ನಾಳೆ ತುಮಕೂರಿಗೆ ಮೋದಿಜಿ ಬರಲಿದ್ದಾರೆ, ಬೃಹತ್ ಸರ್ಕಾರಿ ರೈತರ ಸಭೆಯನ್ನು ಆಯೋಜಿಸಿದ್ದಾರೆ. ಕೇಂದ್ರದಿಂದ ಇಲ್ಲಿಯವರೆಗೂ ಒಂದೇ ಪಕ್ಷದ ಆಡಳಿತ, ಅಧಿಕಾರ ಆದರೇ ಸಭೆಯ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಎಂಪಿ ಹೆಸರಿಲ್ಲ ಏಕೆ? ಎಂಬ ಪ್ರಶ್ನೆಗೆ ಇದೂವರೆಗೂ ಯಾರಿಂದಲೂ ಸರಿಯಾದ ಉತ್ತರ ಸಿಕ್ಕಿಲ್ಲ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೇಳಿದೆ ಅವರಿಂದಲೂ ಸಮರ್ಪಕ ಉತ್ತರ ಇಲ್ಲ.
ಮುಖ್ಯ ಮಂತ್ರಿಯವರ ಕಚೇರಿಯಲ್ಲಿ ಕೇಳಿದೆ ಅವರಿಂದಲೂ ಸಮರ್ಪಕ ಉತ್ತರ ಇಲ್ಲ.
ಲೋಕಸಭೆಯಲ್ಲಿನ ಅಧಿಕಾರಿಗಳನ್ನು ಕೇಳಿದೆ ಅವರಿಂದಲೂ ಸಮರ್ಪಕ ಉತ್ತರ ಇಲ್ಲ.
ರಾಷ್ಟ್ರಪತಿಯವರ ಕಚೇರಿಯಲ್ಲಿನ ಅಧಿಕಾರಿಗಳನ್ನು ಕೇಳಿದೆ ಅವರಿಂದಲೂ ಸಮರ್ಪಕ ಉತ್ತರ ಇಲ್ಲ.
ನಾನು ಎಂಪಿಯವರನ್ನು ಕೇಳಿದೆ, ಅವರು ವೇದಿಕೆಯ ಮೇಲೆ ಕುಳಿತು ಕೊಳ್ಳಲು ಆಹ್ವಾನಿಸಿದ್ದಾರೆ, ಉಳಿದ ವಿಚಾರ ನನಗೂ ಗೊತ್ತಿಲ್ಲ ಎಂದರು.
ನನಗೆ ಕೇಳಿದವರಿಗೆ ನಾನು ಏನು ಹೇಳಲಿ, ನನಗೂ ಗೊತ್ತಿಲ್ಲ