27th July 2025
Share

TUMAKURU:SHAKTHI PEETA FOUNDATION

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿನ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ  ಅಧ್ಯಕ್ಷರಾದ ಶ್ರೀ ಎ.ಹೆಚ್.ರಾಜಸಾಬ್ ರವರು ಕಳೆ-ಬೆಳೆ ಮ್ಯೂಸಿಯಂ’ ಮಾಡಲು ಸಲಹೆ ನೀಡಿದ್ದಾರೆ. ನಾನು 7 ಪ್ರಸ್ತಾವನೆಗಳನ್ನು ಅವರಿಗೆ ಸಲ್ಲಿಸಿದ್ದ ಹಿನ್ನಲೆಯಲ್ಲಿ, ಅವರು ನನಗೆ ಆಧ್ಯತೆ ಮೇಲೆ ಈ ಯೋಜನೆ ಮುಂದಿಟ್ಟಿದ್ದಾರೆ ಎಂಬ ಭಾವನೆ ನನ್ನದಾಗಿದೆ.

ಸ್ಥಳದಲ್ಲಿಯೇ ಹಾಜರಿದ್ದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ್ ಆರ್ ರವರು ಹೌದು ಸಾರ್, ನಮ್ಮ ಅಕಾಡೆಮಿಯ ಉದ್ದೇಶಗಳಿಗೆ ಪೂರಕವಾಗಿಯೂ ಇದೆ, ನಾಲೇಡ್ಜ್ ಬ್ಯಾಂಕ್ @ 2047’ ಗೂ ಪೂರಕವಾಗಿದೆ.

ಈ ಭೂಮಿಯಲ್ಲಿ ಹುಟ್ಟುವ ಪ್ರತಿಯೊಂದು ಕಳೆ-ಬೆಳೆ ಬಗ್ಗೆ, ಫಿಸಿಕಲ್, ಡಿಜಿಟಲ್ ಮತ್ತು ಹ್ಯೂಮನ್ ಲೈಬ್ರರಿ ಮಾಡುವ ಅಗತ್ಯವೂ ಇದೆ. ಪ್ರತಿಯೊಂದು ಗಿಡಗಳ ಬಗ್ಗೆ ವೈಜ್ಞಾನಿಕ/ಮೌಡ್ಯ/ಮೂಡನಂಬಿಕೆ/ ಧಾರ್ಮಿಕ/ಪುರಾಣ/ಇತಿಹಾಸ/ನಂಬಿಕೆಗಳ ಬಗ್ಗೆ ಇದೂವರೆಗೂ ಸಂಶೋಧನೆ ಮಾಡಿರುವವರ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿದರೆ, ಅದೇ ಒಂದು ದೊಡ್ಡ ಯೋಜನೆಯಾಗಲಿದೆ ಎಂದು ಪ್ರತಿಪಾದಿಸಿದರು.

  ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಪ್ರಮುಖ ಉದ್ದೇಶ, ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡುವುದಾಗಿದೆ.

ಯಾವ ಬೆಳೆಗೆ, ಎಷ್ಟು ನೀರನ್ನು, ಹೇಗೆ ಬಳಸ ಬೇಕು ಎಂಬುದು ಪ್ರಮುಖ ಉದ್ದೇಶವೂ ಆಗಿದೆ. ನೀರು/ಗಂಗಾಮಾತೆ ಮತ್ತು ಶಕ್ತಿಪೀಠಗಳಿಗೂ ಇರುವ ಸಂಭಂಧಗಳ ಅಧ್ಯಯನ ಅಗತ್ಯವೂ ಇದೆ.

  ಶಕ್ತಿದೇವತೆ ದೇವಾಲಯಗಳ ಜೊತೆಗೆ, ನೀರು, ಮರಗಿಡ, ನದಿ,ಕೊಳ್ಳಗಳಲ್ಲಿ ನೆಲಸಿರುವುದು ಹೆಚ್ಚು ಎಂಬುದು ನಮ್ಮ ನಂಬಿಕೆಯಾಗಿದೆ. ಇದರ ಸಂಶೋಧನೆಗಳ ಮಾಹಿತಿ ಸಂಗ್ರಹ ಮಾಡುವ ಉದ್ದೇಶದಿಂದಲೇ ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಅಳಿವಿನಂಚಿಲ್ಲಿರುವ 1000 ಪ್ರಭೇಧ’ಗಳಿಗೂ ಹೆಚ್ಚು ಗಿಡ ಬೆಳೆಸಲು ನಮ್ಮ ಸಂಸ್ಥೆ ಈಗಾಗಲೇ ಆರಂಭಿಸಿದೆ, ಕೃತಿ ಮತ್ತು ಅನುಭವ’ ಮಾತನಾಡಬೇಕು, ಬುರುಡೆ ಅಗತ್ಯವಿಲ್ಲ.

ನದಿ, ನದಿ ಜೋಡಣೆ, ಜಲಸಂಗ್ರಹಾಗಾರಗಳನ್ನು, ಗಂಗಾಮಾತೆ ದೇವಾಲಯ ಎಂದು ಪೂಜಿಸುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಇವುಗಳ ಸಂರಕ್ಷಣೆ, ಸ್ವಚ್ಚತೆ, ಅಭಿವೃದ್ಧಿಗೂ ಇದು ಅಗತ್ಯವಾಗಿದೆ,  ಎಂಬ ಪರಿಕಲ್ಪನೆಯಡಿಯಲ್ಲಿ, ಒಂದು ಕೋಟಿ ಲೀಟರ್ ನೀರು ಸಾಮಾಥ್ರ್ಯದ ಅರಭ್ಬಿ ಸಮುದ್ರÀ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರಗಳನ್ನು ಶಕ್ತಿಪೀಠ ಕ್ಯಾಂಪಸ್‍ನಲ್ಲಿ ನಿರ್ಮಾಣ ಮಾಡಿ ಪೂಜಿಸಲಾಗುತ್ತಿದೆ.

ಮರಗಿಡಗಳ ಬಗ್ಗೆ ಇರುವ ಧಾರ್ಮಿಕ ನಂಬಿಕೆಗಳಿಂz ಹಲವಾರು ಜಾತೀಯ ಮರಗಳನ್ನು ಕಡಿಯಲು ಜನರು ಭಯಪಡುತ್ತಾರೆ. ‘ಧಾರ್ಮಿಕ ಕೃಷಿ, ಧ್ಯಾನ ಕೃಷಿ ಮತ್ತು ವೇದ ಕೃಷಿ’ ಬಗ್ಗೆಯೂ ಜನರಿಗೆ ಅರಿವೂ ಮೂಡಿಸುವ ಕೆಲಸ ಆಗಬೇಕಿದೆ, ಇವು ಕೃಷಿ ಆಶ್ರಮಗಳ ಉದ್ದೇಶಗಳಲ್ಲಿಯೂ ಇವೆ ಎಂಬ ಮಾಹಿತಿ ಹಂಚಿಕೊಳ್ಳಲಾಯಿತು.

ಕೃಷಿ ಆಶ್ರಮ ಬಂಧುಗಳೇ, ಮರಗಿಡ ಜ್ಞಾನಿಗಳ ಮಾಹಿತಿ ಪಡೆಯುವುದೇ ತಮ್ಮ ಮೊದಲ ಕರ್ತವ್ಯವಾಗಿದೆ, ಬೋಗಸ್ ಗೊಬ್ಬರ, ಬೋಗಸ್ ಔಷಧಿ, ಬೋಗಸ್ ಬೀಜ, ಬೋಗಸ್ ಗಿಡಗಳ ಬಲೆಯಲ್ಲಿ ಸಿಕ್ಕಿ ನರಳುವ ಪರಿಸ್ಥಿತಿಗೆ ಇತಿ ಶ್ರೀ ಆಡಲೇ ಬೇಕಿದೆ.

ಇದಕ್ಕೆ ಪೂರಕವಾಗಿ, ಬಹುಪಯೋಗಿ ಶಕ್ತಿಪೀಠ ಕ್ಯಾಂಪಸ್ ತಲೆ ಎತ್ತುತ್ತಿದೆ, ಆರಂಭದಲ್ಲಿಯೇ ಜ್ಞಾನಿಗಳ ಸಲಹೆ, ಮಾರ್ಗದರ್ಶನದ ಜೊತೆಗೆ, ಸರ್ಕಾರದ ಅನುಮೋದನೆ/ಸರ್ಟಿಫಿಕೇಷನ್ ಮಾಡಿಸುವ ಮೂಲಕ ಹೆಜ್ಜೆ ಇಡುವುದು ಸೂಕ್ತವಾಗಿದೆ.

ದಿನಾಂಕ:01.08.2025 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ನಡೆಯುವ ಸಭೆಯಲ್ಲಿ, ಪೇಪರ್ ಮೇಲಿನ ಮಾಸ್ಟರ್ ಪ್ಲಾನ್ ಜೊತೆಗೆ, ಲೈವ್ ಪ್ರಾಜೆಕ್ಟ್ ಆಗಿ, ಒಂದು ಇಂಚಿನ ಭೂಮಿಯ ಬಳಕೆ ಬಗ್ಗೆಯೂ, ಎಲ್ಲವನ್ನೂ ಅನುಭವಿಸಿದ ನಂತರ ತಮ್ಮ, ಸಲಹೆ ಮಾರ್ಗದರ್ಶನ ನೀಡಬೇಕಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧಪಡಿಸಲು ಅನೂಕೂಲವಾಗಲಿದೆ.

ರಾಜಸಾಬ್ ರವರು, ಅವರ ಆಡಳಿತ ಮಂಡಳಿ ಪದಾಧಿಕಾರಿಗಳು, ನೌಕರವರ್ಗ, ಸಿಬ್ಬಂದಿ, ಇದೂವರೆಗೂ ಎಂ.ಓ.ಯು ಮಾಡಿಕೊಂಡಿರುವ ಸಂಸ್ಥೆಗಳು, ಹೇಗೆ ಬೆಂಬಲ ವ್ಯಕ್ತ ಪಡಿಸುತ್ತವೆ ಎಂಬುದನ್ನು ಕಾದು ನೋಡೋಣ ?

ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹಣ ಕೊಡಿಸುವ ಹೊಣೆಗಾರಿಕೆ ನಮ್ಮ ಸಂಸ್ಥೆಯದ್ದು,  ಅನುಷ್ಠಾನ ಮಾಡುವುದು ಅಕಾಡೆಮಿಯ ಹೊಣೆಗಾರಿಕೆ ಆಗಬೇಕು ಎಂಬುದು ನಮ್ಮ ಉದ್ದೇಶ, ಮತ್ತೆ ನಿರ್ವಹಣೆಯನ್ನು ಕೃಷಿ ಆಶ್ರಮಗಳೇ ಮಾಡಲು ಮುಂದೆ ಬಂದಿವೆ. ನಿಯಾಮುನುಸಾರ ‘ಟ್ರೈಪಾಯಿಡ್ ಅಗ್ರಿಮೆಂಟ್ ಮಾಡಿ’ ಸಚಿವ ಸಂಪುಟದ ಅನುಮೋದನೆ ನೀಡಲು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಶ್ರೀ ಎನ್.ಎಸ್. ಬೋಸರಾಜ್ ರವರು  ಮತ್ತು ಅವರ ಆಪ್ತ ಕಾರ್ಯದರ್ಶಿ ಶ್ರೀ ವೀರಭಧ್ರ ಹಂಚಿನಾಳರವರು ತುದಿಗಾಲಲ್ಲಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.