12th September 2024
Share

TUMAKURU:SHAKTHIPEETA FOUNDATION

  ಕೊರೊನಾ ವೈರಸ್‌ನ ಭಯದಿಂದ ಕೂಲಿ ಕಾರ್ಮಿಕರು, ಯಂತ್ರೋಪಕರಣಗಳು ಹೀಗೆ ಎಲ್ಲವೂ ದೊರೆಯುವುದು ಕಷ್ಟವಾಗಿದೆ. ಎಲ್ಲಾ ವರ್ಗದ ಜನತೆ ಗುಂಪು ಸೇರಿ ಯಾವುದೇ ಸರ್ಕಾರಿ ಕಾಮಗಾರಿ ನಡೆಸಲು ಅಡಚಣೆಯಾಗಿದೆ.

  ಆದ್ದರಿಂದ ವಾರ್ಷಿಕ ಆರ್ಥಿಕ ವರ್ಷವನ್ನು ಮಾರ್ಚ್ 31 ರ ಬದಲಿಗೆ  ಒಂದೆರಡು ತಿಂಗಳ ಕಾಲ ಮುಂದೂಡಿ, ಸರ್ಕಾರಕ್ಕೂ ಆರ್ಥಿಕ ಹೊರೆ ಸರದೂಗಿಸಲು ಅನೂಕೂಲವಾಗಲಿದೆ. ಆ ವರ್ಗದ ಜನತೆಯೂ ಕೊರೊನಾ ವೈರಸ್‌ನಿಂದ ದೂರ ಸರಿಯಲಿ.

  ಕರ್ನಾಟಕದಲ್ಲಿ ಬೇರೆ ಬೇರೆ ರಾಜ್ಯಗಳ ಕೂಲಿಕಾರ್ಮಿಕರೇ ಹೆಚ್ಚು. ಇವರುಗಳನ್ನು ಸಹ ಅವರವರ ರಾಜ್ಯಗಳಿಗೆ ಕಳುಹಿಸುವುದು ಸೂಕ್ತವಾಗಿದೆ. ಬೇರೆ ದೇಶಗಳಿಂದ ಬಂದಿರುವ ಕೂಲಿಕಾರ್ಮಿಕ ಜನರ ಬಗ್ಗೆ ಬಹಳ ಎಚ್ಚರದಿಂದ ಇರಬೇಕಿದೆ.

   ಈ ಸಮಯದಲ್ಲಿ ಅಧಿಕಾರಿಗಳು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂಗಡ ಪತ್ರಗಳ ಯೋಜನೆಗಳ ರೂಪುರೇಷೆಗಳ ಬಗ್ಗೆ ಅಧ್ಯಯನ ಮಾಡಲಿ. ಮನೆಯಲ್ಲಿಯೇ ಕುಳಿತು ಡಿಜಿಟಲ್ ಮೂಲಕ ವ್ಯವಹರಿಸಲಿ.