TUMAKURU:SHAKTHIPEEATA FOUNDATION
ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ ಪ್ರತಿ ಸೋಮವಾರ, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಟಾಸ್ಕ್ ಪೋರ್ಸ್ ಸಮಿತಿ ಪಧಾದಿಕಾರಿಗಳ ಸಭೆ ನಡೆಸಲು, ದಿನಾಂಕ:18.08.2025 ರಂದು ನಡೆದ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ದಿನಾಂಕ:25.08.2025 ರಂದು ಟಾಸ್ಕ್ ಪೋರ್ಸ್ ಸಮಿತಿ ಪಟ್ಟಿಯನ್ನು ಘೋಷಣೆ ಮಾಡಲಾಗುವುದು.
ಕರ್ನಾಟಕ ರಾಜ್ಯದ್ಯಾಂತ ರಚನೆಯಾಗುತ್ತಿರುವ ಕೃಷಿ ಆಶ್ರ್ರಮಗಳಿಗೆ, ಮೊದಲನೇ ಹಂತದಲ್ಲಿ 44 (28 ಲೋಕಸಭಾ ಕ್ಷೇತ್ರ, 14 ರಾಜ್ಯ ಸಭಾ ಸದಸ್ಯರು, ಇಬ್ಬರು ದೆಹಲಿ ಪ್ರತಿನಿಧಿ ವ್ಯಾಪ್ತಿಯ) ಕೃಷಿ ಆಶ್ರಮಗಳಿಗೆ ವಿವಿಧ ಸಮಿತಿಗಳ ಹೊಣೆಗಾರಿಕೆ ನೀಡಲಾಗುವುದು. ಆಸಕ್ತರು ಡಾ.ನಾಗಭೂಷಣ್ ರವರ ಜೊತೆ ಚರ್ಚಿಸಬಹುದಾಗಿದೆ.
ಈ ಸಮಿತಿಯ ಪ್ರಮುಖರೇ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಟಾಸ್ಕ್ ಪೋರ್ಸ್ ಸದಸ್ಯರಾಗಿರುತ್ತಾರೆ. ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿನ, ‘ಕರ್ನಾಟಕ ರಾಜ್ಯ ಸ್ಟೇಟ್ ರೀಸರ್ಚ್ ಫೌಂಡೇಷನ್ ಪಾಲಿಸಿ’ ಗೆ ಪೂರಕವಾಗಿ ಮತ್ತು ಕೇಂದ್ರ ಸರ್ಕಾರದ ನೀತಿ ಆಯೋಗದ ‘ಗುಡ್ ಗೌರ್ವನೆನ್ಸ್ ಇಂಡೆಕ್ಸ್‍ಗೆ’ ಅನುಗುಣವಾಗಿ ಸಮಿತಿ ಕಾರ್ಯನಿರ್ವಹಿಸಲಿದೆ.
ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಟಾಸ್ಕ್ ಪೋರ್ಸ್ ಮೊದಲ ಸಭೆಯು ತುಮಕೂರಿನ ಶಕ್ತಿಭವನದಲ್ಲಿ ನಡೆಯಲಿದೆ, ನಂತರ ತಿಂಗಳಿಗೊಮ್ಮೆ ಒಂದೊಂದು ಕೃಷಿ ಆಶ್ರಮಗಳಲ್ಲಿ ನಿರಂತರವಾಗಿ, ಸಭೆಗಳನ್ನು ಆಯೋಜಿಸಲಾಗುವುದು.