22nd December 2024
Share

TUMAKURU : SHAKTHIPEETA FOUNDATION

  ಕೊರೊನಾ ಮೂರನೇ ಹಂತ ದೇಶಾಧ್ಯಾಂತ ಎಲ್ಲರ ನಿದ್ದೆ ಕೆಡಿಸಿದೆ, ದೇಶದ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಮುಂದಿನ ಹದಿನೈದು ದಿವಸ ಸಂಬಳ ಸಹಿತ ರಜಾ ಘೋಶಿಸಿ, ಸರ್ಕಾರಿ ನೌಕರರು, ಅಧಿಕಾರಿಗಳು ಅವರ ಸ್ವಂತ ಗ್ರಾಮದಲ್ಲಿ, ಸಂಬಂಧಿಕರ ಗ್ರಾಮಗಳಲ್ಲಿ, ಸ್ನೇಹಿತರ ಗ್ರಾಮಗಳಲ್ಲಿ ಹೀಗೆ ಅವರಿಗೆ ಆಸಕ್ತಿ ಇರುವ ಗ್ರಾಮಗಳಲ್ಲಿ ವಾಸಿಸಲಿ, ಊರಿಗೆ ಹೋಗುವ ಮುನ್ನ ಪರೀಕ್ಷೆಗೆ ಒಳಪಡಿಸಿ.

  ಅವರು ಇರಲು ಇಚ್ಚಿಸುವ ಗ್ರಾಮಗಳಲ್ಲಿನ ಜಿಐಎಸ್ ಆಧಾರಿತ ಡೇಟಾವನ್ನು ಅಫ್‌ಲೋಡ್ ಮಾಡಲು ಆಪ್ ನೀಡಿ, ಆಯಾ ಗ್ರಾಮದಲ್ಲಿ ಎಲ್ಲೆಲ್ಲಿ ಜಲಸಂಗ್ರಹಾಗಾರ ಮಾಡಬಹುದು, ಎಲ್ಲೆಲ್ಲಿ ಹೊಸದಾಗಿ ಯಾವ ಗಿಡ ಹಾಕಬಹುದು ಎಂಬ ಬಗ್ಗೆ ನಿಖರವಾದ ಮಾಹಿತಿ ಸಂಗ್ರಹಿಸಲಿ. ಮಿಷನ್ ಅಂತ್ಯೋದಯ, ಅಟಲ್ ಭೂಜಲ್, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ. ಪಾರಂಪರಿಕ ಸ್ಮಾರಕಗಳು, ವಸತಿ ರಹಿತರು, ಯಾವ ಜಾಗದಲ್ಲಿ ನಿವೇಶನ ನೀಡಬಹುದು, ಹೀಗೆ ಅಗತ್ಯವಿರುವ ಎಲ್ಲಾ ಡೇಟಾಗಳ ಸಂಗ್ರಹವೂ ಒಂದು ಉತ್ತಮವಾದ ಕೆಲಸವಾಗಲಿದೆ.

  ಮುಂದೆ ಆಯಾ ಸರ್ಕಾರಿ ನೌಕರರು ಆಯಾ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಶ್ರಮಿಸಲು, ಗ್ರಾಮಗಳ ಅನುಭವವೂ ಆಗಲಿದೆ, ಕೊರೊನಾದಿಂದ ದೂರ ಉಳಿದು ಗ್ರಾಮಗಳ ಗತಕಾಲದ ಅನುಭವವನ್ನು ಸವಿಯಲಿ.

  ವೃದ್ಧಾಶ್ರಮಗಳಂತಿರುವ ಗ್ರಾಮಗಳಲ್ಲಿನ ಜನತೆಗೆ ಖುಷಿಯಾಗಲಿದೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಎಲ್ಲಾ ಸೇರಿ ಸಂಭ್ರಮ ಆಚರಿಸಲಿ.