ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ತುಮಕೂರಿನಲ್ಲಿ ನದಿ ಜೋಡಣೆ ಮಾಡಿ ರೈತರಿಗೆ ನೀರು ಕೊಡದಿದ್ದರೆ 2022 ಕ್ಕೆ ರೈತರ ಅದಾಯ ಹೇಗೆ ದುಪ್ಪಟ್ಟು ಆಗಲಿದೆ ಎಂದು ನದಿ ಜೋಡಣೆ ಅಗತ್ಯದ ಬಗ್ಗೆ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನೇರವಾಗಿ ಮಂಡಿಸಿದ ವಿಷಯ ನಿಜಕ್ಕೂ ಅಭಿನಂದನೀಯ.
ಬಾಯಿ ಮಾತಿನಲ್ಲಿ ರೈತರ ಅದಾಯ ದುಪ್ಪಟ್ಟು ಆಗುವುದಿಲ್ಲ ಮೊದಲು ರೈತರ ಜಮೀನುಗಳಿಗೆ ನೀರು ಕೊಡಲೇ ಬೇಕು ಎಂಬ ಖಟು ಮಾತಿನ ಧಾಟಿ, ಮುಖ್ಯ ಮಂತ್ರಿಯವರ ಮುಂದಿನ ಯೋಜನೆಗಳ ದಿಕ್ಸೂಚಿಯಂತಿತ್ತು. ಈಗಾಗಲೇ ನದಿ ಜೋಡಣೆ ಮತ್ತು ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ನೆರವು ನೀಡಲು ಎರಡು ಪತ್ರ ಬರೆದರೂ ಉತ್ತರವಿಲ್ಲ ಎಂಬಂತಿತ್ತು.
ಒಂದು ಕಡೆ ಅತಿವೃಷ್ಟಿ, ಇನ್ನೊಂದು ಕಡೆ ಅನಾವೃಷ್ಟಿ ರೈತರ ಬದುಕು ಹಾಳಾಗಿದೆ, ಇದಕ್ಕೆ ಪರಿಹಾರ ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ನೀರು ಕೊಡುವುದು ಒಂದೇ ಮಾರ್ಗ ಎಂಬ ಸ್ಪಷ್ಟ ಸಂದೇಶವಾಗಿತ್ತು. ಕನ್ನಡದ ಭಾಷಣ ಮೋದಿಯವರಿಗೆ ಅರ್ಥವಾಗಿರ ಬೇಕಲ್ಲ.
ಕೇಂದ್ರ ಸಚಿವರಾದ ಮಾನ್ಯ ಶ್ರೀ ಪ್ರಹ್ಲಾದ್ ಜೋಷಿಯವರು ಮನವರಿಕೆ ಮಾಡಬಹುದು.