ಕೊರೊನಾ ಮಹಾಮಾರಿಯ ದಿಗ್ಬಂದನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬೇರೆಯವರನ್ನು ನಂಬಿ ಕುಳಿತು ಕೊಳ್ಳುವ ಹಾಗಿಲ್ಲ, ಅತಿವೃಷ್ಠಿಯಾಗಿದ್ದಾಗ ಒಬ್ಬರೇ ಹೋರಾಟ ಮಾಡಿದ್ದರು. ಈಗ ಇನ್ನೂ ಸಾಲದು ಇಕ್ಕಟ್ಟಿಗೆ ಸಿಲುಕಿಸುವ ಸ್ಥಿತಿ ಬಂದೊದಗಲಿದೆ, ದಯವಿಟ್ಟು ಎಚ್ಚರವಾಗಿ ಸ್ವಾಮಿ, ನೀವೇ ಅಲ್ಲ ಸಚಿವರುಗಳಾದ ಶ್ರೀ ರಾಮಲು, ಶ್ರೀ ಸುಧಾಕರ್ ಮತ್ತು ಶ್ರೀ ಬೊಮ್ಮಾಯಿಯವರು ಕಾರಣೀ ಭೂತರಾಗುತ್ತಾರೆ.
ಮಾನ್ಯ ಶ್ರೀ ಹೆಚ್.ಕೆ.ಪಾಟೀಲ್‌ರವರು ಸದನದಲ್ಲಿ ಎತ್ತಿದ ವಿಚಾರಗಳು ಸರೀನಾ ಅಥವಾ ತಪ್ಪಾ?
ದಯವಿಟ್ಟು ಕ್ಷಣ, ಕ್ಷಣದ ಮಾಹಿತಿಯನ್ನು ರಾಜ್ಯದ ಜನತೆ ನೀಡಿ
- ವಿದೇಶದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಬಂದು ಇಳಿದಿರುವ ಪ್ರಯಾಣಿಕರು 43೦೦೦
- ಇದೂವರೆಗೂ ಪರಿಶೀಲನೆ ಮಾಡಿರುವುದು ಬರೀ 23೦೦೦.
- ವಿಳಾಸ ಸಿಗದೆ ಇರುವವರು 2೦೦೦೦.
- ಇದೂವರೆಗೂ ಹೋಂ ಕ್ವಾರಂಟೈನ್ ಮಾಡಿರುವುದು 5300 (ಇವರಲ್ಲೂ ಕೆಲವರು ಬೀದಿಗೆ ಬಂದಿದ್ದಾರೆ)
- ಬೆಂಗಳೂರು ಏರ್‌ಪೋರ್ಟ್ ಹೊರತು ಪಡಿಸಿ ರಾಜ್ಯದ ಇತರೆ ಏರ್‌ಪೋರ್ಟ್‌ಗಳಿಂದ ಬಂದಿರುವ ಪ್ರಯಾಣಿಕ ಮಾಹಿತಿ ಇದೆಯೇ?
- ವಿದೇಶದಿಂದ ಬಂದು ಬೇರೆ ರಾಜ್ಯದ ಏರ್‌ಪೋರ್ಟ್‌ಗಳಿಂದ ಇಳಿದು ರಾಜ್ಯಕ್ಕೆ ಬಂದಿರುವ ಪ್ರಯಾಣಿಕರ ಮಾಹಿತಿ ಇದೆಯೇ?
- ತಾವು ಘೋಷಣೆ ಮಾಡಿರುವ ರೂ 200 ಕೋಟಿ ಇದೂವರೆಗೂ ಬಿಡುಗಡೆ ಆಗಿಲ್ಲವಾ?
- ತಾವು ಈಗಾಗಲೇ ಘೋಷಣೆ ಮಾಡಿರುವ ಲ್ಯಾಬ್‌ಗಳು ಇದೂವರೆಗೂ ಕಾರ್ಯಾರಂಭ ಮಾಡಿಲ್ಲವಾ?
- ಮಾಸ್ಕ್, ಸ್ಯಾನಿಟೈಸರ್ ಸರಬರಾಜು ಇನ್ನೂ ಜಿಲ್ಲಾ ಮಟ್ಟಕ್ಕೆ ಏಕೆ ಆಗಿಲ್ಲ?
- ಕರ್ನಾಟಕ ರಾಜ್ಯಾದ್ಯಾಂತ ಲಾಕ್‌ಡೌನ್ ವಿಳಂಭ ಏಕೆ?