11th December 2024
Share

ಅರಸಿಕೆರೆ ಶಾಸಕರಾದ ಶ್ರೀ ಶಿವಲಿಂಗೇಗೌಡರವರು ನಾನು ಮುಖ್ಯ ಮಂತ್ರಿಯಾದರೆ 3 ವರ್ಷದಲ್ಲಿ ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವೆ. ಯಾವ ಮುಖ್ಯ ಮಂತ್ರಿಗಳು ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ತಿಳಿಸಿದರು.

ವಿಕಾಸಸೌಧದ ಉನ್ನತ ಅಧಿಕಾರಿಯೊಬ್ಬರ ಬಳಿ ಕುಳಿತು ಮಾತನಾಡುವಾಗ ನಾನು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಅವರ ಪ್ರಕಾರ ರಾಜಕಾರಣಿಗಳಾದ ನಾವು ಈ ಕೆಲಸ ಮಾಡಬೇಕ್ರಿ, ಇಷ್ಟು ವರ್ಷ ಬೇಕಿತ್ತ ಮಾಡೋಕೆ. ಆದ್ರೆ ನಾವು ಮಾಡೋದೆ ಬೇರೆ. ಅದನ್ನೆಲ್ಲಾ ನಾವು ಹೇಳಬಾರದು ಎಂದು ಹಾಸ್ಯವಾಗಿ ಚಟಾಕಿ ಹಾರಿಸಿದರು.

ಇದೊಂದು ವಿಚಾರದಲ್ಲಿ ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಕಳಕಳಿ ಅವರಿಂದ ವ್ಯಕ್ತವಾಯಿತು.ಅಟಲ್ ಬಿಹಾರಿ ವಾಜಪೇಯಿ ಪಾಪ ಆ ಮನುಷ್ಯ ಇದ್ದಿದ್ರೆ ನದಿ ಜೋಡಣೆ ಮಾಡಬಿಡರ್ರಿ, ಈಗ ಬರೀ ಭಾಷಣಕ್ಕೆ ಸಿಮಿತವಾಗಿದೆ ಕಣ್ರೀ, ಚುನಾವಣೆ ಪ್ರಣಾಳಿಕೆಲಿ ಮಾತ್ರ ಹೇಳ್ತಾ ಇದ್ದೇವೆ. ಎಲ್ಲಾ ಪಾರ್ಟಿ ಹಣೆಬರಹ ಇದೇ ಎಂದು ನಕ್ಕರು.