12th October 2024
Share

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಜಿಯವರು ಹೌಸಿಂಗ್ ಫಾರ್ ಆಲ್ -2022 ನಗರ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಅದೂ ಸ್ಮಾರ್ಟ್ ಸಿಟಿಗಳಿಗೆ ವಿಶೇಷ ಆಧ್ಯತೆ ಇರಲಿದೆ.

ತುಮಕೂರಿನಲ್ಲಿ ಒಂದು ನಿವೇಶನ ನೀಡಲಿಲ್ಲ ಮನೆ ಕೊಡಲಿಲ್ಲ ಎಂದು ಸುಮಾರು 25  ವರ್ಷಗಳಿಂದ ಕೂಗು ಇದ್ದೆ ಇದೆ. ಸುಮಾರು 30000 ಜನರು ಮನೆಗಳಿಗೆ ನೊಂದಾಯಿಸಿ ಕೊಂಡಿದ್ದಾರೆ.

ತುಮಕೂರು ನಗರ ಮತ್ತು ನಗರದ ಸುತ್ತ ಮುತ್ತ ಸರ್ಕಾರಿ ಜಮೀನು ಹುಡುಕಿ ವಸತಿ ಸೌಲಭ್ಯ ಕಲ್ಪಿಸಲು ಈಗಾಗಲೇ ಎರಡು ಸಭೆಗಳನ್ನು ತುಮಕೂರಿನ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮಾಡಿದ್ದಾರೆ.

ನಮ್ಮ ಅಭಿವೃದ್ಧಿ ತಂಡವೇ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಸಹಕಾರ ಪಡೆದು ಸುಮಾರು ಏಳು ಗ್ರಾಮಗಳಲ್ಲಿನ ಸರ್ಕಾರಿ ಜಮೀನು ಬಗ್ಗೆ ಸಂಶೋಧನೆ ನಡೆಸಲಾಗಿದೆ. ನಕ್ಷೆ ಸಹಿತ ಸರ್ವೆ ನಂಬರ್‌ವಾರು ತಮಗೆ ಮಾಹಿತಿ ನೀಡಲಾಗಿದೆ. ಅಗತ್ಯವಿದ್ದಲ್ಲಿ ಈಗಲೂ ಸಹಕಾರ ನೀಡಲಾಗುವುದು.

ಆದರೆ ತುಮಕೂರು ಮಹಾನಗರ ಪಾಲಿಕೆ ಈ ವಿಚಾರದಲ್ಲಿ ಸತ್ತು ಹೋಗಿದೆ ಎಂದರೆ ತಪ್ಪಾಗಲಾರದು. ಬಡವರ ಬಗ್ಗೆ ಕಾಳಜಿ ಇದ್ದಲ್ಲಿ, ಪ್ರಧಾನಿಯವರ ಬಗ್ಗೆ ಗೌರವ ಇದ್ದಲ್ಲಿ, ವಸತಿ ಯೋಜನೆಗೆ ಚಾಲನೆ ನೀಡಿ.

ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ತುಮಕೂರು ತವರು ಮನೆ ಇದ್ದ ಹಾಗೆ, ನೀವೂ ಏನು ಕೇಳಿದರೂ ನೆರವು ನೀಡುತ್ತಾರೆ. ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಯಾವುದೇ ಆಗಲಿ ವಸತಿ ರಹಿತರಿಗೆ ಯೋಜನೆ ರೂಪಿಸಿ.

 ತುಮಕೂರು ನಗರದ ಬಡಾವಾಣೆವಾರು ವಸತಿ ರಹಿತರು ಮತ್ತು ನಿವೇಶನ ರಹಿತರ ಪಟ್ಟಿ ಮಾಡಿ ಅಧಿಕೃತವಾಗಿ ಘೋಶಿಸಿ ಇದು ನಿಯಮ. ನಂತರ ತುಮಕೂರು ನಗರ ಮತ್ತು ಸುತ್ತಮುತ್ತ ನಿವೇಶನಕ್ಕೆ ಜಮೀನು ಗುರುತಿಸಿ ನಿಮಗೆ ಎಷ್ಟು ಹಣ ಬೇಕು ಎಂಬ ಬಗ್ಗೆ ಶಾಸಕರು ಸಂಸದರು ಮತ್ತು ಸಚಿವರಿಗೆ ನೀಡಿ, ನಿಮ್ಮ ಜವಾಬ್ಧಾರಿ ಮಾಡಿ ಸ್ವಾಮಿ. ಅಭಿವೃದ್ಧಿ ಚೆಂಡು ಯಾವಾಗಲೂ ನಮ್ಮ ಅಂಗಳದಲ್ಲಿ ಇರಬಾರದು.

ಬಡವರ ಕೆಲಸ ಮಾಡಲು ಇನ್ನೂ ಎಷ್ಟು ವರ್ಷ ಬೇಕು ? ಎಂಬುದು ಜನತೆಯ ಕೂಗು.

 ಈ ಕೆಲಸ ಮಾಡಲು ಅಧಿಕಾರಿಗಳಿಗೆ/ನೌಕರರಿಗೆ ಲಂಚ ನೀಡಬೇಕಾದರೇ ಹೇಳಿ ಸ್ವಾಮಿ. ಬಿಕ್ಷೆ ಎತ್ತಿ ಕೊಡೋಣ. ಬಡವರ ಕೆಲಸ ದೇವರ ಕೆಲಸ ಅಲ್ಲವೇ?

ನನಗೆ ನೀರಿಕ್ಷೆ ಇದೆ ಒಂದು ತಿಂಗಳ ಒಳಗೆ ಉತ್ತರ ಸಿಗಬಹುದು.