21st November 2024
Share

Sustainable Development Goals ನಮ್ಮ ಗುರಿ

2019  ನೇ ಡಿಸೆಂಬರ್ 18  ರಂದು ಇ ಪೇಪರ್ ಮಾಡುವ ಮನಸ್ಸು ಬಂತು. ಸುಮಾರು 42  ದಿವಸಗಳ ಕಾಲ 81 ಪೋಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಸುಮಾರು 10000 ಕ್ಕೂ ಹೆಚ್ಚು ಜನ ಓದಿರುವ ದಾಖಲೆಯಿದೆ. ಆದರೆ ಯಾವತ್ತು ಇಷ್ಟೊಂದು ಜನ ನ್ಯೂಸ್ ಬಗ್ಗೆ ನನ್ನ ಜೊತೆ ಮಾತನಾಡಿರಲಿಲ್ಲ. ಲಂಚದ ನ್ಯೂಸ್ ನನಗೆ ತೃಪ್ತಿ ತರುವಷ್ಟು ಸಲಹೆಗಳನ್ನು ನೀಡಿದೆ.

ಅಭಿವೃದ್ಧಿ ಒಂದು ಬರಡು ವಿಷಯ, ಇಷ್ಟು ಕಡಿಮೆ ಅವಧಿಯಲ್ಲಿ ಬರೀ ಅಭಿವೃದ್ಧಿ ನ್ಯೂಸ್‌ನ್ನು ಇಷ್ಟೊಂದು ಜನ ಓದುತ್ತಾರೆ ಎಂಬ ಅರಿವು ನನಗೂ ಇರಲಿಲ್ಲ.

ಹಲವಾರು ಅಧಿಕಾರಿಗಳು ಕೆಲವು ಇನ್ಸಿಡೆಂಟ್‌ಗಳನ್ನು ಹೇಳಿದಾಗ ಇವು ದಾಖಲೆಯಾಗ ಬೇಕು ಎಂದು ಸಲಹೆ ನೀಡುತ್ತಿದ್ದರು.

ನನ್ನ ಮಗನ ಅನಿಸಿಕೆ ಇದೂವರೆಗೂ ನೀವು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಯೋಜನೆಗಳನ್ನು ಡಿಜಿಟಲ್ ದಾಖಲೆ ಮಾಡಿ ಎನ್ನುವುದಾಗಿತ್ತು.

ಇನ್ನೂ ಮುಂದೆ ಮಾಡುವ ಪ್ರತಿಯೊಂದು ಕೆಲಸಗಳನ್ನು ಡಿಜಿಟಲ್ ದಾಖಲೆ ಮಾಡುವ ಹಂಬಲದಿಂದ  ಇ ಪೇಪರ್ ಆರಂಭಿಸಿದೆ. ತಾವೆಲ್ಲರೂ ನೀಡುತ್ತಿರುವ ಸಹಕಾರಕ್ಕೆ ಧನ್ಯವಾದಗಳು.

ಈ ಹಿನ್ನೆಲೆಯಲ್ಲಿ ನಾನು ಟಿವಿಗಳಲ್ಲಿ ಕಲರ್ ಫುಲ್ ನ್ಯೂಸ್‌ಗಳು ಬಂದಾಗ ಮಾತ್ರ ಜನ ನೋಡುತ್ತಾರೆ. ಟಿಆರ್‌ಪಿ ಹೆಚ್ಚಲೆಂದೇ ಈ ರೀತಿ ಸುದ್ದಿ ಪ್ರಕಟಿಸಲಾಗಿದೆ ಎಂಬ ವಾದ ವಿವಾದ ನೋಡುತ್ತಿದ್ದೆ.

  ಮೊದ ಮೊದಲು ಚುನಾವಣೆಗಳಲ್ಲಿ ಬಿಟ್ಟಿ ಎಣ್ಣೆ ಕೊಡಲು ಹಲವಾರು ಕಂಫನಿಗಳು ಮುಂದೆ ಬರುತ್ತಿದ್ದರು. ಕಾರಣ ಅವರ ಬ್ರ್ಯಾಂಡ್ ಪರಿಚಯಿಸಲು ಒಂದು ಸುಲಭ  ತಂತ್ರವಂತೆ. ಯಾವುದೇ ಜಾಹಿರಾತು ಇಲ್ಲದೆ ಮನೆ ಮನೆ ತಲುಪವ ಜಾಣ್ಮೆ ಅವರದಾಗಿತ್ತಂತೆ.

 ಆದರೇ ಸ್ನೇಹಿತರ ಸಲಹೆಯ ಮೇರೆಗೆ ಅಭಿವೃದ್ಧಿ ವಿಚಾರಗಳ ಹೊರತಾಗಿ ಯಾವುತ್ತೂ ಇಂಥಹ ನ್ಯೂಸ್ ಬರೆಯಬಾರದು ಎಂಬುದು ನನ್ನ ಖಚಿತ ನಿಲುವೂ ಆಗಿದೆ.

 ರಾಜ್ಯದ 30  ಜಿಲ್ಲೆಗಳ, 6022 ಗ್ರಾಮ ಪಂಚಾಯಿತಿಗಳ, 29340 ಗ್ರಾಮಗಳ ಮತ್ತು 342 ನಗರ ಪ್ರದೇಶಗಳಲ್ಲೂ ಕನಿಷ್ಟ ಒಬ್ಬ ವ್ಯಕ್ತಿಯಾದರೂ ನಮ್ಮ ಇ ಪೇಪರ್ ಓದಬೇಕು ಎನ್ನುವ ಹಂಬಲದಿಂದ ಮುಂದುವರೆಯುತ್ತೇನೆ.

ಇಂದು ನನ್ನೊಡನೆ ಮಾತನಾಡಿದ ಒಂದಷ್ಟು ಓದುಗರ ಸಲಹೆಗಳು

ಹೊಂದಾಣಿಕೆಯೇ ಜೀವನ.

ಇದ್ದಕ್ಕಿದ್ದ ಹಾಗೆ ಜ್ಞಾನೋದಯ, ರಾತ್ರಿ ಎಲ್ಲಿ ಮಲಗಿದ್ದಿರಿ.

ಗಿವ್ ಅಂಡ್ ಟೇಕ್ ಪಾಲಿಸಿ.

ನೀವೂ ಈ ವಿಚಾರ ಬರೆಯ ಬಾರದಿತ್ತು.

ಲಂಚ ಜಗತ್ತಿನ ನಿಯಮವಾಗಿದೆ.

ಭ್ರಷ್ಠಾಚಾರ ಮೂಲಭೂತ ಹಕ್ಕಾಗಿದೆ.

ಯಾರು ಬಂದರೂ ಸರಿ ಮಾಡಲು ಸಾಧ್ಯವಿಲ್ಲ.

ಭ್ರಷ್ಠಾಚಾರ ಮತ್ತು ಲಂಚದ ಬಗ್ಗೆ ಯಾರು ಮಾತನಾಡಿದರೂ ಅಪಹಾಸ್ಯ.

ನಾವೆಲ್ಲರೂ ಸೇರಿ ಕೆಟ್ಟಿದ್ದೇವೆ ಪೂರ್ಣ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಕಡಿಮೆ ಮಾಡುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ. ಆದರೂ ನಿಮ್ಮ ಗಮನ ಈ ಕಡೆ ಬೇಡ.

ಕಳೆದ 31 ವರ್ಷದಿಂದ ನೀವೂ ಅಭಿವೃದ್ಧಿ ವಿಚಾರಕ್ಕೆ ಮಾತ್ರ ಸೀಮೀತವಾಗಿದ್ದೀರಿ. ಇನ್ನೂ ಮುಂದೆಯೂ ಅದೇ ರೀತಿ ಹೋಗಿ, ಯಾವುದೇ ಕಾರಣಕ್ಕೂ ಲಂಚ, ಆರ್ಥಿಕ ಬ್ರಷ್ಠಾಚಾರದ ಕಡೆ ಗಮನ ಹರಿಸುವುದು ಬೇಡ. 

ತಾಂತ್ರಿಕ ಭ್ರಷ್ಠಾಚಾರ ಮತ್ತು ಕಾನೂನು ಭ್ರಷ್ಠಾಚಾರದ ಬಗ್ಗೆ ಗಮನ ಹರಿಸಿ, ಯಾವುದೇ ಕಾರಣಕ್ಕೂ ಆರ್ಥಿಕ ಭ್ರಷ್ಟಾಚಾರದ ಕಡೆ ಗಮನ ಹರಿಸಿದರೆ ನಿಮ್ಮ ಮೂಲ ಉದ್ಧೇಶಕ್ಕೆ ತಡೆಯಾಗಲಿದೆ. 

ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆಯುವುದು ನಿಮ್ಮ ಗುರಿಯಾದಲ್ಲಿ ಕೆಲವೊಂದು ವಿಚಾರಗಳಲ್ಲಿ ರಾಜಿ ಮಾಡಿ ಕೊಳ್ಳಲೇ ಬೇಕು. 

ಹೌದು ನಮ್ಮ ಸಂಸ್ಥೆ ಯಾವತ್ತೂ ಭಷ್ಟಾಚಾರದ ವಿರುದ್ದ ದ್ವನಿ ಎತ್ತಿಲ್ಲ, ಇನ್ನೂ ಮುಂದೆಯೂ ಎತ್ತುವುದಿಲ್ಲ.

ನಮ್ಮದು ಅಭಿವೃದ್ಧಿ ಜನ ಜಾಗೃತಿ.