5th December 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯ ಸರ್ಕಾರದ ಆಯವ್ಯಯ 2020-21 ರಲ್ಲಿ 253 ನೇ ವಿಷಯವಾಗಿ ರಾಜ್ಯದಲ್ಲಿ 25000 ಕ್ಕೂ ಹೆಚ್ಚು ಐತಿಹಾಸಿಕ ಮಹತ್ವವುಳ್ಳ ದೇವಾಸ್ಥಾನಗಳು, ಪ್ರಾಚೀನ ಸ್ಥಳಗಳು, ಸ್ಮಾರಕಗಳಿದ್ದು, ಇವುಗಳನ್ನು ಹಂತಹಂತವಾಗಿ ಸಂರಕ್ಷಿಸಿ ಪುನರುಜ್ಜೀವನಗೊಳಿಸಲು ಸಂರಕ್ಷಣಾ’ ಯೋಜನೆಯನ್ನು ಜಾರಿಗೆ ತರಲಾಗುವುದು.

   ಈ ಸಾಲಿನ ಆಯವ್ಯಯದಲ್ಲಿ ಇಲಾಖಾವಾರು ಯೋಜನೆಗಳನ್ನು ಪ್ರಕಟಿಸಿಲ್ಲವಾದರೂ ಈ ಯೋಜನೆಯ ಕನಸುಗಾರ ಶ್ರೀ ಸಿ.ಟಿ.ರವಿಯವರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ಜಾರಿಗೊಳಿಸುವುದು ಅತ್ಯಂತ ಸೂಕ್ತವಾಗಿದೆ. ಮುಜರಾಯಿ ಇಲಾಖೆಯ ಸಹಭಾಗಿತ್ವವೂ ಅಗತ್ಯವಾಗಿದೆ.

   ಮೊದಲು ಯಾವ ಗ್ರಾಮದಲ್ಲಿ ಏನೇನು ಮಹತ್ವ ಪೂರ್ಣವಾದ ಇತಿಹಾಸವುಳ್ಳ ಸ್ಮಾರಕವಿದೆಯೋ ಅದನ್ನು ಗುರುತಿಸಿ ಡೇಟಾಬೇಸ್ ಮಾಡುವುದು ಸೂಕ್ತವಾಗಿದೆ. ಕೇಂದ್ರ ಸರ್ಕಾರದ ಆಯವ್ಯಯ 2020-21 ರಲ್ಲಿ ಪ್ರಕಟಿಸಿರುವ ಪಿಪಿಪಿ ಮಾದರಿಯ ಡೇಟಾಪಾರ್ಕ್’ ಯೋಜನೆಯಡಿ  ಜಾರಿಗೊಳಿಸಿದಲ್ಲಿ ಕೇಂದ್ರದಿಂದ ಆರ್ಥಿಕ ನೆರವು ಪಡೆಯಬಹುದಾಗಿದೆ.

   ಜೊತೆಗೆ ಗ್ರಾಮ ಕರ್ನಾಟಕದ ತಿರುಳು ಇಡೀ ವಿಶ್ವಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷೆ ಯೋಜನೆಯೂ ಆಗಲಿದೆ. ಸಾವಿರಾರು ಜನ ಇವುಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ, ಅಂಥವರಿಗೆ ಒಂದು ವೇದಿಕೆಯೂ ಆಗಲಿದೆ. ಸಾವಿರಾರು ನಿರುದ್ಯೋಗಿಗಳಿಗೆ ‘ಸ್ವಯಂ ಉದ್ಯೋಗ ಕಲ್ಪಿಸುವ’ ಅವಕಾಶಗಳು ಇವೆ.

  ಲಕ್ಷಾಂತರ ಎಕರೆ ಭೂಮಿಯ ಇ- ಸ್ಕೆಚ್ ಮಾಡಿ, ಒತ್ತುವರಿ ತೆರವುಗೊಳಿಸಿದರೆ ಕೋಟಿ, ಕೋಟಿ ರೂಗಳ ಆಸ್ತಿಗಳನ್ನು ರಕ್ಷಸಿದ ಕೀರ್ತಿಯೂ ಬರಲಿದೆ. ಒಂದು ಸಂರಕ್ಷಣಾ – ಆಪ್’ ತಯಾರಿಸಿ ಪ್ರೌಢಶಾಲಾ ವಿದ್ಯಾರ್ಥಿಗಳು, ಪಿಯು, ಪದವಿ, ಇಂಜಿನಿಯರಿಂಗ್,  ಹೀಗೆ ಪಿಜಿ ವಿದ್ಯಾರ್ಥಿಗಳವರಿಗೆ ಪ್ರಾಜೆಕ್ಟ್ ವರ್ಕ್ಸ್ ಮತ್ತು ಆಕ್ಟಿವಿಟಿ ಪಾಯಿಂಟ್ಸ್’ ಆಗಿಯೂ ಪರಿಗಣಿಸಿದಲ್ಲಿ ಆಯಾ ಗ್ರಾಮದ ವಿದ್ಯಾರ್ಥಿಗಳು ಆಯಾ ಗ್ರಾಮದ ತಾಜಾ ಮಾಹಿತಿಯನ್ನು ಸಂಗ್ರಹಿಸ ಬಹುದಾಗಿದೆ.

   ರಾಜ್ಯ ಸರ್ಕಾರದ ಆಯವ್ಯಯ 2020-21 ರಲ್ಲಿ ಪ್ರಕಟಿಸಿರುವ 270 ನೇ ವಿಷಯದ ಗ್ರಾಮ-1’ ಮುಖಾಂತರ ಮಾಹಿತಿ ಮತ್ತು ಸಂರಕ್ಷಣಾ ಯೋಜನೆಯ ನಿರ್ವಹಣೆ ನೀಡುವುದು ಸೂಕ್ತವಾಗಿದೆ.

  ಮಾನ್ಯ ಮುಖ್ಯ ಮಂತ್ರಿಯವರು ಹಾಗೂ ಯೋಜನಾ ಇಲಾಖಾ ಸಚಿವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಪ್ರವಾಸೋಧ್ಯಮ ಸಚಿವರಾದ, ಶ್ರೀ ಸಿ.ಟಿ.ರವಿಯವರು, ಮುಜಾರಾಯಿ ಸಚಿವರಾದ ಶ್ರೀ ಶ್ರೀನಿವಾಸ ಪೂಜಾರಿರವರು, ಮಾನ್ಯ ಉಪ ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವತ್‌ನಾರಾಯಣರವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರು, ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ್‌ರವರು, ಪೌರಾಡಳಿತ ಸಚಿವರಾದ ಶ್ರೀ ನಾರಾಯಣಗೌಡರವರು, ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಎಸ್.ಸುರೇಶ್‌ಕುಮಾರ್‌ರವರ ಖಾತೆಗಳ ಜಂಟಿ ಸಹಭಾಗಿತ್ವದಿಂದ ಶೇ 100 ಅನುಷ್ಠಾನ ಸಾಧ್ಯವಿದೆ.