TUMAKURU:SHAKTHIPEETA FOUNDATION
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಜೊತೆಗೆ ಸಮಾಲೋಚನೆ
ದಿನಾಂಕ:03.03.2020 ರಂದು ತುಮಕೂರು ಸ್ಮಾರ್ಟ್ ಸಿಟಿಗೆ ಭೇಟಿ ನೀಡಿದ್ದಾಗ 15 ದಿವಸದಲ್ಲಿ ನೂರು ಜಿ.ಐ.ಎಸ್. ಲೇಯರ್‍ಸ್ ಮಾಡುವುದಾಗಿ ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ತಿಳಿಸಿದ್ದರು. ೧೫ ದಿವಸಕ್ಕೆ (18.03.2020 ) ಸರಿಯಾಗಿ ತುಮಕೂರು ಸ್ಮಾರ್ಟ್ ಸಿಟಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಪುನಃ ಸಮಯ ತೆಗೆದು ಕೊಂಡು ಮಾರ್ಚ್ 31 ರೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ದಿನಾಂಕ:10.03.2020 ರಂದು ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ. ಮತ್ತು ಪಾಲಿಕೆ ಆಯುಕ್ತರಾದ ಶ್ರೀ ಭೂಬಾಲನ್ ಮತ್ತು ಟೂಡಾ ಆಯುಕ್ತ ಶ್ರೀ ಯೋಗಾನಂದ್‌ರವರ ಸಭೆ ಕರೆದು ಒಂದು ವಾರದೊಳಗೆ ಕೆಳಕಂಡ ಮಾಹಿತಿ ನೀಡಲು ಸೂಚಿಸಿದ್ದರು.
ಒಂದೇ ಯೋಜನೆಗೆ ಹಲವಾರು ಕೋಟಿ ವ್ಯಯ ಮಾಡಿರುವ ಅನುಮಾನವಿದೆ, ನಿಖರವಾದ ಮಾಹಿತಿ ನೀಡಲು ನಾನು ಕೇಳಿದಾಗ ನೀಡಿದ ಉತ್ತರ.
1.ತುಮಕೂರು ನಗರಸಭೆಯಿದ್ದಾಗ ಈಗಾಗಲೇ ಜಿಐಎಸ್ ಬೇಸ್ ಮ್ಯಾಪ್ ಮಾಡಿಸಲು ಹಣ ವ್ಯಯಿಸದರೂ ಸಾಪ್ಟ್‌ವೇರ್ ಸರಿಯಿಲ್ಲ ಎಂದು ಮೂಲೆಗೆ ಎಸೆದಿದ್ದಾರೆ ನಿಮಗೆ ಗೊತ್ತೇ?
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಗೊತ್ತಿಲ್ಲ ಸಾರ್
2. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ರೂ ೨ ಕೋಟಿ ವೆಚ್ಚದಲ್ಲಿ ಡ್ರೋಣ್ ಸಮೀಕ್ಷೆ ಮಾಡಿಸಿದೆ ಮಾಹಿತಿ ಇದೇಯೇ?
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಪೂರ್ಣ ಮಾಹಿತಿ ಇಲ್ಲ ಸಾರ್
3. ಪುನಃ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರದ ವ್ಯಾಪ್ತಿಯ ಲೇಯರ್‌ಗಾಗಿ ರೂ ೧ ಕೋಟಿ ಯೋಜನೆ ರೂಪಿಸಿದೆ.
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಹೌದು ಸಾರ್ ದಿನಾಂಕ:31.03.2020 ರಂದು ಕನಿಷ್ಟ 50 ಲೇಯರ್ ಪೂರ್ಣ ಗೊಳಿಸುತ್ತೇವೆ ಸಾರ್.
4. ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ಜಿ.ಐಎಸ್ ಬೇಸ್ ಮ್ಯಾಪ್ ಮಾಡಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದೆ. (ವೆಚ್ಚ ಎಷ್ಟು)
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಗೊತ್ತಿಲ್ಲ ಸಾರ್
5. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಜಿಐಎಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. (ವೆಚ್ಚ ಎಷ್ಟು)
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಗೊತ್ತಿಲ್ಲ ಸಾರ್
6.ತುಮಕೂರು ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ನಿರ್ಮಿಸುತ್ತಿದೆ. (ವೆಚ್ಚ ಎಷ್ಟು)
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಗೊತ್ತಿಲ್ಲ ಸಾರ್
7.ಕರ್ನಾಟಕ ನಗರ ನೀರು ಸರಬರಾಜು ಮಂಡಳಿ 24/7 ಕುಡಿಯುವ ನೀರಿನ ಯೋಜನೆಗೆ ಮತ್ತು ಒಳಚರ0 ಡಿ ಯೋಜನೆಗೆ ಜಿಐಎಸ್ ಆಧಾರಿತ ಸಮೀಕ್ಷೆ ನಡೆಸಿದೆ. (ವೆಚ್ಚ ಎಷ್ಟು)
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಗೊತ್ತಿಲ್ಲ ಸಾರ್
8. ಈ ಎಲ್ಲಾ ಯೋಜನೆಗಳಿಗೆ ಖರ್ಚು ಮಾಡಿದ ಹಣ ಮತ್ತು ಒಂದೇ ಕೆಲಸಕ್ಕೆ ಪದೇ, ಪದೇ ಹಣ ವ್ಯಯ ಮಾಡಲಾಗಿದೆಯೇ ಅಥವಾ ಸರಿಯಾಗಿದೆಯೇ
ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಅಶ್ವಿನ್ : ಗೊತ್ತಿಲ್ಲ ಸಾರ್
ನೋಡಿ ಸ್ಮಾರ್ಟ್ ಸಿಟಿ ಮಾರ್ಗದರ್ಶಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕನ್ವರ್ಜೆನ್ಸ್ ಮಾಡಲು ಎಲ್ಲಾ ಇಲಾಖೆಗಳ ಸಮನ್ವಯತೆಯೊಂದಿಗೆ ಕೆಲಸ ಮಾಡಲು ತಿಳಿಸಿದ್ದರೂ ಈ ರೀತಿಯಾದರೇ ಹೇಗೆ ಎಂಬುದು ಒಂದು ಯಕ್ಷ ಪ್ರಶ್ನೆ.
ಆದರೂ ಪರವಾಗಿಲ್ಲ ಅವರು ಹೇಳಿದ ದಿನವೇ ಭೇಟಿ ನೀಡಿ ಪರಿಶೀಲಿಸಿಲಾಗುವುದು. ಈ ಕೆಳಕಂಡ ಸಮಿತಿಗಳು ನಡೆಸುವ ಸಭೆಯಲ್ಲಿ ಈ ವಿಚಾರಗಳು ಚರ್ಚೆಗೆ ಬರುವುದಿಲ್ಲವೇ ಎಂಬುದು ಒಂದು ರಹಸ್ಯ?
- ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ.
- ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ
- ತುಮಕೂರು ಮಹಾನಗರ ಪಾಲಿಕೆ.
- ಶಾಸಕರ ಪ್ರಗತಿ ಪರಿಶೀಲನೆ ಸಭೆ.
- ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಸಭೆ.
- ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಡೆಸುವ ಸಭೆ.
- ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯ ಸಭೆ.
- ಕೆಯುಐಡಿಎಫ್‌ಸಿ ನಡೆಸುವ ಸಭೆ.
- ಸಂಸದರ ಅಧ್ಯಕ್ಷತೆಯ ದಿಶಾ ಸಭೆ. (ಈ ಸಭೆಯಲ್ಲಿ ಮಾತ್ರ ನಿಯಮ ಪ್ರಕಾರ ಚರ್ಚಿಸಲಾಗಿದೆ)