TUMAKURU.
ಇಡೀ ವಿಶ್ವದ ಜನತೆ ಪ್ರಾರ್ಥಿಸುವುದು ಓ ದೇವರೇ ಕೊರೊನಾದಿಂದ ನಮ್ಮನ್ನು ರಕ್ಷಿಸು, ಇಲ್ಲಿ ಜಾತಿಯಿಲ್ಲ, ಪಕ್ಷಬೇದವಿಲ್ಲ, ವಯಸ್ಸಿನ ಅಂತರವಿಲ್ಲ, ಬಡವ ಶ್ರೀಮಂತ ಎಂಬ ಬೇದ ಬಾವವಿಲ್ಲ. ಎನಪ್ಪಾ ಇದು ಪ್ರಪಂಚದ ಎಲ್ಲಾ ವರ್ಗದ ಜನತೆಯೂ ದಿಡೀರ್ ನನ್ನ ಭಕ್ತರಾಗಿದ್ದಾರೆ ಎಂದು ಶಕ್ತಿದೇವತೆಗೂ/ದೇವರಿಗೂ ಆಶ್ಚರ್ಯವಾಗಬಹುದು
ವಿಜ್ಞಾನ ತಂತ್ರಜ್ಞಾನ ಎಲ್ಲವೂ ನಿಶ್ಯಬ್ಧ, ಮೌನ, ಏನಾದರೂ ಮಾಡಿ ಕೊರೊನಾ ವೈರಸ್‌ಗೆ ಔಷಧಿ ಕಂಡು ಹಿಡಿಯಲೇ ಬೇಕೆಂದು ವಿಶ್ವದ ಎಲ್ಲಾ ದೇಶದ ಪರಿಣಿತರು ತವಕ ಪಡುತ್ತಿದ್ದಾರೆ. ಬಹುಷಃ ಆ ವರ್ಗ ಹಗಲು ರಾತ್ರಿ ನಿದ್ದೆ ಮಾಡದೇ ಶ್ರಮಿಸುತ್ತಿದ್ದಾರೆ.
ಆ ಪುಣ್ಯಾತ್ಮ ಯಾರಾಗಲಿದ್ದಾರೆ, ಯಾವ ದೇಶಕ್ಕೆ ಆ ಕೀರ್ತಿ ಬರಲಿದೆಯೋ ಎಂದು ಎಲ್ಲಾ ದೇಶದ ಆಡಳಿತ ನಡೆಸುವವರು ಕಣ್ಣು ಮಿಟುಕಿಸದೆ ಕಾಯುತ್ತಿದ್ದಾರೆ. ಇದು ಒಂದು ರೀತಿ ಅನಧಿಕೃತವಾಗಿ ‘ಇಂಡಿಯಾ-ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್‌ಗಿಂತಲೂ’ ಭಾರಿ ಸ್ಪರ್ಧೆ ನಡೆಯುತ್ತಿದೆ.
ಅತ್ಯಂತ ಕಡಿಮೆ ಸಮಯದಲ್ಲಿ ದೇಶದ ಪ್ರತಿಯೊಬ್ಬರಿಗೂ ಈ ವೈರಾಣುವಿನ ಮಹತ್ವ ತಿಳಿದಿದ್ದು ಪ್ರಧಾನಿ ಮೋದಿಯವರ ಒಂದು ಕರೆ. ‘ಜನತಾ ಕರ್ಫ್ಯೂವಿನ’ ಯಶಸ್ಸು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಿಗೂ ಸಲ್ಲಬೇಕು. ಮೊಬೈಲ್ ಕ್ರಾಂತಿಯೂ ಒಳ್ಳೆಯ ಸಾಧನಾವಾಗಿದೆ.
ದೇಶದ ಯಾವುದೇ ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಎಲ್ಲರೂ ಸಹ ಒಂದೇ ಯೋಚನೆ ಮಾಡುತ್ತಿದ್ದಾರೆ. ಕೇರಳದಲ್ಲಿನ ಕಮ್ಯುನಿಸ್ಟ್ ಸರ್ಕಾರ ಕೈಗೊಂಡಿರುವ ಕ್ರಮಗಳು ಅದ್ಭುತವಾಗಿವೆ.
ನಮ್ಮ ರಾಜ್ಯ ಸರ್ಕಾರ ಇಂದು ಪ್ರಕಟಿಸಿರುವಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮತ್ತು ಬಾಲೂಬ್ರೂಯಿ ಅತಿಥಿ ಗೃಹ ಕೊರೊನಾ ವಾರ್ ರೂಮ್ ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.
ಸಾರ್ವಜನಿಕರು ಮತ್ತು ಪರಿಣಿತರು ಸರ್ಕಾರಕ್ಕೆ ನೀಡುವ ಸಲಹೆಗಳಿಗಾಗಿ ಒಂದು ವಿಭಾಗವನ್ನು ವಾರ್ ರೂಮ್‌ನಲ್ಲಿ ತೆರೆಯುವುದು ಅಗತ್ಯವಾಗಿದೆ.