TUMAKURU:SHAKTHIPEETA FOUNDATION
ಕಳೆದ 10 ವರ್ಷಗಳಿಂದ ಶಕ್ತಿಪೀಠ ವನ ನಿರ್ಮಾಣ ಮಾಡಲು ಆಲೋಚನೆ ನಡೆದಿತ್ತು. ಆರಂಭದಲ್ಲಿ ಸುಮಾರು 480 ಜಾತಿ ಗಿಡಗಳನ್ನು ಪಾರಂಪರಿಕ ವೈಧ್ಯ ಶ್ರೀ ಗುರುಸಿದ್ದಾರಾದ್ಯ ಶ್ರೀ ಗೋವಿಂದಪ್ಪ, ಶ್ರೀ ಚಂದ್ರಪ್ಪ ರವರ ಸಲಹೆ ಮೇರೆಗೆ ತಂದು ಹಾಕಿದರೂ ನನಗೆ ನೆಮ್ಮದಿ ಇಲ್ಲ.
ಕಾರಣ ಯಾವ ದಿಕ್ಕಿನಲ್ಲಿ ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಸರ್ಟಿಫಿಕೇಷನ್ ಸಹಿತ ನಕ್ಷೆ ನೀಡಲು ಸುತ್ತಬಾರದ ಕಡೆ ಸುತ್ತಿದ್ದೇನೆ. ಡಾ.ಜಗನ್ನಾಥ್ ರಾವ್ ಕಳೆದ ಒಂದು ವರ್ಷದಿಂದ ಅವರದೇ ಧಾಟಿಯಲ್ಲಿ ಸಿದ್ಧತೆ ಮಾಡುತ್ತಿದ್ದಾರೆ. ಸುಮಾರು 1120 ಪ್ರಭೇಧಗಳ ಪಟ್ಟಿ ಬಹುತೇಕ ಸಿದ್ಧವಾಗಿದೆಯಂತೆ.
ದಿನಾAಕ:19.01.2026 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಗೆ ಶ್ರೀ ಗೋವಿಂದರಾಜು ಬಂದಿದ್ದರು, ಅವರ ಜೊತೆ ಜಗನ್ನಾಥ್ರಾವ್ರವರು, ಡಾ.ನಾಗಭೂಷಣ್ ರವರು ಮತ್ತು ನಾನು ಚರ್ಚಿಸುವಾಗ ಅವರು ನರ್ಸರಿ ವ್ಯವಹಾರ ನಡೆಸುತ್ತಿದ್ದು, ಯಾವುದೇ ಗಿಡಬೇಕಾದರೂ ಸರಬರಾಜು ಮಾಡುತ್ತೇನೆ, ಎಲ್ಲೆ ಇದ್ದರೂ ತರಿಸಿಕೊಡುತ್ತೇನೆ ಎಂದರು.
ನಾನು ಸಭೆ ಮುಗಿದ ನಂತರ ಬೆಂಗಳೂರಿನ ಅವರ ಮನೆಗೆ ಹೋಗಿ, ಶಕ್ತಿಪೀಠ ವನದ ಗಿಡಗಳ ಬಗ್ಗೆ ಸಮಾಲೋಚನೆ ನಡೆಸಿದಾಗ ನಿಯಮನುಸಾರ ಗಿಡಗಳ ಮಾಹಿತಿಯನ್ನು ನಾನು ನೀಡುತ್ತೇನೆ, ಆದರೇ ಸರ್ಟಿಫೀಕೇಷನ್ ಮಾಡಿಸುವ ಕೆಲಸ ನಿಮ್ಮದು ಎಂದಾಗ ನನಗೆ ಖುಷಿಯಾಯಿತು.
ಯಾರೋ ಒಬ್ಬರಾದರೂ ಈ ರೀತಿ ಮಾತನಾಡಿದರಲ್ಲ ಎಂಬ ಭರವಸೆ ನನಗೆ ಆಗಿದೆ. ಈಗಾಗಲೇ ಅವರು ಕಾರ್ಯಾರಂಭ ಮಾಡಿದ್ದಾರೆ.ಇದೂವರೆಗೂ ಗಿಡಗಳ ಬಗ್ಗೆ ಶ್ರಮಿಸಿರುವವರು ಮತ್ತು ಸಹಕರಿಸಿದವರ 9 ಜನರ ಗ್ರೂಪ್ ರಚಿಸಲಾಗಿದೆ. ಇವರು ನೀಡುವ ಗಿಡಗಳ ಮಾದರಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂಕ್ತ ಪ್ರಾಧಿಕಾರದಲ್ಲಿ ಸರ್ಟಿಫಿಕೇಷನ್ ಮಾಡಿಸುವುದು ಅಗತ್ಯವಾಗಿದೆ. ಆ ಕೆಲಸ ನಾನು ಮಾಡಿಸಲು ಪ್ರಯತ್ನ ಮಾಡುತ್ತೇನೆ.
ಮುಂದಿನ 100 ದಿವಸಗಳಲ್ಲಿ ಸಂಪೂರ್ಣವಾಗಿ ಅಧ್ಯಯನ ನಡೆಸಿ, ಮೇ ತಿಂಗಳ ವೇಳೆಗೆ ಲಭ್ಯವಿರುವಷ್ಟು ಗಿಡಗಳನ್ನು ಅಥವಾ ಬೀಜಗಳನ್ನು ಸಂಗ್ರಹಿಸಲು ಗುರಿಹೊಂದಲಾಗಿದೆ. ಇದು ಬರೆದಷ್ಟು ಮಾತನಾಡಿದಷ್ಟು ಸುಲಭದ ಕೆಲಸವಲ್ಲ. ಆದರೂ ಪ್ರಾಮಾಣಿಕ ಪ್ರಯತ್ನ ಪಡಲೇ ಬೇಕಲ್ಲವೇ ?
ಯಾವುದೇ ವಾಟ್ಸ್ಅಫ್ ಗ್ರೂಪ್ನಲ್ಲಿ ಇರುವವರು, ಶಕ್ತಿಪೀಠ ವನದ ಬಗ್ಗೆ, ವೈಜ್ಞಾನಿಕ, ನಂಬಿಕೆಯ, ಪುರಾಣದ, ಇತಿಹಾಸದ, ವಾಸ್ತು ಹೀಗೆ ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ತಿಳಿದುಕೊಳ್ಳಲು ಆಸಕ್ತಿ ಇದ್ದಲ್ಲಿ 9886774477 ಗೆ ಸಂಪರ್ಕಿಸಬಹುದು.
