15th January 2025
Share

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು   ತುಮಕೂರಿನಲ್ಲಿ ಮಾತನಾಡುವಾಗ 2022 ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುವ ಸಲುವಾಗಿ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಯಾವ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ, ಅಲ್ಲಿ ಮೌಲ್ಯವರ್ದಿತ ಉತ್ಪನ್ನಗಳ ಕ್ಲಸ್ಟರ್ ಮಾಡುವ ಮೂಲಕ ರೈತರ ನೆರವಿಗೆ ಬನ್ನಿ ಎಂದು ರಾಜ್ಯ ಸರ್ಕಾರದ ಗಮನ ಸೆಳೆಯುವಾಗ  ತುಮಕೂರಿನ ಕೊಬ್ಬರಿ ಬಗ್ಗೆ ಮಾತಾನಾಡಿ ಎಂದು ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿಯ ರೈತ ನಂಡುಂಡಪ್ಪನವರು ನಾರಿಯಲ್, ಕೊಬ್ಬರಿ ಎಂದು ಕೂಗುವುದರ ಮೂಲಕ ಪ್ರಧಾನಿ ಮೋದಿಯವರ ಗಮನ ಸೆಳೆದರು.

ಆರಂಭದಲ್ಲಿ ಒಬ್ಬರ ಧ್ವನಿ ಮೋದಿಯವರಿಗೆ ಕೇಳಲಿಲ್ಲ, ಯಾರು ಜೊತೆಗೆ ಕೂಗಲೂ ಬರಲಿಲ್ಲ. ಆದರೂ ನಂಡುಂಡಪ್ಪನವರು ಪುನ: ಛಲಬಿಡದ ವಿಕ್ರಮನಂತೆ ನಾರಿಯಲ್, ಕೊಬ್ಬರಿ ಎಂದು ಜೋರಾಗಿ ಕೂಗಲು ಆರಂಭಿಸಿದರು, ನಂತರ ಪಕ್ಕದಲ್ಲಿದ್ದ ಎಲ್ಲಾ ರೈತರು ಕೂಗಲು ಆರಂಭಿಸಿದ ತಕ್ಷಣ ಮೋದಿಯವರು ನಾರಿಯಲ್ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು.

 ನಂತರ ಸುತ್ತ-ಮುತ್ತ ಕುಳಿತಿದ್ದ ಮಹಿಳೆಯರು ನಂಡುಂಡಪ್ಪನವರ ಬಳಿ ಬಂದು ಥ್ಯಾಂಕ್ಸ್ ನಾರಿಯಲ್, ಥ್ಯಾಂಕ್ಸ್ ಕೊಬ್ಬರಿ ಎಂದು ಹೇಳಿದ್ದು ಸಭಿಕರಲ್ಲಿ ವಿಶೇಷ ಆಸಕ್ತಿ ಮೂಡಿಸಿತ್ತು.

ಇದೂವರೆಗೂ ವಕೀಲ ನಂಡುಂಡಪ್ಪ ಎನ್ನುತ್ತಿದ್ದ ಜನ ಇನ್ನೂ ಮುಂದೆ ನಾರಿಯಲ್ ನಂಡುಂಡಪ್ಪ ಎಂದು ಕರೆಯ ಬಹುದು ಎಂದು ಅವರ ಸ್ನೇಹಿತರಾದ ಉಮಾಮಹೇಶ್ ನಗುತ್ತಿದ್ದರು.