22nd November 2024
Share

TUMAKURU:SHAKTHIPEETA FOUNDATION

’2019-20 ರ ಮುಂಗಡ ಪತ್ರವನ್ನು ಫೆಬ್ರವರಿ 8 ರಂದು ಆಗಿನ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು ಮಂಡಿಸಿದ ಮುಂಗಡ ಪತ್ರದಲ್ಲಿನ 232 ನೇ ವಿಷಯವಾದ ನಗರ ಪ್ರದೇಶಗಳಲ್ಲಿ ಪ್ರವಾಹ ಘಟನೆಗಳನ್ನು ತಡೆಗಟ್ಟಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ೩ ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಬೃಹತ್ ಮಳೆ ನೀರು ಕಾಲುವೆಗಳನ್ನು ಬಾಹ್ಯ ಅನುದಾನ ಆಧಾರಿತ  (EAP)ಯೋಜನೆಯಡಿಯಲ್ಲಿ ಪುನರ್ ನಿರ್ಮಿಸಲು ಉದ್ದೇಶಿಸಲಾಗಿದೆ.’

ಮುಂಗಡ ಪತ್ರ ಮಂಡನೆ ದಿನಾಂಕ:08.02.2019

ಕೆಯುಐಡಿಎಫ್‌ಸಿ ನಗರಾಭಿವೃದ್ಧಿ ಇಲಾಖೆಯಿಂದ ಪತ್ರ ಬರೆದ ದಿನಾಂಕ:01.06.2019

ನಂತರ ಈ ಯೋಜನೆ ಕಾರ್ಯಾಸಾಧ್ಯತಾ ವರದಿ ಏನಾಯಿತು?

ಇದಕ್ಕೆ ಉತ್ತರಿಸಬೇಕಾದವರೂ ಯಾರು?

   ಬೆಂಗಳೂರು ಸೇರಿದಂತೆ ಉಳಿದ 10 ಮಹಾನಗರ ಪಾಲಿಕೆ ಮೇಯರ್‌ಗಳು, ಮಹಾನಗರಪಾಲಿಕೆ ವ್ಯಾಪ್ತಿಯ ಶಾಸಕರುಗಳು, ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು, ಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಇವರಲ್ಲಿ ಯಾರಾದರೂ ಮಾಹಿತಿಯಿದ್ದಲ್ಲಿ ತಿಳಿಸುವಿರಾ??? ನೀವು ನಡೆಸುವ ಸಭೆಗಳಲ್ಲಿ ಈ ವಿಚಾರ ಚರ್ಚೆಗೆ ಬರುವುದಿಲ್ಲವೇ? 

   ಪ್ರಕಟಿಸಿರುವ ಈ ಪತ್ರವನ್ನು ತುಮಕೂರು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಇಲಾಖೆಯ ಜೆಡಿ ಪ್ಲಾನಿಂಗ್ ನೀಡಿರುವುದು ಬಿಟ್ಟರೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.