13th September 2025
Share

TUMAKURU:SHAKTHI PEETA FOUNDATION

ಸೆಪ್ಟೆಂಬರ್, 5-6-7  ರಂದು, ಮೂರು ದಿವಸಗಳ ಕಾಲ, ಹುಬ್ಬಳ್ಳಿ- ಧಾರವಾಡದ ಯಾವುದಾದರೊಂದು ಕೃಷಿ ಆಶ್ರಮದಲ್ಲಿ, ಕರ್ನಾಟಕ ರಾಜ್ಯ ಮಟ್ಟದ ಕೃಷಿ ಆಶ್ರಮ ಟಾಸ್ಕ್ ಪೋರ್ಸ್ ಪ್ರಥಮ ಕಾರ್ಯಾಗಾರ’ ನಡೆಸಲು, ದಿನಾಂಕ:26.08.2025 ರಂದು ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ ನಡೆದ ಕೃಷಿ ಆಶ್ರಮಗಳ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ರಾಜ್ಯ ಸರ್ಕಾರ ರಚಿಸಿದ್ಧ ರಾಜ್ಯದಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ’ಯನ್ನು ರೂಪಿಸುವ ಕಾರ್ಯಪಡೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ಹುಬ್ಬಳ್ಳಿಯ ಕೆ.ಎಲ್.ಇ ಟೆಕ್ನಿಕಲ್ ವಿಶ್ವ ವಿದ್ಯಾನಿಲಯದ ಉಪಕುಲಪತಿಳಾಗಿದ್ದ ಡಾ.ಅಶೋಕ್ ಎಸ್ ಶೆಟ್ಟರ್  ರವರೊಂದಿಗೆ, ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್‍ನಲ್ಲಿ ಕೃಷಿ ಸಂಶೋದನೆಗಳ ರೀತಿ, ನೀತಿಯ ಬಗ್ಗೆ ಸಮಾಲೋಚನೆ ನಡೆಸಲಾಗುವುದು.ಸಾದ್ಯವಾದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರೊಂದಿಗೂ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ.

ಶೀಘ್ರದಲ್ಲಿ ಡಾ.ನಾಗಭೂಷಣ್‍ರವರು, ಡಾ.ಜಗನ್ನಾಥ್‍ರವರು, ಡಾ.ಸಂತೋóಷ್ ರವರ ತಂಡ  ವಿವಿಧ ಕಾರ್ಯಕ್ರಮಗಳ ವೇಳಾ ಪಟ್ಟಿ ಪ್ರಕಟಿಸಿಲಿದ್ದಾರೆ. ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು, ಡಾ.ನಾಗಭೂಷಣ್‍ರವರೊಂದಿಗೆ ಸಮಾಲೋಚನೆ ನಡೆಸಲು ಬಹಿರಂಗ ಮನವಿ ಮಾಡಲಾಗಿದೆ.

1.            ಕೃಷಿ ಆಶ್ರಮ

2.            ಕೃಷಿ ಆಶ್ರಮಗಳಲ್ಲಿ-ಕೃಷಿ ಗುರುಕುಲ

3.            ಕೃಷಿ ಆಶ್ರಮಗಳಲ್ಲಿ- ಕಳೆ ಬೆಳೆ ನಾಲೇಡ್ಜ್ ಬ್ಯಾಂಕ್

4.            ಕೃಷಿ ಆಶ್ರಮಗಳಲ್ಲಿ- ಅಗ್ರಿಟೂರಿಸಂ

5.            ಕರ್ನಾಟಕ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಕೋರ್ ಕಮಿಟಿ.

6.            ಕರ್ನಾಟಕ ರಾಜ್ಯ ಮಟ್ಟದ ಕೃಷಿ ಆಶ್ರಮ ಟಾಸ್ಕ್ ಪೋರ್ಸ್ ಸಮಿತಿ ಪಧಾದಿಕಾರಿಗಳ ಪಟ್ಟಿ.

7.            ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕೃಷಿ ಆಶ್ರಮಗಳ ಸಂಚಾಲಕರ ಪಟ್ಟಿ.

8.            ನಂಬರ್ ಒನ್ ಕರ್ನಾಟಕ – ನಾಲೇಡ್ಜ್ ಬ್ಯಾಂಕ್

9.            ತುಮಕೂರು ವಿಶ್ವ ವಿದ್ಯಾನಿಲಯದಲ್ಲಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಸಹಭಾಗಿತ್ವದಲ್ಲಿ, ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಮಾವೇಶ.

ಈ 9 ಅಂಶಗಳ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು.