12th September 2024
Share

ಕುಂದರನಹಳ್ಳಿ ರಮೇಶ್

 ಸುಮಾರು ವರ್ಷಗಳಿಂದ  ಜಲಗ್ರಾಮ ಕ್ಯಾಲೆಂಡರ್’ ರಚಿಸುವ ಕನಸು ಹೊತ್ತು ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಶ್ರಮಿಸುತ್ತಾ ಬಂದಿದೆ. ಇದಕ್ಕೆ ಅಂದಿನಿಂದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ದಿವಂಗತ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ಸಾಥ್ ನೀಡುತ್ತಾ ಬಂದಿದ್ದಾರೆ.

 1999 ರಲ್ಲಿ ಶ್ರೀ ಹೆಚ್.ಕೆ.ಪಾಟೀಲ್ ರವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯಲ್ಲಿ ರಿಮೋಟ್ ಸೆನ್ಸಿಂಗ್ ವಿಭಾಗ ಮಾಡಿದರು. ಇದಕ್ಕೆ ಪ್ರಥಮ ನಿರ್ಧೇಶಕರಾಗಿ ಶ್ರೀ ಡಾ.ವೈ. ಲಿಂಗರಾಜು ನೇಮಕ ಮಾಡಿಸಲು ಶ್ರೀ ಜಿ.ಎಸ್.ಬಸವರಾಜ್ ರವರ ಬಳಿ ಶಿಫಾರಸ್ಸಿಗಾಗಿ ಬಂದಾಗ ನಾನು ಅವರ ಬಳಿ ಈ ಕನಸು ಹೇಳಿದ್ದೆ. ಆಗ ಜಲಗ್ರಾಮ ಹೆಸರು ತಿಳಿದಿರಲಿಲ್ಲ. ಉದ್ದೇಶ ಮಾತ್ರ ಇದೇ ಆಗಿತ್ತು.

  ಆದರೂ ಪ್ರಯೋಜನವಾಗಲಿಲ್ಲ ಆ ವಿಭಾಗ ಒಂದು ಸರ್ಕಾರಿ ಪ್ರಾಯೋಜಿತ ಬಿಟ್ಟಿ ಇಂಟರ್‌ನೆಟ್ ಚಾಟ್ ಪೆಟ್ಟಿಗೆ ಅಂಗಡಿಯಂತೆ ಕಾರ್ಯ ನಿರ್ವಹಿಸಿದೆ. ಇದೊಂದು ದುರಂತ, ಅಂದಿನಿಂದ ಇಲ್ಲಿವರೆಗೂ ಸುಮಾರು ಪತ್ರಗಳನ್ನು ಸರ್ಕಾರಗಳಿಗೆ ಬರೆಯುತ್ತಾ ಬಂದಿದ್ದರು ಪ್ರಯೋಜನ ಶೂನ್ಯ.

2009 ರಲ್ಲಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿಯರ್ ಆಗಿದ್ದ ಶ್ರೀ ಗುರು ಪ್ರಸಾದ್ ಅವರ ಜೊತೆ ಚರ್ಚೆ ಮಾಡಲಾಗಿತ್ತು. ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮಾಹಿತಿ ನೀಡಲು ಅರ್ಜಿ ಸಲ್ಲಿಸಿದಾಗ ನನಗೆ ದೊರೆತ ಮಾಹಿತಿ ನೋಡಿ, ಅವರ ಜೊತೆ ದೊಡ್ಡ ಜಗಳ ಮಾಡಿಕೊಂಡು, ನಂತರ ರಾಜಿಯಾಗಿ ಪ್ಯಾಮಿಲಿ ಪ್ರೆಂಡ್ಸ್ ಆದೆವು ಅನ್ನುವುದನ್ನು ಬಿಟ್ಟರೆ ಪಲಿತಾಂಶ ಶೂನ್ಯ.

  ಶ್ರೀ ಜಿ.ಎಸ್.ಬಸವರಾಜ್ ರವರು 2013 ರಲ್ಲಿಯೂ ಕೇಂದ್ರ ಜಲಸಂಪನ್ನೂಲ ಇಲಾಖೆಯ ಸದನ ಸಮಿತಿಯ ಸದಸ್ಯರಾಗಿದ್ದಾಗ ಈ ಎಲ್ಲಾ ಅಂಶಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದರು, ನಂತರ ಜಾರಿಯಾದ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ’ ಯೋಜನೆಯಲ್ಲಿ ಈ ಎಲ್ಲಾ ವಿಚಾರಗಳು ಸೇರಿದ್ದರು ಯಾವುದೇ ಪ್ರಯೋಜನವಾಗಲಿಲ್ಲ.

   ಈಗಾಗಲೇ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಬೋಗಸ್ ಡೇಟಾ ಹಾಕಿ ‘ರಾಜ್ಯ ಇರ್ರಿಗೇಷನ್ ಪ್ಲಾನ್ ‘ ಮಾಡಿದೆ. ‘ತುಮಕೂರು ಜಿಲ್ಲಾ ಇರ್ರಿಗೇಷನ್ ಪ್ಲಾನ್ ‘ಮಾಡುವಾಗ ಆಗಿನ ಜಿಲ್ಲಾಧಿಕಾರಿ ಶ್ರೀ ಕೆ.ಪಿ.ಮೋಹನ್ ರಾಜ್‌ರವರು ನನ್ನನ್ನು ಸಹ ಸಮಿತಿಯ ಸದಸ್ಯನಾಗಿ ಮಾಡಿಕೊಂಡಿದ್ದರು, ನಾನು ಇದೇ ಮಾದರಿಯಲ್ಲಿ ಮಾಡಲು ಸಲಹೆ ನೀಡಿದೆ. ಪಟ್ಟು ಹಿಡಿದೆ ಪಲಿತಾಂಶ ಶೂನ್ಯ.

 ನನಗೆ ಬೆಂಬಲವಾಗಿ ಶ್ರೀ ಕೆ.ಪಿ.ಮೋಹನ್ ರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ಮತಿ ಮಮತ ಮತ್ತು ಶ್ರೀ ಶಾಂತರಾಜ್ ನಿಂತಿದ್ದರು ಸಹ ಅಧಿಕಾರಿಗಳ ಅಸಹಾಯಕತೆಯಿಂದ  ಅದೂ ಯಶಸ್ವಿಯಾಗಲಿಲ್ಲ.

  ಕರ್ನಾಟಕ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಜಲಾಮೃತ’ ಯೋಜನೆ ಜಾರಿಗೊಳಿಸಿದಾಗ ನಿರ್ಧೇಶಕರಾದ ಶ್ರೀ ನಿಜಲಿಂಗಪ್ಪನರ ಜೊತೆ  ಸಮಾಲೋಚನೆ ನೆಡೆಸಿದೆ. ಅವರು ಯೋಜನೆಯಲ್ಲಿ ಬಹಳಷ್ಟು ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ ಅವರಿಗೆ ಧನ್ಯವಾಗಳನ್ನು ಹೇಳಲೇ ಬೇಕು.

  2019 ರಲ್ಲಿ 5 ನೇ ಭಾರಿ ಸಂಸದರಾಗಿ ಆಯ್ಕೆಯಾದ ನಂತರ ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಜಲಗ್ರಾಮ ಕ್ಯಾಲೆಂಡರ್’ ರಚಿಸುವ ಕನಸನ್ನು ಮತ್ತೆ ಮನವರಿಕೆ ಮಾಡಿದೆ. ಅವರು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚೆಗೆ ವಿಷಯ ಮಂಡಿಸಿದರು.

  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನರಿಗೆ ಶ್ರೀ ಜಿ.ಎಸ್. ಬಸವರಾಜ್ ಪತ್ರ ಬರೆದು ಜಲಗ್ರಾಮ ಕ್ಯಾಲೆಂಡರ್’ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರಿಗೆ ಸೂಚಿಸಿದರು.

 ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿ, ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿಧೇರ್ಶಕರಾದ ಶ್ರೀ ಶಿವಸ್ವಾಮಿರವರು ಮತ್ತು ನಾನು ಸಭೆ ನಡೆಸಿ  ’ಜಲಗ್ರಾಮ ಕ್ಯಾಲೆಂಡರ್’ ಮಾಡಲು ಸಮಾಲೋಚನೆ ನಡೆಸಲಾಯಿತು.

   ಸಣ್ಣ ನೀರಾವರಿ ಇಲಾಖೆಯ ತುಮಕೂರಿನ ಎಕ್ಸಿಕ್ಯೂಟೀವ್ ಇಂಜಿನಿಯರ್ ಶ್ರೀ ಕೆ.ಗುರುರವರಿಗೆ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಯವರು ಸೂಚನೆ ನೀಡಿ ಮಾದರಿ ಜಲ ಗ್ರಾಮ ಕ್ಯಾಲೆಂಡರ್’ ರಚಿಸಲು ಮತ್ತು ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸಲು ಕಲ್ಪನಾವರದಿ ತಯಾರಿಸಲು ಸೂಚಿಸಿದರು.

  ತುಮಕೂರಿನ ಇಂಜಿನಿಯರ್‌ಗಳಾದ ಶ್ರೀ ಮಲ್ಲೇಶ್, ಶ್ರೀ ಡಿ.ಎಸ್. ಹರೀಶ್. ಶ್ರೀ ರಂಗನಾಥ್, ಶ್ರೀ ವೆಂಕಟರಾಮು, ಸ್ಪೆಕ್ಟ್ರಾ ಅಸೋಯೇಷನ್‌ನ ಶ್ರೀ ಸತ್ಯಾನಂದ್, ಶ್ರೀ ಗಂಗಣ್ಣ, ಏ-1 ಸರ್ವೆಯ ಶ್ರೀ ರಾಜಶೇಖರ್, ಮಾಡ್ರನ್ ಸರ್ವೆಸ್‌ನ ಶ್ರೀ ಶಶಿಧರ್, ಲೈವ್ ಗ್ರೀನ್‌ನ ಶ್ರೀ ಪ್ರಮೋದ್, ಟೆಕ್ನೋಕಾನ್‌ನ ಶ್ರೀ ರಾಮಮೂರ್ತಿರವರ ಸಭೆ ಕರೆದು ಸಮಾಲೋಚನೆ ನಡೆಸಿ ತುಮಕೂರು ತಾಲ್ಲೂಕಿನ ಸ್ವಾಂದೇನಹಳ್ಳಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್ ಮಾಡಲು ನಿರ್ಣಯಿಸಿದೆವು.

  ಈ ತಂಡ ಸ್ವಾಂದೇನಹಳ್ಳಿ ಗ್ರಾಮದ ಅಪೂರ್ಣವಾದ ’ಜಲಗ್ರಾಮ ಕ್ಯಾಲೆಂಡರ್’ ರಚಿಸಿತು. ನಂತರ ಸಂಸದರ ಗಮನಕ್ಕೆ ತಂದಾಗ ಅವರು ಅದನ್ನೆ ದಿಶಾ ಸಮಿತಿ ಸಭೆಯಲ್ಲಿ ಪಿಪಿಟಿ ಪ್ರದರ್ಶನ ಮಾಡಲು ಸೂಚಿಸಿದರು.

   ದಿಶಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಡಾ. ರಾಕೇಶ್‌ಕುಮಾರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶುಭ ಕಲ್ಯಾಣ್ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯ ೫೦ ಗ್ರಾಮಗಳಲ್ಲಿ ಪ್ರಯೋಗಿಕವಾಗಿ ’ಜಲಗ್ರಾಮ ಕ್ಯಾಲೆಂಡರ್’ ರಚಿಸಲು ನಿರ್ಣಯ ಕೈಗೊಂಡರು.

  ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಸಭಾಂಗಣದಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆಯ ಬಗ್ಗೆ ನಡೆದ ಸಭೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್, ತುಮಕೂರು ಜಿಲ್ಲಾ ಉಸುವಾರಿ ಕಾರ್ಯದರ್ಶಿಯಾಗಿದ್ದ ಶ್ರೀ ಮತಿ ಶಾಲಿನಿ ರಜನೀಶ್, ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀ ಪೇಶ್ವೆರವರು, ಕಾವೇರಿ ನೀರಾವರಿ ನಿಗಮದ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್, ಶ್ರೀ ಬಂಗಾರಸ್ವಾಮಿ, ಶ್ರೀ ರಾಮಯ್ಯ, ಇಐ ಟೆಕ್ನಾಲಜಿಯ ಶ್ರೀ ರಂಗನಾಥ್, ಪ್ರೀತಿ ಕ್ಯಾಡ್‌ನ ಶ್ರೀ ವೇದಾನಂದಾಮೂರ್ತಿ, ಇಸ್ರೇಲ್ ಸಂಪರ್ಕವಿರುವ ಶ್ರೀ ಹರೀಶ್  ತುಮಕೂರಿನ ನಮ್ಮ ತಂಡ ಸೇರಿದಂತೆ ಬಹಳಷ್ಟು ತಜ್ಞರ ಸಭೆಯಲ್ಲಿ ’ಜಲಗ್ರಾಮ ಕ್ಯಾಲೆಂಡರ್’ ಅಗತ್ಯದ ಬಗ್ಗೆ ಸಮಾಲೋಚನಾ ನಡೆಸಲಾಯಿತು.

 ಜಲಸಂಪನ್ಮೂಲ ಇಲಾಖೆಯ ಸಚಿವಾಲಯದ ಅಧಿಕಾರಿಗಳಾದ ಶ್ರೀ ಅನಿಲ್ ಕುಮಾರ್, ಶ್ರೀ ಮೋಹನ್, ಶ್ರೀ ಕೇಶವ  ಪ್ರಸಾದ್,  ಶ್ರೀ ಹರಿನಾರಾಯಣ್, ಶ್ರೀ ಹರಿ ಹೀಗೆ ಹಲವಾರು ಇಂಜಿನಿಯರ್‌ಗಳಿಗೆ ಪ್ರತ್ಯೇಕವಾಗಿ ಮನವರಿಕೆ ಮಾಡಲಾಯಿತು. ಕಾವೇರಿ ನೀರಾವರಿ ನಿಗಮದ ಬಹುತೇಕ ಇಂಜಿನಿಯರ್‌ಗಳ ಜೊತೆಯು ಸಮಾಲೋಚನೆ ಮಾಡಲಾಗಿದೆ.

     ಈ ’ಜಲಗ್ರಾಮ ಕ್ಯಾಲೆಂಡರ್’ ಬಗ್ಗೆ ಪ್ರೇರಿತರಾದ ಶ್ರೀ ಜಿ.ಎಸ್.ಬಸವರಾಜ್ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

  ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರ ತನ್ನ ಮುಂಗಡ ಪತ್ರದಲ್ಲಿ ಹೊಸ ಯೋಜನೆ ’ಜಲಗ್ರಾಮ ಕ್ಯಾಲೆಂಡರ್’ ಎಂಬ ಯೋಜನೆಯನ್ನು ಜಾರಿಗೊಳಿಸಲು ಘೋಶಿಸಿದೆ. ಈ ಯೋಜನೆಯ ಉದ್ದೇಶ ಪ್ರತಿ ಗ್ರಾಮದ   WATER BUDGET- WATER AUDIT- WATER STRATAGY    ಮಾಡಿ ಮಳೆ ನೀರು, ಅಂತರ್ಜಲ ನೀರು ಬಳಸಿಕೊಂಡ ಮೇಲೆ ಕೊರತೆಯಿರುವ ನೀರಿಗಾಗಿ ನದಿ ನೀರಿನ ಅಲೋಕೇಷನ್’ ನಿಗದಿ ಮಾಡುವುದಾಗಿದೆ.

  ಈ ಜಲಗ್ರಾಮ ಕ್ಯಾಲೆಂಡರ್‌ನ್ನು ಸಿದ್ಧಗೊಳಿಸುವ ಸಂಪೂರ್ಣ ಜವಾಬ್ಧಾರಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು/ಚೀಫ್ ಆಫೀಸರ್ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತ್‌ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳದ್ದಾಗಿರಬೇಕು.

   ಆತುರದಲ್ಲಿ ಇರುವ ಬೋಗಸ್ ಡೇಟಾ ಹಾಕಿ ಯೋಜನೆ ರೂಪಿಸುವುದು ಬೇಡ. ಕರಾರು ವಕ್ಕಾದ ಡೇಟಾ ಸಿದ್ಧವಾಗಬೇಕು. ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕೊದ್ದಮೆ’ ಹೂಡಬೇಕು. ಇಲಾಖೆಗಳಲ್ಲಿ ಇಲ್ಲದೇ ಇರುವ ಮಾಹಿತಿಗಳನ್ನು ಹೇಗೆ ಸಿದ್ಧಪಡಿಸಬೇಕು ಎಂಬ ಬಗ್ಗೆ ಚರ್ಚೆಯಾಗಬೇಕು. ಅಗತ್ಯವಿದ್ದಲ್ಲಿ ಡೆಟಾ ಸಂಗ್ರಹಣೆಗಾಗಿ ಅನುದಾನವನ್ನು ಸರ್ಕಾರ ನೀಡಬೇಕು.  

  ಪ್ರತಿ ಗ್ರಾಮಕ್ಕೂ ಸರ್ಕಾರಿ ಇಲಾಖೆಯ ಒಬ್ಬ ಇಂಜಿನಿಯರ್ ಅಥವಾ ಒಬ್ಬ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಬೇಕು. ಆಯಾ ಗ್ರಾಮದ ಜಲಗ್ರಾಮ ಕ್ಯಾಲೆಂಡರ್ ಅಧಿಕೃತವಾಗಿ ಗೆಜೆಟ್‌ನಲ್ಲಿ ಘೋಷಣೆಯಾಗುವವರೆಗೂ ಆ ವ್ಯಕ್ತಿಯೇ ಅಂತಿಮಗೊಳಿಸಬೇಕು.

  ಜಿ.ಐ.ಎಸ್. ಮ್ಯಾಪ್ ಸಿದ್ಧಪಡಿಸಲು ಮತ್ತು ಇತಿಹಾಸ ಅಫ್ ಲೋಡ್ ಮಾಡಲು ಪ್ರತಿ ಜಿಲ್ಲಾ ಮಟ್ಟದಲ್ಲಿಯೂ ಸಲಹಾಗಾರರಿಗೆ ಹೊರಗುತ್ತಿಗೆ ನೀಡಬೇಕು. ಆ ಸಂಸ್ಥೆ ಕನಿಷ್ಠ 10 ವರ್ಷ ನಿರ್ವಹಣೆ ಮಾಡಬೇಕು. ಹೊಸದಾಗಿ ಯಾವುದೇ ಒಂದು ನೀರಾವರಿ/ಜಲಸಂರಕ್ಷಣೆ ಯೋಜನೆ ಮಾಡುವ ಮುನ್ನ ನಕ್ಷೆಯಲ್ಲಿ ಅನುಮೋದನೆ ಮಾಡುವುದು ಕಡ್ಡಾಯ ಮಾಡಬೇಕು ಹಾಗೂ ಪ್ರತಿ ಬಿಲ್ ನಿಡುವಾಗ ತಾಜಾ ಮಾಹಿತಿ ಅಫ್ ಲೋಡ್ ಆಗಬೇಕು.

  ನದಿ ನೀರನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಎಂಬ ಯೋಜನೆಯಡಿಯಲ್ಲಿ ಅಲೋಕೇಷನ್ ಮಾಡಿದ ನಂತರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ, ಆಧ್ಯತೆಗೆ ತಕ್ಕಂತೆ ಯೋಜನೆ ರೂಪಿಸುವುದು ಅಗತ್ಯವಾಗಿದೆ. ಒಂದೇ ಭಾರಿ ಯೋಜನೆ ಪೂರ್ಣಗೊಳಿಸ ಬೇಕು ಎಂದಿಲ್ಲ. ಆದರೇ ಎಲ್ಲರಿಗೂ ಸಮಪಾಲು- ಸಮಬಾಳು’ ಎಂಬಂತೆ ಹಂಚಿಕೆ ಮಾಡಲು ಗುರಿ ಹೊಂದಲಾಗಿದೆ.

  ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಗಳು ಮತ್ತು ನೀರು ಬಳಕೆದಾರರಾದ ರೈತರು, ಉದ್ಧಿಮೆದಾರರು, ಅಧಿಕಾರಿಗಳು ತಮಗೆ ಎಷ್ಟು ನೀರು ಯಾವ ಉದ್ದೇಶಕ್ಕೆ ಬೇಕು ಎಂಬುದನ್ನು ಕರಾರು ವಕ್ಕಾಗಿ ಜಿ.ಐ.ಎಸ್ ಲೇಯರ್‍ಸ್ ಆಧಾರದ ಮೇಲೆ ಧೃಡೀಕೃತ ಮಾಹಿತಿ ನೀಡಬೇಕು.

   ಈ ಡೇಟಾ ಸರಿಯಾಗಿ ಇದೇಯಾ ಎಂದು ಆಯಾ ಗ್ರಾಮದಲ್ಲಿನ ಇಂಜನಿಯರಿಂಗ್ ವಿಧ್ಯಾರ್ಥಿಗಳು/ ವಿದ್ಯಾರ್ಥಿಗಳು ತಪಾಸಣೆ ಮಾಡಿ ವರದಿ ನೀಡಬೇಕು, ವಿಧ್ಯಾರ್ಥಿಗಳ ಸೇವೆಯನ್ನು ಎಐಸಿಟಿ ಮಾರ್ಗದರ್ಶನದಂತೆ ಆಕ್ಟಿವಿಟಿ ಪಾಯಿಂಟ್ಸ್ ಆಗಿ ಪರಿಗಣಿಸಬೇಕು.

     ಅಂತಿಮವಾಗಿ ಆಯಾ ಗ್ರಾಮದ ನೀರು ಬಳಕೆದಾರರ ಸಂಘಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳ ಫೆಡ್‌ರೆಷನ್, ಯುವ ಸಂಘಟನೆಗಳು, ಗ್ರಾಮ ಪಂಚಾಯತ್ ಹಾಲಿ ಮತ್ತು ಮಾಜಿ ಸದಸ್ಯರು, ಗ್ರಾಮ ಸರಪಂಚರು, ಸರ್ವಪಕ್ಷಗಳ ಸದಸ್ಯರು ಮತ್ತು ರೈತರು ಅನುಮೋದಿಸಬೇಕು.

 ನಂತರ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, ಸಚಿವ ಸಂಪುಟ, ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚಿಸಿ ರಾಜ್ಯ ಗೆಜೆಟ್‌ನಲ್ಲಿ ಪ್ರಕಟವಾಗಬೇಕು.

   ಈ ಯೋಜನೆಯಡಿಯಲ್ಲಿ ಗುರುತಿಸಿರುವ ಕಡೆ ಮಾತ್ರ ಹೊಸ ನೀರಾವರಿ/ಜಲಸಂರಕ್ಷಣೆ  ಯೋಜನೆಗಳನ್ನು ಮಾಡಬೇಕು. ಪೊಲಿಟಿಕಲ್ ಯೋಜನೆಗೆ ಕಡಿವಾಣ ಹಾಕಬೇಕು. ದೊರೆಯುವ ಮಳೆ ನೀರಿನ ಯೋಜನೆ ರೂಪಿಸಿ, ಕೊರತೆಯಿರುವ ನದಿ ನೀರನ್ನು ಪಡೆಯಲು ರಾಜ್ಯಾಧ್ಯಾಂತ ನದಿ ಜೋಡಣೆ ವಾಟರ್ ಗ್ರಿಡ್’ ಮಾಡಬೇಕು.

  ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ ಪ್ರಾಯೋಗಿಕವಾಗಿ ಮೊದಲು ತುಮಕೂರು ಜಿಲ್ಲೆಯಲ್ಲಿ ಯೋಜನೆ ಕೈಗೊಳ್ಳಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು  ಸೂಚಿಸಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ದಿಶಾ ಸಮಿತಿ, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ನಿರ್ಣಯ ಮಾಡಿದೆ.

 ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಯಾರು ಯಾರಿಗೆ ಎಷ್ಟೆಷ್ಟು ನೀರು ಬೇಕು ಎಂಬ ಬಗ್ಗೆ ಮತ್ತು ಯಾರ್‍ಯಾರು ಏನೇನು ಮಾಡಬೇಕು ಎಂಬ ಬಗ್ಗೆ ಒಂದು ರೂಪುರೇಷೆ ಅಂಶಗಳನ್ನು ಈ ವರದಿಯಲ್ಲಿ ಪ್ರಕಟಿಸಲಾಗಿದೆ.

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖಾವಾರು, ಯೋಜನಾವರು ಇರುವ ಆಫ್‌ಗಳ ಮಾಹಿತಿ ಬಗ್ಗೆ ಚರ್ಚೆಯಾಗಬೇಕು. ಇಲಾಖಾವಾರು ಹಾಲಿ ಇರುವ ಡೇಟಾವನ್ನು  TUMAKURU GIS ಗೆ ಅಫ್‌ಲೋಡ್ ಮಾಡಬೇಕು. TUMAKURU GIS,  KARNATAKA GIS,  NATIONAL- GIS ಸ್ಪಷ್ಠ ವರದಿ ತಯಾರಿಸಿಕೊಂಡು ಬರಬೇಕು.

   ರಾಜ್ಯದಲ್ಲಿ ನೀರಾವರಿ, ಅಂತರ್ಜಲ ಬಳಕೆ ಮತ್ತು ಕುಡಿಯುವ ನೀರಿನ ಎಲ್ಲಾ ಇಲಾಖೆಗಳು ಒಂದೇ ಕಡೆ ಸೇರಿ ಸೂಕ್ತ ನಿರ್ಣಯ ಕೈಗೊಳ್ಳುವ ಮೂಲಕ ಹೊಸ ನವೀನ ಮಾದರಿಯ ಚಿಂತನೆ ನಡೆಸಬೇಕಿದೆ.

  ಕಳೆದ ಒಂದು ವಾರದಲ್ಲಿ ತುಮಕೂರಿನಲ್ಲಿ ಅಟಲ್ ಭೂಜಲ್ ಸಭೆ ನಡೆದಿದೆ, ಜಲಾಮೃತ ಸಭೆ ನಡೆದಿದೆ, ದಿಶಾ ಸಮಿತಿಯಲ್ಲೂ ಇದೇ ಚರ್ಚೆಯಾಗಿದೆ.  ಹೀಗೆ ಒಂದೇ ವಿಷಯವನ್ನು ವಿವಿಧ ಸಭೆಗಳಲ್ಲಿ ಚರ್ಚಿಸದೆ ಸಮಗ್ರವಾಗಿ ಎಲ್ಲರೂ ಸೇರಿ ಯೋಜನೆ ರೂಪಿಸುವುದು ಅಗತ್ಯವಾಗಿದೆ. ಅದಕ್ಕೋಸ್ಕರವೇ ಕೇಂದ್ರ ಸರ್ಕಾರ ದಿಶಾ ಸಮಿತಿ ರಚಿಸಿರುವುದು.

ನನ್ನ ಗಮನದಲ್ಲಿರುವ ಹಲವಾರು ಇಲಾಖೆಗಳ ಯೋಜನೆಗಳ ಮಾಹಿತಿ  ಒಂದೇ ಕಡೆ ಇರಬೇಕು.

  • ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಸಮಿತಿ – ಕೃಷಿ ಇಲಾಖೆ
    • ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿನ ಕೆರೆಗಳ ಅಭಿವೃದ್ಧಿ  ಸಮಿತಿ- ಸಣ್ಣ ನೀರಾವರಿ ಇಲಾಖೆ
    • ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿನ ಜಲಾಮೃತ ಸಮಿತಿ – ಗ್ರಾಮೀಣಾಭಿವೃದ್ಧಿ ಇಲಾಖೆ
    • ಜಲಧಾರ – ಕುಡಿಯುವ ನೀರಿನ ಯೋಜನೆ – ಗ್ರಾಮೀಣಾಭಿವೃದ್ಧಿ ಇಲಾಖೆ
    • ಜಲಶಕ್ತಿ ಮಿಷನ್ – ಮನೆ ಮನೆಗೆ ಗಂಗೆ – ಕುಡಿಯುವ ನೀರಿನ ಯೋಜನೆ – ಗ್ರಾಮೀಣಾಭಿವೃದ್ಧಿ ಇಲಾಖೆ
    • ಜಲಶಕ್ತಿ ಅಭಿಯಾನ – ಕೃಷಿ ವಿಜ್ಞಾನ ಕೇಂದ್ರಗಳು. 
    • ಅಟಲ್ ಭೂಜಲ್ – ಸಣ್ಣ ನೀರಾವರಿ ಇಲಾಖೆ
    • ನಗರ ನೀರು ಸರಬರಾಜು – ನಗರ ನೀರು ಸರಬರಾಜು ಮಂಡಳಿ.
    • ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು – ಗ್ರಾಮೀಣಾಭಿವೃದ್ಧಿ ಇಲಾಖೆ

  ಹೀಗೆ ನೀರಿಗೆ ಸಂಭಂಧಿಸಿದ ಇತರೆ ಯೋಜನೆ/ಇಲಾಖೆಗಳಿದ್ದಲ್ಲಿ ಪಟ್ಟಿ ಮಾಡಿ ಎಲ್ಲರೂ ಕುಳಿತು ಅಂತಿಮ ರೂಪುರೇಷೆ ಸಿದ್ಧಪಡಿಸುವುದು ಸೂಕ್ತ. ಈ ಕೆಳಕಂಡಂತೆ ತುಮಕೂರು ಜಿಲ್ಲೆಯ ವಿವಿಧ ಇಲಾಖಾ ಅಧಿಕಾರಿಗಳು ನೀರಿನ ಲೆಕ್ಕ ನೀಡಬೇಕು ಎಂಬುದು ನನ್ನ ಅನಿಸಿಕೆ, ನಂತರ ನಿಮ್ಮ ಸಲಹೆಗಳನ್ನು ಪರಿಗಣಿಸಿ ಅಗತ್ಯ ಬದಾಲಾವಣೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ.

  ದಿವಂಗತ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ಕನಸು ನನಸು ಮಾಡಲು ಇದು ಆಗಲೇಬೇಕಾಗಿತ್ತು ಎನ್ನುವುದು ನನ್ನ ಗುರಿಯಾಗಿತ್ತು. ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಘೋಷಣೆ ಮಾಡಿದ್ದಾರೆ. 

   ಶ್ರೀ ಜಿ.ಎಸ್.ಬಸವರಾಜ್‌ರವರು ಈ ಯೋಜನೆ ಜಾರಿಗೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿ ಹೊಳೆರವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು ಮತ್ತು ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರೊಂದಿಗೆ ಸಮಾಲೋಚನೆ ಮಾಡಿ ಯಾವ ಇಲಾಖೆ ಜಲಗ್ರಾಮ ಕ್ಯಾಲೆಂಡರ್ ಮಾಡುವ ಹೊಣೆಗಾರಿಕೆ’ ಹೊರಬೇಕು ಎಂಬ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲು ಚಿಂತನೆ ಮಾಡಿದ್ದಾರೆ.

DEPARTMENT WISE REQUIRED WATER

KARNATAKA REMOTE SENCISING APPLICATION CENTRE/ NIC/NRDMS/ TUMAKURU SMART CITY LIMITED

  • Sy number boundary
  • Village boundary
  • Grama panchayath boundary
  • Hobali boundary
  • Taluk boundary
  • District boundary
  • Assembly segment boundary
  • Parliament boundary
  • Zilla panchayath member  boundary
  • Taluk panchayath member boundary
  • Grama panchayah member boundary
  • Ward boundry
  • Extension boundry

REVENUE    

  • G-TREE wise water
  • Family wise – Property List
  • Govt land
  • Gomala
  • Karabu
  • Betta- gudda
  • Hullugavalu
  • Gundu thopu
  • Pada land
  • Barriel ground
  • Thopovana
  • Udyanavana /parks
  • Kana
  • Total land of each village

CNNL-HEMAVATHY               

  • Main Canal
  • Sub canal
  • Distributors
  • Micro irrigation – Achcut
  • Flood irrigation – Achcut
  • Tank filling
  • Reservoir

VJNL-YETHINHOLE                 

  • Main Canal
  • Sub canal
  • Distributors
  • Micro irrigation – Achcut
  • Flood irrigation – Achcut
  • Tank filling
  • Reservoirs

VJNL-UPPER BHADRA           

  • Main Canal
  • Sub canal
  • Distributors
  • Micro irrigation – Achcut
  • Flood irrigation – Achcut
  • Tank filling
  • Reservoirs

KNNL-TUNGABHADRA         

  • Tank filling
  • MINOR IRRIGATION              
  • Tanks
  • Karabu-halla
  • Flood irrigation – Achcut
  • Micro irrigation – Achcut
  • Proposed- water body

ZP-PRED      

  • Tanks
  • Karabu- halla
  • Over head tank
  • Systems
  • Pipe line
  • Public tap
  • House connection
  • Proposed House connection
  • Govt-Bore well
  • Govt-Dry bore well
  • Govt-open well
  • Govt-Dry open well
  • Kalyani
  • Pickups- completed
  • Pickups-spill
  • Pickups-proposed
  • Pickups-silt
  • proposed waterbody
  • Hand pumps
  • Quality Of Water

AGRICULTURAL       

  • Drip irrigation with source
  • Sprinkler with source
  • Crop pattern
  • Flood irrigation with source
  • Rain
  • Krushi Honda
  • proposed waterbody

HORTICULTURE       

  • Drip irrigation with source
  • Sprinkler with source
  • Crop pattern
  • Flood irrigation with source
  • Rain
  • Govt-forms
  • Krushi Honda
  • proposed water body

SERICULTURE            

  • Drip irrigation with source
  • Sprinkler with source
  • Crop pattern
  • Flood irrigatin with source
  • Rain
  • Govt-forms
  • Krushi Honda
  • proposed water body

FOREST        

  • Forest Area
  • Hondas
  • Wild life
  • Proposed planting
  • Geo-survey
  • Village forest committee
  • proposed water body

SOCIAL FOREST        

  • Forest
  • Hondas
  • Wild life
  • Proposed planting
  • Geo-survey
  • proposed water body

ANIMAL HUSBANDRY           

  • Animals wise

DIC /KIADB/KSSIDC

  • Industrial estate wise water
  • Unit wise water
  • Proposed Industrial estate wise water

MSME

  • MSME Technology required water

APMC          

  • Market
  • Proposed Market

DDPI             

  • Schools

DD PU          

  • PU colleges
  • Training instate

UNIVERSITY              

  • Colleges
  • Eng Colleges
  • Diploma Colleges

WOMEN & CHAILD DEPARTMENT

  • Anganawadi
  • Vruddharhsrama

WELFARE OF BACKWARD CLASSES  DEPARTMENT           

  • Hostels
  • Proposed Hostels
  • Schools

WELFARE OF MINORITES  DEPARTMENT

  • Hostels
  • Proposed Hostels
  • Schools

WELFARE OF SCHEDULED CASTES DEPARTMENT

  • Hostels
  • Proposed Hostels
  • Schools

WELFARE OF SCHEDULED TRIBES DEPARTMENT

  • Hostels
  • Proposed Hostels
  • Schools

MINORITY  

  • Hostels
  • Proposed Hostels
  • Schools

KENDRIYA VIDYALAYA         

  • Schools

NOVODAYA VIDYALAYA

  • Schools

MUJARAI DEPARTMENT

  • Temples

WAQF BOARD          

  • Property Wise

POLICE  DEPARTMENT  

  • Betalian campus
  • Village wise
  • Festival
  • Jathre
  • others

HEALTH DEPARTMENT

  • Hospitals
  • Proposed – Hospitals

AYUSH DEPARTMENT

  • Hospitals
  • Proposed – Hospitals

KVK HIREHALLI

  • Forms

KVK-KONEHALLI      

  • Forms

RAIN GAUGE STATIONS       

Karnataka State Natural Disaster monitoring center(KSNDMC) 

TUDA           

  • Lay-outs
  • Proposed-lay outs

AC-TASK FORCE       

  • Encroachment

NABARD     

  • FPO –GP WISE
  •  Proposed FPO

LEAD BANK                

  • BRANCH- GPWISE
  • Proposed

ALL GOVT- OFFICES                

  • District level
  • Taluk level
  • Hobali level
  • Gp level
  • Village level office wise water

CO-OPERATIVE DEPARTMENT   

  • Co-operative wise water
  • NGOS – wise water
  • Proposed society wise water

TUMAKURU DAIRY                

  • MPCS wise water

DCC BANK  

  • Branch wise water

FISHERY      

  • Fish ponds water

CGWD/SGWB          

  • Bore well water quantity
  • Water bodies water quantity

URBOUN LOCAL BODIES

  • Tanks
  • Over head tanks
  • Pipe line
  • Public tap
  • House connection
  • Proposed House connection
  • Gate valve
  • Choultry      
  • Film Talkes 

KERE AUTHOURITY                

  • Water Body GEO senesces
  • Water Body Less Village

MGNAREGA              

  • Jalagrama Map

ISRO

CAMPUS

HAL

CAMPUS

FOOD & CVIL SUPPLY            

  • FBD wise- Water Quantity

TUMAKURU UNIVERSITY – G.S.PARAMASHIVAIAH CHAIR  

  • R & D  JALAGRAMA CALENDER