23rd August 2025
Share

TUMAKURU:SHAKTHI PEETA FOUNDATION

  ಮಹಾರಾಷ್ಟ್ರದ ಕನ್ನೇರಿ ಶ್ರೀಗಳ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದಲ್ಲಿ 108 ಕೃಷಿ ಆಶ್ರಮಗಳ ಸುದ್ದಿ ಮಾಡುತ್ತಿದ್ದವರಲ್ಲಿ ಮೊದಲಿಗೆ ನನಗೆ ಪರಿಚಯವಾಗಿದ್ದು,  ಡಾ.ನಾಗಭೂಷಣ್ ರವರು ಮತ್ತು ಮಾರುತಿ ರಾವ್ ರವರು, ಅದು ಶ್ರೀಗಂಧ ಕೃಷಿ ಆಶ್ರಮದ ಎಸ್.ಪಿ.ರಾಜೇಶ್ ರವರ ಮೂಲಕ.

ಈಗ ಸಾವಿರಾರು ಜ್ಞಾನಿಗಳ ಒಡನಾಟ ಕಳೆದ ಒಂದು ವರ್ಷದಲ್ಲಿ ಆಗಿದೆ. ನಿಜಕ್ಕೂ ಅವರ ವಿಚಾರಧಾರೆಗಳಿಗೆ ಬೆಲೆ ಕಟ್ಟಲು ಸಾದ್ಯಾವಿಲ್ಲ, ವಾಟ್ಸ್ ಅಫ್ ಗ್ರೂಪ್ ನಲ್ಲಿ ಹಾಕುವ ವಿಚಾರಗಳನ್ನು ನೋಡಿದರೆ, ನನಗೆ ಹೊಟ್ಟೆ ಉರಿಯುತ್ತೆ. ಇಂತಹ ಮಹತ್ವದ ವಿಚಾರಗಳು ‘ಡಿಜಿಟಲ್ ಪ್ಲಾಟ್ ಫಾರಂ’ ನಲ್ಲಿ ಸದಾ ಉಳಿಯ ಬೇಕು ಎಂಬ ಹಂಬಲ ನನ್ನದಾಗಿದೆ. 

ನಾಲೇಡ್ಜ್ ಬ್ಯಾಂಕ್ ಪರಿಕಲ್ಪನೆಯೂ ಇದೆ ಆಗಿದೆ. ಜ್ಞಾನ ಸೇತು ಫೌಂಡೇಷನ್‍ನವರು ದಾನ ನೀಡಲು ಮುಂದಾಗಿದ್ದರೂ, ನಮ್ಮ ಕನಸಿನ ಡಿಟಲ್ ಪ್ಲಾಟ್ ಫಾರಂ ಮಾಡುವವರು ಇನ್ನೂ ಸಿಕ್ಕಿಲ್ಲ.

ಕೃಷಿ ಆಶ್ರಮಗಳ ಹರಿಕಾರರು ಇದೂವರೆಗೂ ಯಾರ ಬಳಿಯು ಹಣ ಪಡೆಯದೆ, ಕಳೆದ ಹಲವಾರು ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ನನಗಿದೆ.

ಈಗ ಕಾರ್ಪೋರೇಟ್ ಮಾದರಿ ಸಂಘಟನೆಗೆ ದಾಪು ಕಾಲಿಡ ಬೇಕು ಎಂಬ ಬಯಕೆ ಎಲ್ಲರಲ್ಲೂ ಇದೆ. ಹಣಕಾಸು ಹೇಗೆ ಹೊಂದಿಸಬೇಕೆಂಬ ಚರ್ಚೆ ಆರಂಭವಾಗಿದೆ. ಈ ಎಲ್ಲಾ ಮಾಹಿತಿಗಳನ್ನು ಒಳಗೊಂಡ ದುಡ್ಡಿಲ್ಲ – ಕಾಸಿಲ್ಲ – ಕೃಷಿ ಆಶ್ರಮಗಳ ರಥ ಎಳೆಯೋರಿಗೆ ಬಹಿರಂಗ ಮನವಿ’ ಎಂಬ ಕಿರು ಹೊತ್ತಿಗೆ ತರಬೇಕೆಂಬ ಹಂಬಲ ಇದೆ,

ಹಲವಾರು ಕೃಷಿ ಆಶ್ರಮಗಳ ಜ್ಞಾನಿಗಳು ಈಗಾಗಲೇ ಸಾಧಕರಾಗಿದ್ದಾರೆ, ಇನ್ನೂ ಹಲವಾರು ಜನ ಈಗ ಯೋಜನೆ ರೂಪಿಸುತ್ತಿದ್ದಾರೆ, ಇನ್ನೂ ನೂರಾರು ಜನರು ಜೊತೆ, ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ.

ಬೆಂಗಳೂರಿನ ಸಭೆ 25 ಬದಲು 26 ರಂದು ನಡೆಯಲಿದೆ.

 ದಿನಾಂಕ:25.08.2025 ರಂದು ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ ನಡೆಯ ಬೇಕಾಗಿದ್ದ, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯನ್ನು ಕಾರಾಣಂತರಗಳಿಂದ ಒಂದು ದಿನ ಮುಂದೂಡಲಾಗಿದೆ.

ದಿನಾಂಕ:26.08.2025 ನೇ ಮಂಗಳವಾರ 2 ಗಂಟೆಗೆ ಸಭೆ ನಡೆಯಲಿದೆ, ಆಸಕ್ತರು ಭಾಗವಹಿಸಲು ಮನವಿ. ಈ ಸಭೆಯಲ್ಲಿ ಈ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು.