12th September 2024
Share

ತುಮಕೂರು ಜಿಲ್ಲೆಗೆ ಹೇಮಾವತಿ ಒಂದು ವರದಾನವೇ ಹೌದು. ಆರಂಭದಿಂದಲೂ ಹಾಸನ / ತುಮಕೂರು ವಾಗ್ವಾಧ ನಡೆದೇ ಇದೆ. ತುಮಕೂರು ನಾಲಾ ಕಾಲುವೆ ಸಾಮಾರ್ಥ್ಯ 1445  ಕ್ಯುಸೆಕ್ಸ್ ಎಂದಿದ್ದರೂ ಅದು ಪುಸ್ತಕದಲ್ಲಿ ಮಾತ್ರ. ಸುಮಾರು 700 ಕ್ಯಸೆಕ್ಸ್ ನೀರಿನ ಸಾಮಾರ್ಥ್ಯ ಮಾತ್ರ ಇದೂವರೆಗೂ ಇದ್ದಿದ್ದು.

ಮಾನ್ಯ ಶ್ರೀ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ಮತ್ತು ಶ್ರೀ ಟಿ.ಬಿ.ಜಯಚಂದ್ರರವರ ದಿಟ್ಟ ನಿಲುವು, 0 ಕೀಮೀ 70 ನೇ ಕೀಮೀ ವರೆಗೂ ನಿಗದಿತ ಸಮಯದಲ್ಲಿ ಆದ ಕೆಲಸ ನಿಜಕ್ಕೂ ಅಧ್ಭುತ, ಪಕ್ಷಾತೀತವಾಗಿ ಅವರೆಲ್ಲರನ್ನೂ ತುಮಕೂರು ನಾಗರೀಕರು ಸನ್ಮಾನ ಮಾಡ ಬೇಕಿತ್ತು.

 ಮಾನ್ಯ ಹೆಚ್.ಡಿ.ಕುಮಾರಸ್ವಾಮಿರವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಸಂಸದ ಶ್ರೀ ಡಿ.ಕೆ.ಸುರೇಶ್ ರವರು ಮತ್ತು ಕುಣಿಗಲ್ ಶಾಸಕರಾದ ಶ್ರೀ ಡಾ.ರಂಗನಾಥ್‌ರವರು ಎಕ್ಸ್ ಪ್ರೆಸ್ ಕೆನಾಲ್/ ಲಿಂಕಿಂಗ್ ಕೆನಾಲ್  ಪವಾಡ ಮಾಡಲು ಹೋಗಿ ಇಡೀ ಜಿಲ್ಲೆಯ ಜನರ ವಿರೋಧ ಕಟ್ಟಿಕೊಂಡರು.

ಮೊದಲು ಈ ವಿಚಾರ ಬಯಲಿಗೆ ತಂದಿದ್ದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ನಂತರ ಶ್ರೀ ಜಿ.ಎಸ್.ಬಸವರಾಜ್ ರವರು ಮಾತ್ರ ಈ ವಿಚಾರವನ್ನು ನಂಬಿದರು. ಉಳಿದ ಎಲ್ಲಾ ನಾಯಕರು ಇದೊಂದು ಫೇಕ್‌ನ್ಯೂಸ್ ಎಂದರು. ಆಡಳಿತ ಪಕ್ಷದ ನಾಯಕರಿಗೆ ಬಿಸಿತುಪ್ಪವಾಗಿ ಬೀದಿಗೆ ಇಳಿಯಲಿಲ್ಲ, ಜಿ.ಎಸ್.ಬಸವರಾಜ್‌ರವರು ಒಂಟಿಯಾಗಿ ಬೀದಿಗಿಳಿದರು, ಜಿಲ್ಲೆಯ ಜನತೆಯ ಪಾಲಿಗೆ ಹೀರೋ ಅದರು.

 ನಂತರ ಈ ವಿಚಾರದಲ್ಲಿ ಕುಣಿಗಲ್ ಶಾಸಕರಾದ ಶ್ರೀ ಡಾ.ರಂಗನಾಥ್ ರವರನ್ನು ಬಿಟ್ಟರೇ ಪಕ್ಷಾತೀತವಾಗಿ ಎಲ್ಲಾ ಪಕ್ಷದ ನಾಯಕರು ಒಗ್ಗಟ್ಟು ಆಗಿದ್ದು ಜಿಲ್ಲೆಯ ಪಾಲಿಗೆ ಒಂದು ಇತಿಹಾಸವೇ.

 ಆದರೂ ಉಪಮುಖ್ಯ ಮಂತ್ರಿಗಳಾದ ಡಾ. ಜಿ.ಪರಮೇಶ್ವರ್‌ರವರು ಸಭೆ ನಡೆಸಿ ಎಲ್ಲಾ ನಾಯಕರು ಸಹಿ ಮಾಡಿ ಪತ್ರ ನೀಡಿದರು, ಯೋಜನೆ ನಿಲ್ಲಿಸಲು ಆಗಲೇ ಇಲ್ಲ. ಸಚಿವ ಸಂಪುಟದ ಅನುಮೋದನೆ ಆಗಿದ್ದು ನಿಜಕ್ಕೂ ಖಂಡನೀಯ.

  ಪ್ರಸ್ತುತ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರ ಹೋರಾಟದ ಫಲಕ್ಕೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿರವರು   ಜಿಲ್ಲೆಯ ಜನತೆಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

  ಹೇಮಾವತಿ ತುಮಕೂರು ಬ್ರಾಂಚ್ 0  ಕೀಮೀ ನಿಂದ 70 ನೇ ಕೀಮೀ ವರೆಗೆ ಕಳೆದ ಸರ್ಕಾರ ರೂ 475 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ನಾಲಾ ಆಧುನೀಕರಣಕ್ಕೆ ಈಗಿನ ಸರ್ಕಾರ ಶಂಕುಸ್ಥಾಪನೆ ಮಾಡಿದೆ.

  ಸುಮಾರು ರೂ 614  ಕೋಟಿ ವೆಚ್ಚದಲ್ಲಿನ 70 ಕೀಮೀ ನಿಂದ 166.90 ಕೀಮೀವರೆಗಿನ ಲಿಂಕಿಂಗ್ ಕೆನಾಲ್  ರದ್ದು ಪಡಿಸಿ, ರೂ 550 ಕೋಟಿ ವೆಚ್ಚದಲ್ಲಿ ಹೇಮಾವತಿ ತುಮಕೂರು ಬ್ರಾಂಚ್ 70 ನೇ ಕೀಮೀ ನಿಂದ 166.90 ನೇ ಕೀಮೀ ವರೆಗೆ ನಾಲಾ ಆಧುನೀಕರಣ ಮಾಡಲು ಸಿದ್ಧತೆ ನಡೆಸಿರುವುದು ಜಿಲ್ಲೆಯ ಜನತೆಯ ಪಾಲಿಗೆ ಸಂತೋಷದ ವಿಷಯ.

  ಆದರೇ ಈ ಯೋಜನೆ ಟೆಂಡರ್ ಕರೆಯದೇ ಇರುವುದು ನೀಗೂಢವಾಗಿದೆ. ಹಣಕಾಸು ಇಲಾಖೆಯ ಅನುಮತಿ ಸಿಕ್ಕಿಲ್ಲ ಎನ್ನಲೂ ಕಾರಣವೇ ಇಲ್ಲ, ರೂ 614 ಕೋಟಿಗೆ ಹಿಂದಿನ ಸಚಿವ ಸಂಪುಟ ಅನುಮೋದನೆ ನೀಡಿದ ಕೆಲಸ ರದ್ಧು ಪಡಿಸಿ, ಕೇವಲ ರೂ 550 ಕೋಟಿ ಹಣ ಬಿಡುಗಡೆಗೆ ಏಕೆ ಇನ್ನೂ ಅನುಮತಿ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತದೆ.

 ಅದೇನೆ ಇರಲಿ ಹಣಕಾಸು ಇಲಾಖೆ ಕೊಕ್ಕೆ ಸರಿಪಡಿಸಿ, ಶೀಘ್ರವಾಗಿ ಜಿಲ್ಲೆಯ ನಾಯಕರು ಹಣ ಬಿಡುಗಡೆ ಮಾಡಿಸುವ ಭರವಸೆಯಿದೆ.

  ಈ ಎರಡು ನಾಲಾ ಆಧುನೀಕರಣ ಮಾಡುವ ಅವಧಿಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾಗಿ ಶ್ರೀ ಕೆ.ಜೈಪ್ರಕಾಶ್ ರವರು ಇದ್ದಾರೆ, ಈ ವರ್ಷವೇ ಕೆಲಸ ಮುಗಿಸಿ ಮುಂದಿನ ವರ್ಷದ ಹೇಮಾವತಿ ನೀರು ಬಿಡುಗಡೆ ಮಾಡಿಸಲೇ ಬೇಕು. ಸಾಧ್ಯವಾದರೆ ಹಿಂದಿನ ಸರ್ಕಾರ ಕೆಲಸ ಪೂರೈಸಿದ ಅವಧಿಗಿಂತಲೂ ಬೇಗ ಮುಗಿಸಲಿ ಎಂಬುದು ಜಿಲ್ಲೆಯ ಜನತೆಯ ಅನಿಸಿಕೆ.

  ಕುಣಿಗಲ್ ಮತ್ತು ರಾಮನಗರ ಜಿಲ್ಲೆಯ ಜನತೆಗೆ ಅನೂಕೂಲವಾಗಲಿ ಎಂಬ ದೃಷ್ಟಿಯಿಂದ ತುಮಕೂರು ನಾಲಾ ಕಾಲುವೆಯ ಸಾಮಾರ್ಥ್ಯವನ್ನು 0 ಕೀಮೀ ನಿಂದ 166.90  ಕೀಮೀ ವರೆಗೂ ಸುಮಾರು 1600 ಕ್ಯುಸೆಕ್ಸ್ ಸಾಮಾರ್ಥ್ಯದ ಕಾಲುವೆ ಮಾಡಿರುವುದು ನಿಜಕ್ಕೂ ಒಳ್ಳೆಯ ಕೆಲಸ. ಕುಣಿಗಲ್ ಶಾಸಕರು ಇದನ್ನು ಸ್ವಾಗತಿಸಬೇಕು.

  ಈ ಭಾಗದ ಜನತೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು, ಜೊತೆಗೆ ಈ ನೀರು ಯಾರಿಗೂ ತೃಪ್ತಿ ತರುವುದಿಲ್ಲಾ, ಜೊತೆಗೆ ಹೆಚ್ಚಿಗೆ ನೀರು ತರಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು.

ಏನೇ ಇರಲಿ ಈ ವರ್ಷ ಒಂದೇ ಭಾರಿಗೆ ಈ ಯೋಜನೆಗೆ ರೂ 1089 ಕೋಟಿ ಇಟ್ಟಿದ್ದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೂ, ಅದನ್ನು ಸದುಪಯೋಗ ಪಡಿಸಲು ಶ್ರಮಿಸಿದ ಎಲ್ಲರಿಗೂ ಮತ್ತು ಈ ವಿಚಾರವನ್ನು ಅತಿ ಗಂಭೀರವಾಗಿ ಪರಿಗಣಿಸಿದ ಜಿಲ್ಲೆಯ ಮಾಧ್ಯಮ ಮಿತ್ರರರಿಗೂ ಸಲಾಂ.

ಪೂರ್ಣಗೊಂಡಿರುವ ಹೇಮಾವತಿ 0 ಕೀಮೀ ನಿಂದ 70 ನೇ  ಕೀಮೀ ಕಾಮಗಾರಿ ಮತ್ತು ಪ್ರಾರಂಭವಾಗಿರುವ 0 ಕೀಮೀ ನಿಂದ 166.90 ಕೀಮೀ ಹೇಮಾವತಿ ತುಮಕೂರು ನಾಲಾವಲಯದ ಕಾಮಗಾರಿಗಳು ಒಂದು ತರಹ ಕಾಂಫಟೇಷನ್ ಇದ್ದ ಹಾಗೆ ಭಾವಿಸಿದರೇ,

 ನೋಡೋಣ ಯಾರು ಕೆಲಸ ಬೇಗ ಮುಗಿಸಿ ಗೆಲ್ಲುತ್ತಾರೆ???