22nd December 2024
Share

ತುಮಕೂರು ನಗರದ ಎಲ್ಲಾ ಅಭಿವೃದ್ಧಿ ಮಾಹಿತಿ ಒಂದೇ ಕಡೆ ಲಭ್ಯ: ಜಿ.ಎಸ್.ಬಸವರಾಜ್

  ತುಮಕೂರು-ಜಿಐಎಸ್‌ನಲ್ಲಿ ತುಮಕೂರು ನಗರಕ್ಕೆ ಸಂಬಂಧಿಸಿದ ಎಲ್ಲಾ ಲೇಯರ್‍ಸ್‌ಗಳನ್ನು ಇತಿಹಾಸ ಸಹಿತ ಅಫ್‌ಲೋಡ್ ಮಾಡುವ ಬಗ್ಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್‌ವರು, ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಎಂಡಿ ಶ್ರೀ ಭೂಬಾಲನ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾದಿಕಾರದ ಆಯುಕ್ತರಾದ ಶ್ರೀ ಯೋಗಾನಂದ್‌ರವರಿಗೆ,ತುಮಕೂರು ನಗರದ ಎಲ್ಲಾ ಅಭಿವೃದ್ಧಿ ಮಾಹಿತಿಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಸಲಹೆ ನೀಡಿದ್ದಾರೆ.

  ತುಮಕೂರು ಜಿಲ್ಲಾ ದಿಶಾ ಸಮಿತಿಯು ದೇಶದಲ್ಲಿಯೇ ಮಾದರಿ ಯೋಜನೆ ರೂಪಿಸಲು ಮುಂದಾಗಿದೆ. ತುಮಕೂರು-ಜಿಐಎಸ್ ಪೋರ್ಟಲ್ ಮಾಡಿ, ಜಿಐಎಸ್ ಆಧಾರಿತ ಡಿಜಿಟಲ್ ಡೇಟಾ ಸಂಗ್ರಹಿಸುವತ್ತ ವಿಶೇಷ ಗಮನ ಹರಿಸಿದೆ. ಆದ್ದರಿಂದ ತಾವು ಕಾಲಮಿತಿ ನಿಗದಿಗೊಳಿಸಿ, ಪ್ರತಿಯೊಂದು ಲೇಯರ್‌ಗೂ ಇಂಜಿನಿಯರ್‌ಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಜವಾಬ್ಧಾರಿ ನೀಡಿ ಅಫ್‌ಡೇಟ್ ಮಾಡಲು ಮತ್ತು ತುಮಕೂರು ಸ್ಮಾರ್ಟ್ ಸಿಟಿ  ಬೆಂಗಳೂರಿನ ಐಸಿಎಸ್‌ಟಿ ಸಂಸ್ಥೆಯ ಜೊತೆ ಮಾಡಿಕೊಂಡಿರುವ ಒಪ್ಪಂದದ ಮಾದರಿಯಲ್ಲಿ ತುಮಕೂರು ನಗರದ ಪ್ರತಿಯೊಂದು ಯೋಜನೆಯ ದಾಖಲೆಗಳನ್ನು ಡಿಜಿಟಲ್ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಸಂಸದರು ಸೂಚಿಸಿದ್ದಾರೆ.

ಕೆಳಕಂಡ ವಿಷಯಗಳ ಬಗ್ಗೆ ಒಂದು ವಾರದೊಳಗೆ ಮಾಹಿತಿ ನೀಡಲಾಗುವುದು ಮತ್ತು ನಿರ್ಧಿಷ್ಠ ಯೋಜನೆಗಳ ಅನುಷ್ಟಾನಕ್ಕೆ ನಿಯಮಾನುಸಾರ ಸೂಕ್ತ ಆದೇಶ ನೀಡುವ ಮೂಲಕ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ಸಂಸದರಿಗೆ ತಿಳಿಸಿದ್ದಾರೆ.

  • ಕೇಂದ್ರ ಸರ್ಕಾರ ತುಮಕೂರು ಮಹಾನಗರ ಪಾಲಿಕೆ ಮೂಲಕ ಮಾಡಿರುವ ’ಎಬಿಡಿ ವ್ಯಾಪ್ತಿಯ ಡ್ರೋಣ್ ಸರ್ವೆ’ ವೆಚ್ಚ ಮತ್ತು ಸ್ಕೋಪ್ ಆಫ್ ದಿ ವರ್ಕ್ಸ್ ಮತ್ತು ಪ್ರಗತಿ.
  • ತುಮಕೂರು ಸ್ಮಾರ್ಟ್ ಸಿಟಿ ಮೂಲಕ ಮಾಡಿರುವ ’ನಗರ ವ್ಯಾಪ್ತಿಯ ಡ್ರೋಣ್ ಸರ್ವೆ’ ವೆಚ್ಚ ಮತ್ತು ಸ್ಕೋಪ್ ಆಫ್ ದಿ ವರ್ಕ್ಸ್ ಮತ್ತು ಪ್ರಗತಿ.
  • ನಗರಾಭಿವೃದ್ಧಿ ಇಲಾಖೆ ಮೂಲಕ ಮಾಡಲು ಉದ್ದೇಶಿಸಿರುವ ’ಪ್ರಾಪರ್ಟಿ ಸರ್ವೆ’ ವೆಚ್ಚ ಮತ್ತು ಸ್ಕೋಪ್ ಆಫ್ ದಿ ವರ್ಕ್ಸ್ ಮತ್ತು ಪ್ರಗತಿ.
  • ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮಾಡಿರುವ ’ಜಿಐಎಸ್ ಬೇಸ್ ಮ್ಯಾಪ್’ ವೆಚ್ಚ ಮತ್ತು ಸ್ಕೋಪ್ ಆಫ್ ದಿ ವರ್ಕ್ಸ್ ಮತ್ತು ಪ್ರಗತಿ.
  • ಡೈರೆಕ್ಟರ್ ಆಫ್ ಟೌನ್ ಪ್ಲಾನಿಂಗ್  ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಮಾಡುತ್ತಿರುವ ’ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್’ ವೆಚ್ಚ ಮತ್ತು ಸ್ಕೋಪ್ ಆಫ್ ದಿ ವರ್ಕ್ಸ್ ಮತ್ತು ಪ್ರಗತಿ.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಾಮಾನುಸಾರ ’ಇಂಜಿನಿಯರ್’ಗಳಿಗೆ  ನಿರ್ಧಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡುವುದು.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಾಮಾನುಸಾರ ಸ್ವಚ್ಚತೆ’ ಮಾಡುವ ನೌಕರರ ನಿರ್ಧಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡುವುದು.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಾಮಾನುಸಾರ ಕರ ವಸೂಲಿ’ ಮಾಡುವ ನೌಕರರ ನಿರ್ಧಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡುವುದು.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಾಮಾನುಸಾರ ನೀರು’ ಬೀಡುವ ನೌಕರರ ನಿರ್ಧಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡುವುದು.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಾಮಾನುಸಾರ ಹಸಿರು- ತುಮಕೂರು’ ಯೋಜನೆ ಕೈಗೊಳ್ಳಲು ಪರಿಸಾಕ್ತರಿಗೆ/ಸಂಘ ಸಂಸ್ಥೆಗಳಿಗೆ/ಕೈಗಾರಿಕೆಗಳಿಗೆ/ಶಿಕ್ಷಣ ಸಂಸ್ಥೆಗಳಿಗೆ/ವ್ಯಕ್ತಿಗಳಿಗೆ, ಕುಟುಂಬಗಳಿಗೆ ಜವಾಬ್ಧಾರಿ ನೀಡಲು ಮುಖ್ಯ ರಸ್ತೆ, ಅಡ್ಡ ರಸ್ತೆ, ಲಿಂಕ್ ರಸ್ತೆವಾರು, ಕನಿಷ್ಟ ಒಂದು ಕೀಮೀ ಉದ್ದಕ್ಕೆ ಒಂದು ನಿರ್ಧಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡುವುದು.
  • ತುಮಕೂರು ನಗರ ವ್ಯಾಪ್ತಿಯಲ್ಲಿ ಇತರೆ ಇಲಾಖೆಗಳು ನಡೆಸಿರುವ ಸಮೀಕ್ಷೆಗಳು’ ಇದ್ದಲ್ಲಿ ಮಾಹಿತಿ ನೀಡುವುದು. ಇಲಾಖಾವಾರು ಮಾಹಿತಿ ಸಂಗ್ರಹಿಸಲು ಅಗತ್ಯ ಕ್ರಮಕೈಗೊಳ್ಳುವುದು.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಾಣೆ ನಕ್ಷೆ’ ವ್ಯಾಪ್ತಿಯ ಮಾಹಿತಿಗಳು.
  • ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವ್ಯಾಪ್ತಿ’ ಮಾಹಿತಿಗಳು.
  • ತುಮಕೂರು ನಗರಾಭಿವೃದ್ಧಿ ಪ್ರಾದಿಕಾರದ ಎಲ್.ಪಿ.ವ್ಯಾಪ್ತಿ ಮತ್ತು ನಗರದ ಸುತ್ತ-ಮುತ್ತ 10 ಕೀಮೀ ವ್ಯಾಪ್ತಿ’ಯಲ್ಲಿರುವ ಸರ್ಕಾರಿ ಜಮೀನು ಲೇಯರ್ ಮಾಡಿಸಿ ಜನತೆಗೆ ನಿವೇಶನ/ವಸತಿ ನೀಡಲು ಮತ್ತು ಸರ್ಕಾರಿ ಯೋಜನೆಗಳಿಗೆ ಅಗತ್ಯ ನಿವೇಶನ ನಿಗದಿ ಪಡಿಸಲು ಲೇಯರ್ ಮಾಡುವುದು.
  • ಎಐಸಿಟಿ ಮಾರ್ಗದರ್ಶಿ ಅನ್ವಯ ನಗರದಲ್ಲಿರು ಇಂಜಿನಿಯರ್ ಕಾಲೇಜುಗಳ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್’ಗೆ ಅನುಗುಣವಾಗಿ ಅವರ ಸಹಕಾರ ಪಡೆಯುವುದು.

   ಅಗತ್ಯ ಬಿದ್ದಲ್ಲಿ, ವಿಧಾನಸಭಾ ಸದಸ್ಯರು, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ, ತುಮಕೂರು ಸ್ಮಾರ್ಟ್ ಸಿಟಿ, ಜಿಲ್ಲಾಧಿಕಾರಿಗಳು, ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ, ದಿಶಾ ಸಮಿತಿಯ ನಾಮನಿರ್ಧೇಶಿತ ಸದಸ್ಯರು ಮತ್ತು ನಾಗರೀಕ ಸಂಸ್ಥೆಗಳ ಸಲಹೆಗಳನ್ನು ಪರಿಗಣಿಸಲು ಸಂಸದರು ಸೂಚಿಸಿದ್ದಾರೆ.