ವೋಟು ಹಾಕುವವರಿಗೆ ಲಂಚ.
ವೋಟು ಕೇಳುವವರಿಗೆ ಲಂಚ,
ಸೀಟು ಕೊಡುವ ಪಕ್ಷದ ನಾಯಕರಿಗೆ ಲಂಚ.
ವೋಟು ಬೆಂಬಲಕ್ಕಾಗಿ ಶಕ್ತಾನುಸಾರ ಮಠಾಧಿಪತಿಗಳಿಗೆ ಕಾಣಿಕೆ/ಲಂಚ.
ವೋಟು ಬೆಂಬಲಕ್ಕಾಗಿ ಜಾತಿವಾರು ನಾಯಕರಿಗೆ ಲಂಚ.
ವೋಟು ಬರವಣಿಗಾಗಿ ಮಾಧ್ಯಮದವರಿಗೆ ಪ್ಯಾಕೇಜ್ ಲಂಚ.
ತಕರಾರು ತೆಗೆಯ ಬೇಡಿ ಎಂದು ಆರ್.ಟಿ.ಐ ಕಾರ್ಯಕರ್ತರಿಗೆ ಲಂಚ.
ವೋಟು ಬೆಂಬಲಕ್ಕಾಗಿ ಸಂಘ ಸಂಸ್ಥೆಗಳಿಗೆ ಲಂಚ.
ಸುಮ್ಮನಿರಿ ಎಂದು ಹೋರಾಟಗಾರರಿಗೆ ಲಂಚ
ಮಗು ಜನಿಸಿದಾಗ ಆಸ್ಪತ್ರೆಯಲ್ಲಿ ಲಂಚ.
ಸತ್ತಾಗ ಸ್ಮಾಶನದಲ್ಲಿ ಲಂಚ.
ಶಾಲೆಯಲ್ಲಿ ಸೀಟು ಪಡೆಯಲು ಲಂಚ.
ಓದಿದ ನಂತರ ಕೆಲಸ ಗಿಟ್ಟಿಸಲು ಲಂಚ.
ವರ್ಗಾವಣೆಗಾಗಿ ರಾಜಕಾರಣಿಗಳಿಗೆ ಲಂಚ.
ವರ್ಗಾವಣೆಗಾಗಿ ರಾಜಕಾರಣಿಗಳ ಪತ್ರ ಕೊಡಿಸಲು ಲಂಚ.
ಕಾಮಗಾರಿಗಳನ್ನು ಗುತ್ತಿಗೆ ಪಡೆಯಲು ರಾಜಕಾರಣಿಗಳ ಪತ್ರ ಕೊಡಿಸಲು ಲಂಚ.
ಕಾಮಗಾರಿಗಳನ್ನು ಗುತ್ತಿಗೆ ಪಡೆಯಲು ಅಧಿಕಾರಿಗಳಿಗೆ ಲಂಚ.
ಕಾಮಗಾರಿಗಳನ್ನು ಗುತ್ತಿಗೆ ಪಡೆಯಲು ರಾಜಕಾರಣಿಗಳಿಗೆ ಲಂಚ.
ಟೆಂಡರ್ ಕ್ಲಾಸ್ ಹಾಕಲು ಲಂಚ.
ಟೆಂಡರ್ ರದ್ದು ಪಡಿಸಲು ಲಂಚ.
ಪುರಾತನ ಕಾಲದಲ್ಲಿ ಗುರುದಕ್ಷಿಣೆ ರೂಪದಲ್ಲಿ ಲಂಚ.
ನಂತರ ಕೆಲಸ ಆಗಿ ಬಿಲ್ ಬರೆಯುವಾಗ ಲಂಚ.
ಆಧುನಿಕವಾಗಿ ಟೆಂಡರ್ ಕರೆಯುವಾಗಲೇ ಪುಡಾರಿಗಳಿಗೆ/ಅಧಿಕಾರಿಗಳಿಗೆ/ರಾಜಕಾರಣಿಗಳಿಗೆ ಲಂಚ.
ಕೆಲಸ ಆಗಲಿ ಬಿಡಲಿ ಅದು ನಮಗೆ ಸಂಬಂದಿಸಿಲ್ಲ ಎಂಬ ಷರತ್ತು ಬೇರೆ.
ಲಂಚಕ್ಕೆ ಯಾವುದೇ ಅಗ್ರಿಮೆಂಟ್ ಇಲ್ಲ, ಮಾತಿನ ಮೇಲೆ ನಡೆಯುತ್ತಿರುವ ಪವಿತ್ರ ವ್ಯವಹಾರ.
ಡಿಜಿಟಲ್, ಕ್ಯಾಷ್‌ಲೆಸ್, ಆನ್‌ಲೈನ್, ಲೋಕಾಯುಕ್ತ, ಎಸಿಬಿ, ನ್ಯಾಯಾಲಯ ಅಂತಿಮವಾಗಿ ದೇವರ ಹುಂಡಿಗೂ ದಕ್ಷಿಣೆ ಹಾಕಿ ಕ್ಷಮಿಸಪ್ಪಾ/ಮ್ಮ ತಾಯಿ ಈ ಪ್ರಪಂಚ ಇರೋದೆ ಹೀಗೆ.
ಆತ್ಮಾವಲೋಕನ ಮಾಡಲು ಸಮಯ ಯಾರಿಗಿದೆ? ಇದನ್ನು ತಿದ್ದುವವರು ಯಾರು?
ಲಂಚ ಏಕೆ ಕೊಡಬೇಕು ಎಂದು ಪ್ರಶ್ನೆ ಮಾಡುವ ಅಧಿಕಾರ ಯಾರಿಗಾದರೂ ಇದೆಯಾ?
ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸ್ವೀಕರಿಸುವವರೇ ಬಹುತೇಕ.
ಕೊಟ್ಟ ಲಂಚದ ಬಗ್ಗೆ ಬಾರ್‌ಗಳಲ್ಲಿ ಬಹಿರಂಗ ಗುಣಗಾನ, ಇದರಲ್ಲೂ ಪಾರದರ್ಶಕತೆ.
ಪ್ರಾಮಾಣಿಕರೆಲ್ಲಾ ಹುಚ್ಚರು, ಖಿನ್ನರು, ಅಯೋಗ್ಯರಲ್ಲವೇ ಲಂಚೇಶ್ವರಾ?
ಹೊಸ ಡೈಲಾಗ್ ಜೋರಾಗಿ ಮಾತನಾಡಿದರೇ ಸ್ವಲ್ಪ ಬೀಸಾಕಿದರಾಯಿತು.