶೋಕ್ ರವರು – ಕಾಡುಬಿಕ್ಕೆ

6.            ಶ್ರೀ ಮಧುರವರು – ಕಾರೇಹಣ್ಣು

7.            ಶ್ರೀ ರಾಜೇಶ್ ರವರು – ಪಂಚವಟಿ ಮರ

8.            ಶ್ರೀಮತಿ ಬಿ.ಸುಜಾvಕುಮಾರಿ Àರವರು – ನವಗ್ರಹವನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಆದ್ದರಿಂದ ಇದೂವರೆಗೂ ಕೃಷಿ ಆಶ್ರಮಗಳನ್ನು ಆರಂಭಿಸಿರುವವರು ಮತ್ತು ಸ್ಥಾಪಿಸಲು ಮುಂದೆ ಬಂದಿರುವವರು, ತಮ್ಮ ಆಶ್ರಮಗಳಲ್ಲಿ ಎಷ್ಟೇ ಬೆಳೆ ಬೆಳೆದರೂ, ತಮಗೆ ಇಷ್ಟವಿರುವ ಒಂದು ಬೆಳೆಯ ಲೈವ್ ಮ್ಯೂಸಿಯಂ ಸ್ಥಾಪಿಸಲು, ಶ್ರೀ ಮಾರುತಿರಾವ್‍ರವರೊಂದಿಗೆ ವಿಷಯ ಹಂಚಿಕೊಳ್ಳುವುದು ಸೂಕ್ತವಾಗಿದೆ.

ಮುಂದಿನ ವಾರ ವಿಜಯನಗರ ಜಿಲ್ಲೆ ಬೆಲವತ್ತ ಹಣ್ಣು ಶ್ರೀ ಸಜ್ಜನ್‍ರವರ ಕೃಷಿ ಆಶ್ರಮಕ್ಕೆ ಭೇಟಿ ನೀಡಲು ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಅವರ ಕೃಷಿ ಆಶ್ರಮದ ಸುತ್ತ ಮುತ್ತ ಇರುವ ಕೃಷಿ ಆಶ್ರಮಗಳಿಗೂ ಭೇಟಿ ನೀಡಲು ಯೋಚಿಸಲಾಗಿದೆ. ಆಸಕ್ತರು ಶ್ರೀ ಡಾ.ಬಿ.ಎಂ.ನಾಗಭೂಷಣ ರವರೊಂದಿಗೆ ಚರ್ಚಿಸುವುದು ಸೂಕ್ತವಾಗಿದೆ.