26th July 2024
Share

ಅದೆಷ್ಟೋ ವರ್ಷಗಳ ಹಿಂದೆ ನಡೆದಿರುವ ಈಶ್ವರನ ಪತ್ನಿ ಸತಿಯ ದೇಹದ ಭಾಗಗಳು ಚಿದ್ರ, ಚಿದ್ರವಾಗಿ ವಿಶ್ವದ ಏಳು ದೇಶಗಳಲ್ಲಿ ಬಿದ್ದಿದ್ದು ಇಂದು ಅವುಗಳೆಲ್ಲಾ ಸುಪ್ರಸಿದ್ಧವಾದ ಶಕ್ತಿಪೀಠಗಳಾಗಿ ರೂಪುಗೊಂಡಿವೆ.

 ಬಹುಷ: ವಿಶ್ವದ ಯಾವುದೇ ಭಾಗದಲ್ಲಿ ಯಾರು ಸಹ ಇದೂವರೆಗೂ ಭಾರತ ಮತ್ತು ಇತರೆ ದೇಶಗಳ ನಕ್ಷೆಯನ್ನು ಭೂಮಿಯ ಮೇಲೆ ಸಿದ್ಧಪಡಿಸಿ, ಯಾವ ಸ್ಥಳದಲ್ಲಿವೆಯೋ ಅದೇ ಜಾಗವನ್ನು ನಕ್ಷೆಯಲ್ಲಿ ಗುರುತಿಸಿ ಎಲ್ಲಾ 108 ಶಕ್ತಿ ಪೀಠ ಪ್ರಾತ್ಯಕ್ಷಿಕೆ ಮಾಡಿರುವ ಉದಾಹರಣೆಗಳಿಲ್ಲ.

  ಭಾರತ ದೇಶದ ಪ್ರಮುಖ ನದಿಗಳು ಹುಟ್ಟುವ ಜಾಗ ಮತ್ತು ಅವುಗಳು ಹರಿದು ಸಮದ್ರ ಸೇರುವ ಜಾಗಗಳನ್ನು ನಕ್ಷೆಯಲ್ಲಿ ಗುರುತಿಸಿ, ಯಾವ ನದಿ ಪಾತ್ರದಲ್ಲಿ ಎಷ್ಟು ನೀರು ದೊರೆಯಲಿದೆ, ಇದರಲ್ಲಿ ಎಷ್ಟು ನೀರನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ವಿವರಗಳನ್ನು ಒಳಗೊಂಡ ಜಲಪೀಠ ಅತ್ಯಂತ ಪವಿತ್ರವಾದ ಕೆಲಸವಾಗಲಿದೆ.

 ದೇಶದ ಅಭಿವೃದ್ಧಿ ವಿಚಾರಗಳ ಸಾಧಕ- ಭಾಧಕಗಳ ಅಧ್ಯಯನ ಮಾಡುವ ಅಭಿವೃದ್ಧಿ ಪೀಠದ ಕಲ್ಪನೆಯೂ ಒಂದು ವಿಶಿಷ್ಟವಾಗಿದೆ. ಇಂತಹ ಒಂದು ಕೆಲಸ ಮಾಡಲು ದೇವಿಯ ಅನುಗ್ರಹ ದೊರೆತಿರುವುದು ಒಂದು ಪುಣ್ಯದ ಕೆಲಸ ಎಂದು ಭಾವಿಸಿ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಅಬ್ಬರ, ಆಡಂಬರವಿಲ್ಲದೆ ಕಾಮಗಾರಿ ಆರಂಭಿಸಲಾಗುವುದು.

  ಈ ಮೂರು ವಿಷಯಗಳ ಪರಿಣಿತ ತಜ್ಞರುಗಳ ಸಲಹೆ, ಸಹಕಾರ ಅಗತ್ಯವಾಗಿದೆ, ರಾಜ್ಯದ ಯಾವುದೇ ಮೂಲೆಯಲ್ಲಿ ಯಾರೇ ಪರಿಣಿತರಿದ್ದಾರೆ ಎಂಬ ಮಾಹಿತಿ ದೊರೆತರೂ ಅವರ ಬಳಿ ಸಮಾಲೋಚನೆ ಮಾಡುವ ಸಂದರ್ಭ ದೊರಕಿದೆ.

 ಭಾರತ ದೇಶದ ನಕ್ಷೆಯಲ್ಲಿ ನದಿಗಳು ಹರಿಯುವ ಅಕ್ಕ ಪಕ್ಕ ಆಯಾ ರಾಜ್ಯದಲ್ಲಿರುವ ವಿಧ ವಿಧವಾದ ಕಲ್ಲುಗಳನ್ನು (ರಾಕ್ ಗಾರ್ಡನ್/ಕಲೆಕ್ಷನ್) ಸಂಗ್ರಹಮಾಡಿ ಜೋಡಿಸಲು ತಜ್ಞರು ಸಲಹೆ ನೀಡಿದ್ದಾರೆ. 

ಇಲ್ಲಿಗೆ ಬರುವ ತಜ್ಞರುಗಳು ಆಯಾ ಪ್ರದೇಶದ ವಿವಿಧ ರೂಪದ ಕಲ್ಲು ತಂದು ಹಾಕುವ ಪರಿಪಾಠ ಜಾರಿಗೆ ಬರಬಹುದು ಎಂದು ಹಾಸ್ಯ ಮಾಡಿದರು.

ಉದ್ದೇಶಿತ ಶಕ್ತಿಪೀಠ, ಜಲಪೀಠ, ಅಭಿವೃದ್ಧಿ ಪೀಠ ಮಾಡಲು  ದೊರಕಿರುವ ಜಮೀನು ದೇವ ಭೂಮಿಯಾಗಿದೆ ಎಂದು ಜ್ಯೋತಿಷಿಗಳಾದ ಶ್ರೀ ಸದಾನಂದ ಕಾರಂತ್‌ರವರು ಮತ್ತು ಶ್ರೀ ದಿವಾಕರ್‌ಭಟ್ ರವರು ಅಭಿಪ್ರಾಯ ಪಟ್ಟಿದ್ದಾರೆ.

 ಅವರು ದಿನಾಂಕ:20.01.2020 ರ ಸೋಮವಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು, ಈ ಭೂಮಿಯಲ್ಲಿ ಅಷ್ಟ ಮಂಗಳ ಪ್ರಶ್ನೆ/ ಸ್ವರ್ಣ ಪೂಜೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಲು ಸಲಹೆ ನೀಡಿದ್ದಾರೆ.

ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು 108 ಆಸಕ್ತ ಕುಟುಂಬದವರನ್ನು ಆಹ್ವಾನಿಸಲಾಗುವುದು. ಸ್ವರ್ಣ ಪೂಜೆ ನಡೆಯುವ ದಿನಾಂಕ ಮತ್ತು ಸಮಯದ ಬಗ್ಗೆ ನಂತರ ತಿಳಿಸಲಾಗುವುದು ಆಸಕ್ತರು 9886774477 ಗೆ ಸಂಪರ್ಕಿಸಿ ನೊಂದಾಯಿಸಿ ಕೊಳ್ಳಬಹುದು.