23rd April 2025
Share

TUMAKURU:SHAKTHIPEETA FOUNDATION

ವಿಜ್ಞಾನಿ ಶ್ರೀ ಬಿ.ಎಂ.ನಾಗಭೂಷಣ ಭೀಮಸಮುದ್ರವರವರು ಮತ್ತು ಶ್ರೀ ಮಾರುತಿರಾವ್ ರವರು ಆಡ್ಮಿನ್ ಆಗಿ ಆರಂಭಿಸಿರುವ, 1008 ಕೃಷಿ ಆಶ್ರಮ ವಾಟ್ಸ್ ಅಫ್ ಗ್ರೂಪ್‍ನಲ್ಲಿ ಹಾಲಿ 315 ಜನ ಸದಸ್ಯರು ಇದ್ದಾರೆ. ಇವರೆಲ್ಲಾ ಬಹುತೇಕ ಕೃಷಿ ಆಶ್ರಮಗಳನ್ನು ಆರಂಭಿಸಿರುವವರು ಮತ್ತು ಆರಂಭಿಸಲು ಯೋಚಿಸಿರುವವರು  ಎಂಬ ಭಾವನೆ ನನ್ನದಾಗಿದೆ.

ಪ್ರತಿಯೊಬ್ಬ ಸದಸ್ಯರು ಹೊಸದಾಗಿ ಕೃಷಿ ಆಶ್ರಮ ಆರಂಭಿಸುವ ಕನಿಷ್ಠ ಜನರನ್ನು ಹುಡುಕಿದರೆ 315 + 945 = 1260 ಜನರು ಆಗಲಿದ್ದಾರೆ. ಇದರಲ್ಲಿ ವಿವಿಧ ಕಾರಣಗಳಿಂದ 250 ಜನರು ಕೃಷಿ ಆಶ್ರಮ ಆರಂಭಿಸಿದಿದ್ದರೂ, 1008 ಕೃಷಿ ಆಶ್ರಮಗಳ ಸೈನ್ಯ 2025 ರಲ್ಲಿಯೇ ಸಿದ್ಧವಾಗಲಿದೆ.

ಇಂದಿನಿಂದ(23.04.2025) ಅಭಿಯಾನ ಆರಂಭಿಸಿ, ದಿನಾಂಕ:30.04.2025 ರೊಳಗೆ ಕರ್ನಾಟಕ ರಾಜ್ಯದ ಸಾಂಸ್ಕøತಿಕ ನಾಯಕ ವಿಶ್ವ ಗುರು ಬಸವಣ್ಣನವರ ಜಯಂತಿ ವೇಳೆಗೆ 3 ಜನರನ್ನು ಸೇರ್ಪಡೆ ಮಾಡಲು ಶ್ರಮಿಸಲು ಹೃದಯ ಪೂರ್ವಕ ಮನವಿ ಮಾಡಲಾಗಿದೆ.

ಕನ್ನೇರಿ ಸಂಕಲ್ಪ ಸಭೆಯ ನಿರ್ಣಯದಂತೆ, ಮುಖ್ಯ ಮಂತ್ರಿಯವರ ಬಳಿ ಮತ್ತು ಪ್ರಧಾನಿಯವರ ಬಳಿ ನಿಯೋಗ ಹೋಗಲು ಭರದ ಸಿದ್ಧತೆ ಆರಂಭವಾಗಿದೆ. 1008 ಜನರ ಪಟ್ಟಿಯಾದ ನಂತರ, ಪ್ರತಿಯೊಬ್ಬರಿಗೂ  ಒಂದೊಂದು ಬೆಳೆ ನಿಗಧಿ ಗೊಳಿಸಿದ ನಂತರ ಕನ್ನೇರಿ ಶ್ರಿಗಳ ಬಳಿ ನಿಯೋಗ ಹೋಗಿ ಸಮಾಲೋಚನೆ ಮಾಡಬೇಕಿದೆ. ಈ ಕಾರ್ಯಕ್ರಮವೂ ಒಂದು ‘ಗಿನ್ನೀಸ್ ಅಥವಾ ಯಾವುದಾದರೂ ದಾಖಲೆ’ ಆಗಬೇಕಿದೆ.

 ಕನ್ನೇರಿ ಮಠದಲ್ಲಿ ಶ್ರೀ ಪಾಟೀಲ್‍ರವರು ಎದೆ ತಟ್ಟಿ ಘೋಷಣೆ ಮಾಡಿಸಿದ ಹಾಗೆ ‘ನಾನು ಮಹಾನ್ ವ್ಯಕ್ತಿ- ಮಹಾತ್ ಕಾರ್ಯಗಳನ್ನೇ ಮಾಡುತ್ತೇನೆ’ ಎಂಬ ಮಾತಿಗೆ ಅನುಗುಣವಾಗಿ ಒಬ್ಬೊಬ್ಬರೂ 3 ಜನ ಕೃಷಿ ಆಶ್ರಮಗಳನ್ನು ಆರಂಭಿಸಲು ಆಸಕ್ತಿ ಇರುವವರನ್ನು ಹುಡುಕಲು ಯಾವುದೇ ಅಡಚಣೆ ಆಗಲಾರದು.

ರಾಜ್ಯದ 31 ಜಿಲ್ಲೆಗಳ, 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ಕನಿಷ್ಠ 3 ಕೃಷಿ ಆಶ್ರಮಗಳಾದರೂ ಇರುವ ರೀತಿಯಲ್ಲಿ ಹುಡುಕುವುದು ಒಳ್ಳೆಯ ಬೆಳವಣಿಗೆ. ಪ್ರತಿ ಜಿಲ್ಲಾವಾರು ಸದಸ್ಯರು ಗ್ರೂಪ್ ಮಾಡಿಕೊಂಡು ಶ್ರಮಿಸುವುದು ಸೂಕ್ತವಾಗಿದೆ.

ಯಾವುದೇ ನದಿ ಹುಟ್ಟುವ ಮತ್ತು ಹರಿಯುವ ಕಡೆ ಹಾಗೂ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರವಾಸಿ ಕೇಂದ್ರಗಳ ಅಕ್ಕ ಪಕ್ಕ ಕೃಷಿ ಆಶ್ರಮಗಳನ್ನು ಆರಂಭಿಸುವುದು ಸೂಕ್ತವಾಗಿದೆ. ಪಟ್ಟಿಯನ್ನು ಪ್ರತ್ಯೇಕವಾಗಿ ಗ್ರೂಪ್‍ಗೆ ಹಾಕಲಾಗಿದೆ.

ಭೂಮಿಯಲ್ಲಿ ಹುಟ್ಟುವ 1008 ಜಾತಿಯ ಬೆಳೆ, ಕಳೆ, ಔಷಧಿ, ಹೂ,ಹಣ್ಣು, ತರಕಾರಿ, ತೋಟಗಾರಿಕೆ, ವಾಣಿಜ್ಯ, ಸಾಂಭಾರು ಮತ್ತು ಕಾಡು ಮರಗಿಡಗಳ ಪಟ್ಟಿ ಮಾಡುವ ಸಂಬಂಧ ದಿನಾಂಕ:25.04.2025 ನೇ ಶುಕ್ರವಾರದ ಂದು ಬೆಂಗಳೂರಿನಲ್ಲಿ ತಜ್ಞರ ಸಭೆ ನಡೆಸುವುದಾಗಿ ಪರಿಸರ ತಜ್ಞ ಶ್ರೀ ಜಗನ್ನಾಥ್‍ರಾವ್‍ರವರು ವಿಷಯ ಹಂಚಿಕೊಂಡಿದ್ದಾರೆ.

  ಒಂದೊಂದು ಕೃಷಿ ಆಶ್ರಮದಿಂದ, ಒಂದೊಂದು ನಿರ್ಧಿಷ್ಠ  ಬೆಳೆವಾರು ಸಂಶೋಧನೆ, ಮ್ಯೂಸಿಯಂ, ಸ್ಟಾರ್ಟ್ ಅಫ್, ಅಧ್ಯಯನ ವರದಿಗಳ ಸಂಗ್ರಹ, ನಾಲೇಡ್ಜ್ ಬ್ಯಾಂಕ್, ಪ್ರಾತ್ಯಾಕ್ಷಿಕೆ  ಮಾಡಲು, ನಿಯಾಮುನುಸಾರ ಅನುದಾನ ಪಡೆಯಲು, ಕೃಷಿ ಆಶ್ರಮವಾರು ಪ್ರತ್ಯೇಕವಾಗಿ, ವಿಶೇಷ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ವಿಜ್ಞಾನಿ ಶ್ರೀ ಬಿ.ಎಂ.ನಾಗಭೂಷಣ ಭೀಮಸಮುದ್ರವರವರೊಂದಿಗೆ ಚರ್ಚಿಸಲಾಗಿದೆ.