9th October 2024
Share

ತುಮಕೂರಿನ ಎಲ್ಲಾ ಐಎಎಸ್ ಟೀಮ್ ಚುನಾವಣಾ ಪ್ರಶಸ್ತಿ ಮೂಡ್‌ನಲ್ಲಿದ್ದಾರೆ, ಜನತೆಯು ಸಹ ಇಂಥಹ ಅಧಿಕಾರಿಗಳು ನಮ್ಮೂರಿನಲ್ಲಿದ್ದಾರೆ ಎಂದು ಹೆಮ್ಮೆ ಪಡುತ್ತಿದ್ದಾರೆ. ನಮ್ಮ ಇ ಪತ್ರಿಕೆಯ ಎಲ್ಲಾ ಓದುಗರ ಪರವಾಗಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ, ಜಿಪಂ ಸಿಇಓ ಮತ್ತು ಪಾಲಿಕೆ ಆಯುಕ್ತರೆಲ್ಲರಿಗೂ ಶುಭ ಕೋರೋಣ.

  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ವಿಜಯಭಾಸ್ಕರ್‌ರವರು ಇಡೀ ರಾಜ್ಯವನ್ನು ಜಿಐಎಸ್‌ಮಯ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

  ಅವರ ಕನಸನ್ನು ಯಾವ ಜಿಲ್ಲೆಯವರು ನನಸು ಮಾಡುತ್ತಾರೋ ಬಿಡುತ್ತಾರೋ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್‌ಕುಮಾರ್‌ರವರು, ಜಿಪಂ ಸಿಇಓ ಹಾಗೂ ದಿಶಾ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್‌ರವರು ಮತ್ತು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಭೂಬಾಲನ್‌ರವರು ಇಡೀ ಜಿಲ್ಲೆಯ ಪ್ರತಿಯೊಂದು ಕಾಮಗಾರಿಯ ಇತಿಹಾಸ ಸಹಿತ ಜಿಐಎಸ್ ಮಯ ಮಾಡಿ ದೇಶದಲ್ಲಿಯೇ ಪ್ರಥಮ ಜಿಲ್ಲೆ ಎಂಬ ಪ್ರಶಸ್ತಿ ಪಡೆಯುವುದರಲ್ಲಿ ಅನುಮಾನವಿಲ್ಲ.

  ನಿಜಕ್ಕೂ ಈ ಟೀಮ್ ಉತ್ತಮ ಕೆಲಸ ಮಾಡುತ್ತಿದ್ದಾರೆ, ಇವರಿಗೆ ರಾಜ್ಯ ಸರ್ಕಾರದ ಕೆಳಕಂಡ ಮೂರು ವಿಷಯಗಳಿಗೆ ಒಂದು ಆದೇಶ ಬೇಕು ಅಷ್ಟೆ.

1.ಈಗಾಗಲೇ ಪ್ರತಿಯೊಂದು ಇಲಾಖೆಯಲ್ಲಿರುವ ತಯಾರಿಸಿರುವ ಜಿಐಎಸ್ ಆದಾರಿತ ಡೇಟಾವನ್ನು ತುಮಕೂರಿನ ಎನ್.ಆರ್.ಡಿ.ಎಂ.ಎಸ್ ಗೆ ಎಲ್ಲಾ ಇಲಾಖೆಗಳು ನೀಡುವುದು.

2.ಅಗತ್ಯವಿರುವ ಉಳಿದ ಜಿಐಎಸ್ ಲೇಯರ್‌ಗಳ ಇತಿಹಾಸ ಸಹಿತ ಡೇಟಾವನ್ನು ಸಂಗ್ರಹಿಸಲು ಆಯಾ ಇಲಾಖೆಗಳು ಟೆಂಡರ್ ಕರೆದು ಪೂರ್ಣ ಪ್ರಮಾಣದಲ್ಲಿ ಮಾಡಲು ಅಗತ್ಯ ಕ್ರಮಕೈಗೊಳ್ಳುವುದು.

3.ತುಮಕೂರಿನ ಸ್ಮಾರ್ಟ್ ಸಿಟಿಯಲ್ಲಿ ಐಸಿಎಸ್‌ಟಿರವರು ಹೊರಗುತ್ತಿಗೆ ಆಧಾರದಲ್ಲಿ ಎಲ್ಲಾ ಯೋಜನೆಗಳ ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸಿರುವ ಮಾದರಿಯಲ್ಲಿ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಪ್ರತಿ ಗ್ರಾಮವಾರು, ಜಿಐಎಸ್ ಲೇಯರ್‌ವಾರು ಇತಿಹಾಸ ಸಹಿತ ಸಂಗ್ರಹಿಸಿಕೊಳ್ಳಲು ಅಗತ್ಯಕ್ರಮ ಕೈಗೊಳ್ಳಿ ಎಂಬ ಸುತ್ತೋಲೆ ಬೇಕು.

 ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದಂತೆ ಈಗಾಗಲೇ ಎಲ್ಲಾ ಇಲಾಖೆಗಳು ವಿವಿಧ ಲೇಯರ್ ಗಳನ್ನು ಒಂದೇ ಕಡೆ ಸಂಗ್ರಹಿಸಲು ಆರಂಭ ಮಾಡಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ನಿರ್ಧೇಶಕರಾದ ಶ್ರೀ ಪ್ರಭುರವರೇ ದಿಶಾ ಸಭೆಗೆ ಹಾಜರಾಗಿ ಅಗತ್ಯ ಎಲ್ಲಾ ಸಹಕಾರ ನೀಡಿದ್ದಾರೆ.

  ಎಲ್ಲಾ ಇಲಾಖೆಗಳ ಅಧಿಕಾರಿಗಳು ಆರಂಭದಲ್ಲಿ ಗೊಣ ಗೊಣ ಅಂದು ಕೊಂಡೇ ಪ್ರಾರಂಭಿಸಿದರೂ ಈಗ ಸಮೋರಾಪದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ತುಮಕೂರು ಜಿಲ್ಲಾ ದಿಶಾ ಸಮಿತಿ ಈ ಪ್ರಶಸ್ತಿ ನಮ್ಮ ಜಿಲ್ಲೆಗೆ ಬರಬೇಕು ಎಂಬುದಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ.