TUMAKURU:SHAKTHI PEETA FOUNDATION
1008 ಕೃಷಿ ಆಶ್ರಮಗಳು, ತಲಾ ಒಂದೊಂದು ತಳಿ ಗಿಡಗಳ ಮೂಲಕ, ಇಡೀ ವಿಶ್ವಕ್ಕೆ ಪರಿಚಯ ಮಾಡಿಕೊಳ್ಳುವ ಆಲೋಚನೆ ಮಾಡಿವೆ. ನನಗೆ ಈಗ ಹಲವಾರು ಜನರು ಹಂಚಿಕೊಂಡಿರುವ ಮಾಹಿತಿ ಪ್ರಕಾರ 1160 ಗಿಡಗಳ ಪಟ್ಟಿ, ಬೆಳ್ಳಾವಿ ಶ್ರೀ ಪ್ರದೀಪ್ರವರು ನೀಡಿರುವ 501 ಜಾತಿಯ ಹಣ್ಣಿನ ಗಿಡಗಳ ಪಟ್ಟಿ ಮತ್ತು ಮೈಸೂರಿನ ಜೆ.ಎಸ್.ಎಸ್. ಸಂಸ್ಥೆಯವರು ಪಟ್ಟಿ ಮಾಡಿರುವ 209 ಔಷಧಿ ಗಿಡಗಳ ಪಟ್ಟಿ ಸೇರಿ 1870 ಗಿಡಗಳ ಪಟ್ಟಿ ಸಂಗ್ರಹ ಮಾಡಲಾಗಿದೆ.
ಈ ಗಿಡಗಳಿಂದ ರೈತರಿಗೆ ಆದಾಯವೂ ಬರಬೇಕು.
ಪ್ರಕೃತಿಗೆ ಕೊಡುಗೆಯೂ ಆಗಬೇಕು.
ಮುಂದಿನ ಪೀಳಿಗೆಗೆ ಅಳಿವಿನಂಚಿನಲ್ಲಿ ಇರುವ ಗಿಡಗಳ ಪರಿಚಯವೂ ಆಗಬೇಕು.
ರಾಜ್ಯದ ಹಲವಾರು ಕಡೆ ಸಾವಿರಾರು ತಳಿಗಳ ಲೈವ್ ಮ್ಯೂಸಿಯಂ ನಿರ್ಮಾಣ ಆಗಬೇಕು.
ಗಿಡಗಳ ಬಗ್ಗೆ ಜ್ಞಾನವಿರುವ ಅಧ್ಯಯನ ಮಾಡಿರುವ, ಸಂಶೋಧನೆ ಮಾಡಿರುವ, ಬೆಳೆದಿರುªವರÀ ನಾಲೇಡ್ಜ್ ಬ್ಯಾಂಕ್ ಇರಬೇಕು.
ಬೀಜ, ಗಿಡ, ಬಳ್ಳಿ, ಕಡ್ಡಿಗಳ ಪರಿಣಿತರ ಮಾಹಿತಿ ಸಂಗ್ರಹ ಮಾಡುವ ಕೆಲಸವನ್ನು ಆರಂಭಿಸಲಾಗಿದೆ. ಒಂದೊಂದು ಗಿಡದ ಮಾಹಿತಿಗೂ ಬೆಲೆ ಕಟ್ಟಲಾಗದು. ತಮ್ಮ ಜ್ಞಾನದಾನ ಮಾಡಿ.
ದಿನಾಂಕ:15.05.2025 ರಂದು ಶಕ್ತಿಪೀಠ ಕ್ಯಾಂಪಸ್ನಲ್ಲಿ ಸಮಾಲೋಚನೆ ಮಾಡಲಾಗುವುದು, ಆಸಕ್ತರು ಗಿಡಗಳ ಮಾಹಿತಿಯೊಂದಿಗೆ/ ಪಟ್ಟಿಯೊಂದಿಗೆ ಬರುವುದಾದರೆ ಸ್ವಾಗತ.
ಆಸಕ್ತರಿಗೆ 1870 ಗಿಡಗಳ ಪಟ್ಟಿ ಬೇಕಾದಲ್ಲಿ ಹಾಗೂ ಶಕ್ತಿಪೀಠ ಕ್ಯಾಂಪಸ್ ಲೊಕೇಷನ್ ಅಗತ್ಯವಿದ್ದಲ್ಲಿ ಕರೆ ಮಾಡಿ.