4th March 2026
Share

TUMAKURU:SHAKTHI PEETA FOUNDATION

ಎನ್.ಡಿ.ಎ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್  ನೇತೃತ್ವದ ಸರ್ಕಾರ ಇದೆ ಎಂದು, ವಿವಿಧ ಯೋಜನೆಗಳಿಗೆ ಅನುದಾನ ನೀಡದೇ ಇರುವುದು ಸರಿಯಲ್ಲ, ಈ ಬಗ್ಗೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಮತ್ತು ಸಂಸದರು ಪಕ್ಷಾತೀತವಾಗಿ ಶ್ರಮಿಸುವುದು ಅಗತ್ಯವಾಗಿದೆ.

ಈ ಹಿನ್ನಲೆಯಲ್ಲಿ ಕೃಷಿ ಆಶ್ರಮಗಳ ನಿಯೋಗ ದೆಹಲಿಗೆ ಹೋಗಿ ಕೇಂದ್ರ ಸಚಿವರ ಗಮನ ಸೆಳೆಯಲು ಚಿಂತನೆ ನಡೆಸುತ್ತಿದೆ. ಜಲಶಕ್ತಿ ಯೋಜನೆಗಳಿಗೆ, ಸೆಂಟರ್ ಎಕ್ಸ್‍ಲೆನ್ಸ್ ಆರ್ಟಿಫೀಷಿಯಲ್ ಇಂಟಲಿಜೆನ್ಸ್, ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅನುದಾನ ಮತ್ತು ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಮಾಡಲು ಜಮೀನು ಮಂಜೂರಾತಿ ಬಗ್ಗೆ ವಿಶೇಷ ಗಮನ ಸೆಳೆಯಲಾಗುವುದು. ನೀತಿ ಆಯೋಗಕ್ಕೂ ಭೇಟಿ ಮಾಡಿ ಕೃಷಿ ಆಶ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು.

ನಿಯೋಗದಲ್ಲಿ ಆಗಮಿಸುವವರು ತಮ್ಮ ಸ್ವಂತ ಖರ್ಚಿನಲ್ಲಿ ಬರುವುವದಾರೆ ಬಹಿರಂಗ ಮನವಿ.  ದೆಹಲಿಯಲ್ಲಿ ಉಳಿಯಲು ಸಹ ಮನೆ ಇಲ್ಲ, ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಇರುವವರೆಗೂ ಎಲ್ಲಾ ಸೌಲಭ್ಯ ಇರುತ್ತಿತ್ತು. ಈಗ ಸರ್ಕಾರಿ ಕೆಲಸ ಮಾಡಲು ಕರ್ನಾಟಕ ಭವನದಲ್ಲಿ, ದಿನಕ್ಕೆ ಒಂದು ಬೆಡ್‍ಗೆ ರೂ 2000 ಪಾವತಿಸಿ ಉಳಿದು ಕೊಳ್ಳುವ ಕರ್ಮ ನಮ್ಮದಾಗಿದೆ.