TUMAKURU: SHAKTHIPEETA FOUNDATION
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ‘ಶ್ರೀ ಎನ್.ಎಸ್.ಬೋಸರಾಜ್’ ರವರಿಗೆ, ವಿಜ್ಞಾನ ಮತ್ತು ಸಂಶೋದನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು, ಪ್ರತಿ ಗ್ರಾಮ/ಬಡಾವಣೆಗಳ ವಿದ್ಯಾರ್ಥಿಗಳು ಒಂದಲ್ಲ, ಒಂದು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ ಬೇಕು, ಈ ಬಗ್ಗೆ ವ್ಯಾಪಕ ಜನ ಜಾಗೃತಿ ಆಂದೋಲನವನ್ನು ರಾಜ್ಯದ ರೈತರೇ ವಹಿಸಿಕೊಳ್ಳುತ್ತೇವೆ, ಎಂಬ ಕೃಷಿ ಆಶ್ರಮಗಳ ನೀಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ಈ ಬಗ್ಗೆ ಹಿರಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲು ಸಲಹೆ ನೀಡಿದ್ದಾರೆ, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ‘ರಾಜ್ಯದಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ’ಯನ್ನು ರೂಪಿಸುವ ಕಾರ್ಯಪಡೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ಹುಬ್ಬಳ್ಳಿಯ ಕೆ.ಎಲ್.ಇ ಟೆಕ್ನಿಕಲ್ ವಿಶ್ವ ವಿದ್ಯಾನಿಲಯದ ಉಪಕುಲ ಪತಿಗಳಾಗಿದ್ದ ‘ಡಾ.ಅಶೋಕ್ ಎಸ್ ಶೆಟ್ಟರ್ ರವರ ಬಳಿ, ಕೃಷಿ ಆಶ್ರಮಗಳ ನಿಯೋಗ’ ದಿನಾಂಕ: 28.08.2025 ಮತ್ತು 29.08.2025 ರಂದು ಭೇಟಿಯಾಗಿ ಸಮಾಲೋಚನೆ ನಡೆಸಲು ಅವರ ಅನುಮತಿ ಪಡೆಯಲಾಗಿದೆ.
ಈ ಸಭೆಯಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ. ನಿಯೋಗದಲ್ಲಿ ಭಾಗವಹಿಸುವವರು ಡಾ.ಬಿ.ಎಂ.ನಾಗಭೂಷಣ್ ರವರೊಂದಿಗೆ ಸಮಾಲೋಚನೆ ನಡೆಸಲು ಬಹಿರಂಗ ಮನವಿ ಮಾಡಲಾಗಿದೆ.



ಈ ಅಂಶಗಳ ಸಾಧಕ-ಭಾಧಕಗಳ ಬಗ್ಗೆ, ದಿನಾಂಕ:25.08.2025 ರಂದು ಬೆಂಗಳೂರಿನ ವನಲೋಕ ಫೌಂಢೇಷನ್‍ನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ನಂತರ ಕಾರ್ಯಕ್ರಮದ ಸ್ಥಳ, ವೇಳೆ, ವಸತಿ ಬಗ್ಗೆ ಮಾಹಿತಿ ನೀಡಲಾಗುವುದು.