21st November 2024
Share

 

  ನಿರುದ್ಯೋಗಿಗಳು ಯಾರು ಎನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ. ಈ ಮಾಹಿತಿ ಯಾರ ಬಳಿ ಇರಬೇಕು? ಇದಕ್ಕೆ ಜಿಲ್ಲೆಯಲ್ಲಿ ಯಜಮಾನರು ಯಾರು? ಈ ಕೆಲಸ ಮಾಡುವುದು ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಆದ್ಯತೆ ಕೆಲಸವಾಗ ಬೇಕು.

  ಕೇಂದ್ರ ಸರ್ಕಾರವೇನೋ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಮಾಡಿ ಎಲ್ಲಾ ಒಂದೇ ಕಡೆ ಮಾಹಿತಿ ಸಂಗ್ರಹಿಸಿ ಯೋಜನೆಗಳ ಜಾರಿಗೆ ಶ್ರಮಿಸಿ ಎಂದಿದೆ. ಬೆಂಕಿಗೆ ಗಂಟೆ ಕಟ್ಟುವವರು ಯಾರು?

   ಉದ್ಯೋಗ ನೀಡುವುದು ಸರ್ಕಾರದ ಆದ್ಯ ಕರ್ತವ್ಯ, ಯಾರಿಗೆ ಯಾವ ಉದ್ಯೋಗ ಬೇಕು, ಸರ್ಕಾರದಿಂದ ಏನು ನೆರವು ಬೇಕು ಎಂಬ ಮಾಹಿತಿಯನ್ನು ತುಮಕೂರು ಜಿಲ್ಲೆಯಲ್ಲಿರುವ 331  ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 2715  ಗ್ರಾಮಗಳವಾರು ಮತ್ತು 11  ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಬಡಾವಾಣೆವಾರು ಈ ಕೆಳಕಂಡ ವಿಭಾಗಗಳವಾರು ಉದ್ಯೋಗ ಗುರುತಿನ ಪತ್ರವನ್ನು ನೀಡಿ ನಿರುದ್ಯೋಗ ರಹಿತ ಜಿಲ್ಲೆ ಎಂದು ಘೋಶಿಸಲು ಏನು ಮಾಡಬೇಕು ಎಂಬ ಮಾಹಿತಿ ಸಂಗ್ರಹಿಸಲು  ಸಮೋರಾಪಾದಿಯಲ್ಲಿ ಚಾಲನೆ ನೀಡಬೇಕು.

1. ತುಮಕೂರು ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಆಸಕ್ತರಿಗೆ ಪ್ರತಿಯೊಬ್ಬರಿಗೂ ಗುರುತಿನ ಪತ್ರವನ್ನು ನೀಡಿ ಪ್ರತಿ ಗ್ರಾಮವಾರು  ಸಿನಿಯಾರಿಟಿ ಪ್ರಕಟಿಸುವುದು. ಆದ್ಯತೆ ಮೇರೆಗೆ ಆರ್ಥಿಕ ನೆರವು ನೀಡುವುದು.

2.ತುಮಕೂರು ಜಿಲ್ಲೆಯಲ್ಲಿ ಕೃಷಿ ಉದ್ಯೋಗ ಆಸಕ್ತರಿಗೆ  ಪ್ರತಿಯೊಬ್ಬರಿಗೂ ಗುರುತಿನ ಪತ್ರವನ್ನು  ಪ್ರತಿ ಗ್ರಾಮವಾರು  ನೀಡಿ ಸಿನಿಯಾರಿಟಿ ಪ್ರಕಟಿಸುವುದು. ಆದ್ಯತೆ ಮೇರೆಗೆ ಅವರಿಗೆ ಅಗತ್ಯವಿರುವ ಆರ್ಥಿಕ ನೆರವು ನೀಡುವುದು.

3.ತುಮಕೂರು ಜಿಲ್ಲೆಯಲ್ಲಿ ಖಾಸಗಿ ಉದ್ಯೋಗ ಆಸಕ್ತರಿಗೆ ಪ್ರತಿಯೊಬ್ಬರಿಗೂ ಗುರುತಿನ ಪತ್ರವನ್ನು ನೀಡಿ ಪ್ರತಿ ಗ್ರಾಮವಾರು  ಸಿನಿಯಾರಿಟಿ ಪ್ರಕಟಿಸುವುದು. ಆದ್ಯತೆ ಮೇರೆಗೆ ಖಾಸಗಿ ಉದ್ಯೋಗ ನೀಡಲು ಯೋಜನೆ ರೂಪಿಸುವುದು.

4.ತುಮಕೂರು ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗ ಆಸಕ್ತರಿಗೆ ಪ್ರತಿಯೊಬ್ಬರಿಗೂ ಗುರುತಿನ ಪತ್ರವನ್ನು ನೀಡುವುದು. ಉದ್ಯೋಗ ಅವರವರ ಅದೃಷ್ಟ. 

  ಇದರಿಂದ ಶೇಕಡವಾರು ಪ್ರಗತಿ ತಿಳಿಯಲಿದೆ ಹಾಗೂ ಸಾಮಾಜಿಕ ನ್ಯಾಯದಡಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮವಾರು/ಬಡಾವಾಣೆವಾರು ವಿತರಿಸಿದ ಕೀರ್ತಿ ಬರಲಿದೆ. ಇವರಿಗೆ ಆಸಕ್ತಿ ಇರುವ ಯೀಜನೆಗಳವಾರು ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಇಲಾಖೆಗಳಿಗೆ ನಿರ್ಧಿಷ್ಠ ಯೋಜನೆವಾರು ನಿಗದಿ ಮಾಡುವುದು.

   ಬೇಡಿಕೆಗಳಿಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿರುವ ಎಲ್ಲಾ ಯೋಜನೆಗಳ ನೆರವು ಪಡೆಯಲು ಎಲ್ಲಿ, ಯಾವ ಯೋಜನೆ ಮಾಡಬೇಕು ಎಂಬ ಬಗ್ಗೆ ವರದಿ ತಯಾರಿಸುವುದು.

   ಇದೂವರೆಗೂ ತುಮಕೂರು ಜಿಲ್ಲೆಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಎಷ್ಟು ಭೂಮಿಯನ್ನು ಬಳಸಲಾಗಿದೆ. ಡಾ.ಸರೋಜಿನಿ ಮಹಿಷಿ ವರದಿಯಂತೆ ತುಮಕೂರು ಜಿಲ್ಲೆಯ ಎಷ್ಟು ಜನರಿಗೆ ಉದ್ಯೋಗ ದೊರಕಿದೆ, ಇನ್ನೂ ಎಷ್ಟು ಕೈಗಾರಿಕಾ ಭೂಮಿ ಖಾಲಿ ಇದೆ. ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ನೀಡಿದ ರೈತರ ಬದುಕು ಯಾವ ರೀತಿ ಇದೆ ಎಂಬ ಅಧ್ಯಯನ ವರದಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.

  ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಈಗಾಗಲೇ ಮುಂಗಡ ಪತ್ರದಲ್ಲಿ ಪ್ರಕಟಿಸಿ ಪ್ರತಿ ಗ್ರಾಮವಾರು ಸರ್ಕಾರಿ ಜಮೀನು/ಖಾಸಗಿ ಜಮೀನುಗಳ ಹುಡುಕಾಟ ಆರಂಭಿಸಿದೆ. ಈ ಯೋಜನೆಯಡಿ ಅಗತ್ಯವಿರುವ ಕಡೆ ಗುರುತಿಸಿ ಇತಿಹಾಸ ಸಹಿತ ಕೈಗಾರಿಕಾ ವಸಾಹತುಗಳ ಜಿಐಎಸ್ ಆಧಾರಿತ ಲೇಯರ್ ಮಾಡುವುದು.

   ಜೊತೆಗೆ ಲಿವಿಂಗ್ ಕಮ್ ವರ್ಕ್ಸ್ ಷೆಡ್, ವಸತಿ ಗುಚ್ಚ, ಆಸ್ಪತ್ರೆ, ಫಾರ್‌ವಾರ್ಡ್ & ಬ್ಯಾಕ್‌ವಾರ್ಡ್ ಲಿಂಕೇಜ್ ವ್ಯವಸ್ಥೆ, ರಫ್ತು ಇನ್‌ಕ್ಯುಬೇಷನ್ ಸೆಂಟರ್ ಸೇರಿದಂತೆ ನಿರುದ್ಯೋಗ ರಹಿತ ತುಮಕೂರು ಜಿಲ್ಲೆಯ ವರದಿ ತಯಾರಿಸಲು, ದಿಶಾ ಸಮಿತಿಯ ಅಧ್ಯಕ್ಷರು ಮತ್ತು ತುಮಕೂರು ಲೋಕಸಭಾ ಸದಸ್ಯರು ಆಗಿರುವ ಶ್ರೀ.ಜಿ.ಎಸ್.ಬಸವರಾಜ್ ರವರು ದಿನಾಂಕ:17.01.2020 ರಂದು ಕರೆದಿರುವ ದಿಶಾ ಸಮಿತಿ ಸಭೆ ಮುನ್ನುಡಿ ಬರೆಯ ಬೇಕಿದೆ.    

  ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯೂ ಯಾವ ಕೆಲಸ ಮಾಡಬೇಕು ಎಂಬ ಬಗ್ಗೆ ಗುರಿ ನಿಗದಿ ಮಾಡುವುದು ಮತ್ತು ಈ ಎಲ್ಲಾ ಯೋಜನೆಗಳನ್ನು 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆಯಡಿಯಲ್ಲಿಯೇ ಪ್ರಸ್ತಾವನೆಗಳನ್ನು ಸಲ್ಲಿಸಬೇಕು.

   ಕಾಂಪಿಟ್ ವಿತ್ ಚೈನಾ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ಕ್ಲಸ್ಟರ್ ಮತ್ತು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಘೋಷಣೆ ಮಾಡಿತ್ತು. ಇದೂವರೆಗೂ ಈ ಯೋಜನೆಗೆ ಗ್ರಹಣ ಹಿಡಿದಿದೆ.

   ಪ್ರಸ್ತುತ ತುಮಕೂರು ಜಿಲ್ಲೆಯನ್ನೆ ಒಂದು ಯೂನಿಟ್ ಎಂದು ಘೋಶಿಸಿ, ಜಿಲ್ಲಾಧ್ಯಾಂತ ಬೆಳೆ ಬೆಳೆಯುವ ಆಧಾರಿತ ಉತ್ಪನ್ನವಾರು ಪುಡ್ ಕ್ಲಸ್ಟರ್ ಸ್ಥಾಪಿಸುವ ಚಿಂತನೆ ನಡೆದಿದೆ. ತುಮಕೂರು ಸ್ಮಾರ್ಟ್ ಸಿಟಿ ಕೈಗೊಳ್ಳಲು ಉದ್ದೇಶಿಸಿರುವ  ತುಮಕೂರು ಸ್ಕಿಲ್ ಸಿಟಿ ಯೋಜನೆಯಲ್ಲೂ ಇದೆ ಚಿಂತನೆ ನಡೆದಿದೆ. 7 ಕೋಟಿ ರೂ ವೆಚ್ಚದ ಕೆ-ಟೆಕ್ ಇನ್ನೋವೇಷನ್ ಹಬ್, ರೂ 100 ಕೋಟಿ ವೆಚ್ಚದ ಎಂ.ಎಸ್.ಎಂ.ಇ ಟೆಕ್ನಾಲಾಜಿ ಸೆಂಟರ್, ತುಮಕೂರು ಸ್ಮಾರ್ಟ್ ಸಿಟಿ ನಿರ್ಮಿಸುತ್ತಿರುವ  ಸುಮಾರು 10000 ಚದುರ ಅಡಿ ಇನ್‌ಕ್ಯುಬೇಷನ್  ಸೆಂಟರ್ ಇತ್ಯಾದಿ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳುವುದು ಸಾಂದರ್ಭಿಕವಾಗಿದೆ.

   ಈ ಎಲ್ಲಾ ಯೋಜನೆಗಳ ಜಾರಿಗೆ ನಾಲೆಡ್ಜ್ ಪಾರ್ಟನರ್ ಆಯ್ಕೆ ಸೂಕ್ತವಾಗಿದೆ. 

ಈ ಸಮೀಕ್ಷೆಗೆ ಸರ್ಕಾರದಿಂದ ಆರ್ಥಿಕ ನೆರವು ಪಡೆಯದೇ ಸಿ.ಎಸ್.ಆರ್ ಫಂಡ್‌ನಲ್ಲಿ ಸಮೀಕ್ಷೆ ನಡೆಸುವುದು ಸೂಕ್ತವಾಗಿದೆ.